Wednesday, October 18, 2023

ಪೊಳಲಿ: ಬ್ರಹ್ಮಕಲಶೋತ್ಸವದ ಚಪ್ಪರ ಮಹೂರ್ತ

Must read

ಪೊಳಲಿ: ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಮಾ. 4 ರಿಂದ ಮಾ. 13ರ ವರೆಗೆ ನಡೆಯಲಿದ್ದು, ಪುನಃಪ್ರತಿಷ್ಠೆ,ಅಷ್ಟಬಂಧ , ನೂತನದ್ವಜಸ್ತಂಭ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಪೂರ್ವ ಭಾವಿಯಾಗಿ ಬೆಳಗ್ಗೆ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಬ್ರಹ್ಮ ಶ್ರೀ ವೇದಮೂರ್ತಿಪೊಳಲಿ ಸುಬ್ರಹಣ್ಯ ತಂತ್ರಿಗಳ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಚಪ್ಪರ ಮಹೂರ್ತ ನಡೆಯಿತು.

ಪ್ರಧಾನ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್ , ಕೆ.ರಾಮ್ ಭಟ್, ಆದರ್ಶ ಭಟ್ ಹಾಗೂ ವಿಷ್ಣುಮೂರ್ತಿ ನಟ್ಟೋಜ, ಮಾಧವ ಮಯ್ಯ ಮತ್ತು ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಅನುವಂಶಿಕ ಮೊಕ್ತೇಸರ ಉಳಿಪಾಡಿಗುತ್ತು ತಾರಾನಾಥ ಆಳ್ವ , ಅನುವಂಶಿಕ ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ಪದ್ಮನಾಭ ಭಟ್, ಅನಂತಪದ್ಮನಾಭ ಭಟ್, ಕಾರ್ಯನಿವಹಣಾಧಿಕಾರಿ ಪ್ರವೀಣ್ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಬಿ.ರಮಾನಾಥ ರೈ, ಬಿ. ನಾಗರಾಜ ಶೆಟ್ಟಿ, ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ತಾ. ಪಂ ಸದಸ್ಯ ಯಶವಂತ ಪೊಳಲಿ, ಶೆಡ್ಡೆ ಮಂಜುನಾಥ ಭಂಡಾರಿ, ಆಶಾಜ್ಯೋತಿ ರೈ, ಕೃಷ್ಣಕುಮಾರ್ ಪೂಂಜ ಅಮ್ಮುಂಜೆಗುತ್ತು, ಶಿವಪ್ರಸಾದ್ ಅಮ್ಮುಂಜೆಗುತ್ತು, ಜೀವರಾಜ್ ಶೆಟ್ಟಿ ಅಮ್ಮುಂಜೆಗುತ್ತು,ದೇವ್ ದಾಸ್ ಹೆಗ್ಡೆ ಅಮ್ಮುಂಜೆಗುತ್ತು,ಗಣೇಶ್‌ಶೆಟ್ಟಿ ಪರಾರಿ, ವೆಂಕಟೇಶ್ ನಾವಡ, ಸೇಸಪ್ಪ ಕೋಟ್ಯಾನ್ ಪಚಿನಡ್ಕ, ರಾಮ್ ದಾಸ್ ಕೋಟ್ಯಾನ್,ಸುಬ್ರಾಯ ಕಾರಂತ,ಚಂದ್ರಶೇಖರಭಂಡಾರಿ,ಚಂದ್ರಹಾಶ ಶೆಟ್ಟಿ ಮತ್ತುಭಕ್ತಾಧಿಗಳು ಉಪಸ್ಥಿತರಿದ್ದರು. ಪೂಜಾವಿಧಿ ವಿಧಾನಗಳು ನೆರವೇರಿದ ಬಳಿಕ ತಂತ್ರಿಗಳು ಸುಬ್ರಹಣ್ಯ ಕೆಲಸ ಕಾರ್ಯಗಳು ಯಾವುದೇ ವಿಘ್ಣವಿಲ್ಲದೆ ನಿರಾತಂಕವಾಗಿ ನಡೆಯಲಿ ಎಂದು ಪ್ರಾರ್ಥಿಸಿ ಪ್ರಸಾದವನ್ನು ಧನಂಜಯ ಗಂದಾಡಿ, ರಾಮಚಂದ್ರಭಟ್, ಶಿವಪ್ರಸಾದ್ ಅವರಿಗೆ ನೀಡಿದರು.

More articles

Latest article