ಬಂಟ್ವಾಳ: ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಅಪರ್ಣ ಆಳ್ವ ಎನ್ ಅವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಸಂಶೋಧನಾತ್ಮಕ ಮಹಾಪ್ರಬಂಧಕ್ಕೆ ಪಿಎಚ್.ಡಿ.ಡಾಕ್ಟರೇಟ್ ದೊರಕಿದೆ. ಮಂಗಳೂರು ವಿಶ್ವವಿದ್ಯಾನಿಯದ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕರಾದ ಡಾ. ಜೆರಾಲ್ಡ್ ಸಂತೋಷ್ ಡಿಸೋಜರವರ ಮಾರ್ಗದರ್ಶನದಲ್ಲಿ ಎ ಸ್ಟಡಿ ಆನ್ ಎಪೆಕ್ಟ್ಸ್‌ಆಫ್ ಯೋಗಿಕ್ ಪ್ರಾಕ್ಟೀಸಸ್ ಆನ್ ಸೆಲೆಕ್ಟೆಡ್ ಪರ್‌ಫಾರ್‌ಮೆನ್ಸ್ ವೆರಿಯೆಬಲ್ಸ್ ಆಪ್ ಹಾಕಿ ಆಂಡ್ ಬಾಸ್ಕೆಟ್ ಬಾಲ್ ಪ್ಲೇಯರ್‍ಸ್ ವಿಷಯದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದರು. ಇವರು ಶಿಕ್ಷಕ ಸಾಹಿತಿಯಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಪತ್ನಿಯಾಗಿದ್ದು, ಇವರು ಮೂಲತಃಕುಂಬ್ಳೆಯವರಾದ ನಿವೃತ ಶಿಕ್ಷಕ ಶಾಂತ ಆಳ್ವ ಮತ್ತು ಸುಭಾಷಿಣಿ ಆಳ್ವ ನೀಲಪ್ಪಾಡಿ ಇವರ ಪುತ್ರಿಯಾಗಿರುತ್ತಾರೆ.
