Wednesday, April 10, 2024

’ಧರ್ಮದ ಸಂರಕ್ಷಣೆಗೆ ಪ್ರತಿಯೊಬ್ಬರು ಪಾರ್ಥರಾಗಬೇಕಾಗಿದೆ’- ಒಡಿಯೂರು ಶ್ರೀ

ವಿಟ್ಲ: ಯುವ ಶಕ್ತಿಯ ಕಾರ್‍ಯ ಧರ್ಮ ಸಂರಕ್ಷಣೆಯ ಕಾರ್‍ಯವಾಗಿದೆ. ಧರ್ಮದ ಸಂರಕ್ಷಣೆಗೆ ಪ್ರತಿಯೊಬ್ಬರು ಪಾರ್ಥರಾಗಬೇಕಾಗಿದೆ. ದೇಶದ ಬೆಳವಣಿಗೆಯಲ್ಲಿ ಯುವಕರ ಪಾತ್ರ ಮಹತ್ವದಾಗಿದೆ. ಆಡಳಿತ ಮಾಡುವರಿಗೆ ತಿಳುವಳಿಕೆಯ ಅರಿವು ಇದ್ದಾಗ ಸಮಾಜ ಅಭಿವೃದ್ಧಿ ಕಾರಣವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಗುರುವಾರ ವಿಟ್ಲ ಡೊಂಬ ಹೆಗ್ಗಡೆ ಅರಸು ಮನೆತನದ ಪಾರ್ಥಂಪಾಡಿ ಚಾವಡಿಯ ಪಟ್ಟದ ದೈವ ಶ್ರೀ ಜಠಾಧಾರಿ ದೈವದ ದೈವಸ್ಥಾನ, ಶ್ರೀ ನಾಗ ಸಾನ್ನಿಧ್ಯ ಮತ್ತು ಗುಳಿಗನ (ರಾಜನ್ ದೈವ) ಕಟ್ಟೆಗಳು ಸ್ಥಾನ ಪ್ರದಾನ, ಪುನಃಪ್ರತಿಷ್ಠೆ ಮತ್ತು ಮೈಮೆಯ ಸಂದರ್ಭ ನಡೆದ ಧಾರ್‍ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಾಣಿಲ ಶ್ರೀಧಾಮ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ ಜಾತಿಯ ನಡುವೆ ನೀತಿಯನ್ನು ಕಟ್ಟುವ ಕಾರ್‍ಯವಾಗಬೇಕು. ಅರಸರ ಆದರ್ಶಗಳನ್ನು ಮುಂದಿನ ಜನಾಂಗ ತಿಳಿಸಬೇಕು. ದೈವಾರಾಧನೆಯಿಂದ ಆರಾಧನೆಯಿಂದ ಕೀರ್ತಿ ಗೌರವ ಪ್ರಾಪ್ತಿಯಾಗುತ್ತದೆ ಎಂದರು.
ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಿ ಇತಿಹಾಸದಲ್ಲಿ ಕಳೆದು ಹೋದ ಕ್ಷೇತ್ರಗಳು ಮತ್ತೆ ಎದ್ದು ನಿಲ್ಲುತ್ತಿರುವುದು ಉತ್ತಮ ವಿಚಾರ. ವಿಟ್ಲ ಸೀಮೆಯಲ್ಲಿ ಐತಿಹಾಸಿಕವಾಗಿದ್ದ ಸಂಪ್ರದಾಯ, ಶಿಷ್ಟಾಚಾರಗಳು ಇನ್ನೂ ಸಹ ಉಳಿದುಕೊಂಡಿವೆ ಎಂದರು.
ಬಾಳೆಕೋಡಿ ಶ್ರೀ ಶಿಲಾಂಜನ ಕ್ಷೇತ್ರದ ಶ್ರೀ ಡಾ. ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಿ ದೈವ ಭಯದ ಹಿಂದೆ ತತ್ವ ಪ್ರೇರಣೆಯಿದೆ. ಯಜಮಾನ ಪದ್ಧತಿಯಿಂದ ಧರ್ಮ ಸಂಸ್ಕೃತಿಯ ಜಾಗೃತಿಯಾಗಿದೆ. ಸಂಸ್ಕೃತಿಯ ಪುನರುತ್ಥಾನ ಅ ನಾವರಣವಾಗುತ್ತಿದೆ ಎಂದರು.
ತುಳುನಾಡ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಮಹೇಂದ್ರನಾಥ ಸಾಲೆತ್ತೂರು ಧಾರ್‍ಮಿಕ ಉಪನ್ಯಾಸ ನೀಡಿದರು. ವಿಟ್ಲ ಅರಮನೆಯ ವಿ.ಜನಾರ್ದನ ವರ್ಮ ಅರಸರು ಅಧ್ಯಕ್ಷತೆ ವಹಿಸಿದ್ದರು.
ರಾಧಾಕೃಷ್ಣ ಡಿ. ಶೆಟ್ಟಿ ಚೆಲ್ಲಡ್ಕ, ಕಂಬಾರು ದುರ್ಗಾಪರಮೇಶ್ವರೀ ದೇವಸ್ಥಾನದ ಬಾಡೂರು ಯಜಮಾನ ಕುಂಞಣ್ಣ ಭಂಡಾರಿ, ಜ್ಯೋತಿಷಿ ಕೆ.ಕೇಶವ ಭಟ್, ಜೀರ್ಣೋದ್ಧಾರ ಸಮಿತಿ ಕಾರ್‍ಯಾಧ್ಯಕ್ಷ ಬಾಬು ಕೆ. ವಿ., ಉಪಸ್ಥಿತರಿದ್ದರು.
ಕೃಷ್ಣಯ್ಯ ಕೆ. ವಿಟ್ಲ ಅರಮನೆ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಕಾರ್‍ಯ ನಿರೂಪಿದರು. ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಪ್ರಭಾಕರ ಶೆಟ್ಟಿ ವಂದಿಸಿದರು.

More from the blog

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಏ.10ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ…. ರಿಸಲ್ಟ್​ ಚೆಕ್ ಮಾಡೋದು ಹೇಗೆ?

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತಿದೆ. ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾದ ಹಿನ್ನಲೆ ನಾಳೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ನಾಳೆ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...