ವಿಟ್ಲ: ವಿಟ್ಲ ಪಾರ್ಥಂಪಾಡಿ ಶ್ರೀ ಜಠಾಧಾರಿ ಕ್ಷೇತ್ರದಲ್ಲಿ ಬುಧವಾರ ವೇ.ಮೂ. ರಘುರಾಮ ತಂತ್ರಿಗಳ ಮೂಲಕ ಬುಧವಾರ ಶ್ರೀ ನಾಗದೇವರ ಶಿಲೆಯ ಹಾಗೂ ಪಾರ್ಥಂಪಾಡಿ ದೈವದ ಪೀಠದ ಜಲಾಧಿವಾಸ ಕ್ರಿಯೆಗಳು, ಆಚಾರ್‍ಯವರಣ, ಸ್ಥಳಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತುಬಲಿ, ಖನನಾದಿ ಸಪ್ತಶುದ್ಧಿ, ಪ್ರಸಾದ ಬಲಿ, ಅಸ್ತ್ರಕಲಶ ಪೂಜಾಧಿ ಕ್ರಿಯೆ, ನಾಗ ಶಿಲೆ ಹಾಗೂ ದೈವಪೀಠಗಳ ಧ್ಯಾನಾಧಿವಾಸ ಕ್ರಿಯೆಗಳು ನಡೆದಿತ್ತು.
ಗುರವಾರ ಬೆಳಗ್ಗೆ ಗಣಪತಿ ಹೋಮ, ಪ್ರತಿಷ್ಠಾ ಹೋಮ ನಡೆಯಿತು. ಬಳಿಕ ಶ್ರೀ ಕ್ಷೇತ್ರದ ನಾಗ ದೇವರ ಪುನಃ ಪ್ರತಿಷ್ಠೆ ನಡೆಯಿತು. ಆ ಬಳಿಕ ಶ್ರೀ ಪಾರ್ಥಂಪಾಡಿ ಜಠಾಧಾರಿ ದೈವದ ಪುನಃ ಪ್ರತಿಷ್ಠೆ, ಬ್ರಹ್ಮಕಲಶ ಪೂಜೆ, ಕಲಶಾಧಿವಾಸ ಹೋಮ, ಆಶ್ಲೇಷ ಬಲಿ, ವಟು ಆರಾಧನೆ, ನಾಗದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು. ನಂತರ ಶ್ರೀ ಪಾರ್ಥಂಪಾಡಿ ದೈವಕ್ಕೆ ಬ್ರಹ್ಮಕಲಶಾಭಿಷೇಕ, ಪೂಜಾ ತಂಬಿಲ ನಡೆದ ಬಳಿಕ ಪ್ರಸಾದ ವಿತರಣೆ ನಡೆಯಿತು. ಸಂಜೆ ೫ ಗಂಟೆಗೆ ಬಾಡೂರು ಕುಡಾಲು ಮೇರ್ಕಳದಿಂದ ಆಗಮಿಸಿದ ಶ್ರೀ ಜಠಾಧಾರಿ ದೈವದ ಭಂಡಾರವನ್ನು ಉಕ್ಕುಡ ಕಟ್ಟೆಯಿಂದ ವಿಶೇಷ ಮೆರವಣಿಗೆಯ ಮೂಲಕ ಶ್ರೀ ಕ್ಷೇತ್ರಕ್ಕೆ ಸಾಗಿತು. ಶ್ರೀ ದೈವಕ್ಕೆ ನವಕ ಅಭಿಷೇಕ, ತಂಬಿಲ, ಪ್ರಾರ್ಥನೆ, ಅನ್ನ ಸಂತರ್ಪಣೆ ನಡೆಯಿತು.


