Wednesday, October 25, 2023

ಬಡವರು ಉಳಿತಾಯದ ಜೊತೆ ಸ್ವಾಭಿಮಾನದ ಬದುಕು ನಡೆಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಣ: ಡಾ| ಎಚ್.ಎಲ್.ಮಂಜುನಾಥ್

Must read

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ.) ಬಂಟ್ವಾಳ ತಾಲೂಕು ಇದರ ಪ್ರಗತಿ ಬಂಧು/ ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭ ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|ಎಲ್ .ಎಚ್.ಮಂಜುನಾಥ್  ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮಾಭಿವೃದ್ದಿಯ ಮೂಲಕ ಮಹಿಳೆಯರಿಗೆ ಆರ್ಥಿಕ ಶಕ್ತಿಯನ್ನು ನೀಡಿದಾಗ ಮಹತ್ತರ ಬದಲಾವಣೆಗಳು ಆಗಲು ಸಾಧ್ಯವಾಯಿತು. ‌ಇದಕ್ಕೆ ಗ್ರಾಮಾಭಿವೃದ್ದಿಯ ಚಳುವಳಿಯೇ ಕಾರಣ.

ಯೋಜನೆಯ ಶಿಸ್ತು , ಅತ್ಯುತ್ತಮ ವ್ಯವಸ್ಥೆ , ನಡವಳಿಕೆಯ ಬಗ್ಗೆ ವಿಶೇಷವಾದ ಗೌರವ ಇದೆ. ಹದಿನಾಲ್ಕು ವರ್ಷಗಳಲ್ಲಿ ಸುಮಾರು 850 ಕೋಟಿ ಸಾಲ ಬ್ಯಾಂಕ್ ನೀಡಿದೆ.
ಹಣವನ್ನು ಸ್ವುಉದ್ಯೋಗ ಮಾಡಲು ಬಳಕೆ ಮಾಡಲು ವಿನಂತಿಸಿದರು. ಪ್ರತಿಯೊಬ್ಬರು ಜೀವನ ಭದ್ರತೆ ಮಾಡಿಕೊಳ್ಳಿ.
ಯೋಜನೆಯವರು ಸ್ವ ಉದ್ಯಮ ಮಾಡುವವರಿಗೆ ಮೂರು ಲಕ್ಷ ಸಾಲ ನೀಡುವ ವ್ಯವಸ್ಥೆ ಯನ್ನು ಸಿಡ್ ಬಿ ಸಂಸ್ಥೆ ಯಿಂದ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.
ಬಡವರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಸ್ವಸಹಾಯ ಚಳುವಳಿಯನ್ನು ಪೂಜ್ಯರು ಮಾಡಿದ್ದಾರೆ ಎಂದರು.

ಇವತ್ತು ಕೂಡಾ 30 ಸಾವಿರ ಕುಟುಂಬ ದ 155 ಕೋಟಿ ರೂ ಮೊತ್ತ ಚಾಲ್ತಿ ಖಾತೆಯಲ್ಲಿದೆ. ಈ ಬಾರಿ ಧರ್ಮಸ್ಥಳದಲ್ಲಿ ನಡೆಯುವ ಮಹಾಮಸ್ತಾಭಿಷೇಕದ ಸಂದರ್ಭದಲ್ಲಿ ಡಾ, ಡಿ.ವೀರೇಂದ್ರ ಹೆಗ್ಗಡೆ ಯವರು ಅಟೋ ರಿಕ್ಷಾ ತೆಗೆದುಕೊಳ್ಳುವ ಯೋಜನೆಯ ಸದಸ್ಯರಿಗೆ ಕ್ಷೇತ್ರದ ವತಿಯಿಂದ ಹತ್ತು ಸಾವಿರ ರೂ ನೀಡುವ ಘೋಷಣೆಯನ್ನು ಮಾಡಿದ್ದಾರೆ.
ಸ್ವಸಹಾಯ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಘೋಷಣೆ ಕೂಡಾ ಪೂಜ್ಯರು ಮಾಡಿದ್ದಾರೆ ಎಂದು ತಿಳಿಸಿದರು.
ಶಿಷ್ಯ ವೇತನ ಕಾರ್ಯಕ್ರಮದಿಂದಾಗಿ ಸ್ವಸಹಾಯ ಗುಂಪಿನ ಸದಸ್ಯರ ಮಕ್ಕಳ ಶೈಕ್ಷಣಿಕ ಸುಧಾರಣೆ ಸಾಧ್ಯವಾಗಿದೆ ಎಂದರು.
12 ಕೋಟಿ ವೆಚ್ಚದಲಿ 200 ಕೆರೆಗಳ ದುರಸ್ತಿ ಕಾರ್ಯ ಯೋಜನೆಯಿಂದ ನಡೆದಿದೆ ಎಂಬುದು ಸಂತೋಷದ ವಿಷಯ ಎಂದರು.

ದೇವರು, ಗುರು, ಹಿರಿಯರಿಗೆ ಗೌರವ ನೀಡುವ ಮತ್ತು ಮಕ್ಕಳಿಗೆ ಸಂಸ್ಕ್ರತಿ ಯನ್ನು ಮೂಡಿಸುವ ಕೆಲಸ ತಾಯಂದಿರು ಮಾಡಬೇಕು.
ಮಕ್ಕಳು ದಾರಿ ತಪ್ಪಲು ಮೊಬೈಲ್ ಮತ್ತು ಟಿ.ವಿ ಯೇ ಕಾರಣ ಎಂದು ಅವರು ಈ ಸಂದರ್ಭದಲ್ಲಿ ಹೇಳಿ ದರು.
ಮದ್ಯಪಾನ ಮತ್ತು ಡ್ರಗ್ಸ್ ಮಾಫಿಯಾ ಸಮಾಜವನ್ನು ಕೆಡಿಸುತ್ತಿದೆ, ಮಕ್ಕಳು ದುಶ್ಚಟಗಳಿಗೆ ಬೀಳದಂತೆ ತಾಯಂದಿರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಸದಾನಂದ ನಾವೂರ ವಹಿಸಿದ್ದರು.

ಶಾಸಕ ರಾಜೇಶ್ ನಾಯಕ್ ಮಾತನಾಡಿ ಹೊಸ ಚಿಂತನೆಗಳಿಂದ ಯೋಜನೆ ಬೆಳವಣಿಗೆಯನ್ನು ಸಾಧಿಸಿದೆ. ಇನ್ನಷ್ಟು ತಾಲೂಕಿನಲ್ಲಿ ಸಾಧನೆಯನ್ನು ಮಾಡಲು ಅವಕಾಶಗಳು ಒದಗಿ ಬರಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿದ್ದ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಾತನಾಡಿ ಯೋಜನೆಯ ಮೂಲಕ ತಾಲೂಕಿನ ಪ್ರತಿ ಮನೆಯನ್ನು ಬೆಳಗಿಸುವ ಕೆಲಸ ಮಾಡಿದ ಕ್ಷೇತ್ರಕ್ಕೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.
ಉಳಿತಾಯದ ಜೊತೆ ಸ್ವಾಭಿಮಾನದ ಬದುಕು ಯೋಜನೆ ನೀಡಿದೆ. ಸರಕಾರ ಮಾಡದಂತಹ ಅನೇಕ ಜನಪರ ಯೋಜನೆ ಕ್ಷೇತ್ರದ ಯೋಜನೆ ಮಾಡಿ ತೋರಿಸಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ನೆಲ್ಯಾಡಿ , ಜನಜಾಗ್ರತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಆಳ್ವ, ಕೇಂದ್ರ ಒಕ್ಕೂಟದ ಸಮಿತಿಯ ನೂತನ ಅದ್ಯಕ್ಷ ಮಾದವ ವಳವೂರು, ಉಪಸ್ಥಿತರಿದ್ದರು.
ಯೋಜನಾಧಿಕಾರಿ ಜಯಾನಂದ ಪಿ ವರದಿವಾಚಿಸಿದರು. ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ನೆಲ್ಯಾಡಿ ಸ್ವಾಗತಿಸಿ, ಮೇಲ್ವಿಚಾರಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಯೋಜನೆಯ ವಿವಿಧ ವೇತನಗಳನ್ನು ಫಲಾನುಭವಿಗಳಿಗೆ ನೀಡಲಾಯಿತು. ‌

More articles

Latest article