ಮುಂಬಯಿ: ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‌ನ ಸಹಾಯಕ ಪ್ರಬಂಧಕಿ ಆಗಿ ನಿವೃತ್ತರಾಗಿದ್ದ ಪುಷ್ಪಲತಾ ನಾರಾಯಣ್ (67.) ಅವರು ಇಂದಿಲ್ಲಿ (ಫೆ.05) ಮಂಗಳವಾರ ತೀವ್ರ ಹೃದಯಾಘಾತ ದಿಂದ ಕೋಕಿಲಾ ಬೆನ್ ಆಸ್ಪತ್ರೆಯಲ್ಲ್ಲಿ ನಿಧನರಾದರು.

ಅಂಧೇರಿ ಪೂರ್ವದ ಜೆವಿಎಲ್‌ಆರ್ ರಸ್ತೆಯಲ್ಲಿನ ಕಲ್ಪತರು ಎಸ್ಟೇಟ್‌ನ 4ಬಿ/34 ನಿವಾಸಿ ಆಗಿದ್ದ ಮೃತರಿಗೆ ಸಂಜೆ ವೇಳೆಗೆ ಹೃದಯನೋವು ಕಾಣುತ್ತಿದ್ದಂತೆಯೇ ಅಂಧೇರಿ ಪೂರ್ವದ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಾಗಿಸಲಾ ಗಿತ್ತು. ಮಡಿಕೇರಿ ಮೂಲತಃ ಮೃತರು ಒಂದು ಹೆಣ್ಣು ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ.