Friday, April 12, 2024

ಮಳೆರಾಯನ ಭೀಕರ ಪ್ರವಾಹಕ್ಕೆ ಒಳಗಾಗಿ ಮನೆ ಮಗಳ ಮದುವೆಗೆ ಆರ್ಥಿಕ ಅಡಚಣೆ ಎದುರಿಸುತ್ತಿದ್ದ ಕೊಡಗಿನ ಕುಟುಂಬಕ್ಕೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್® ವತಿಯಿಂದ ಧನ ಸಹಾಯ ಹಸ್ತಾಂತರ

ಬಂಟ್ವಾಳ: ಮಡಿಕೇರಿ ತಾಲೂಕಿನ ಮದೆ ಜೋಡುಪಾಲು 2ನೇ ಮೊಣ್ಣoಗಿರಿಯಲ್ಲಿ ತನ್ನ ಪತ್ನಿ ಕರ್ತ್ಯಾಯಿನಿ, 3 ಹೆಣ್ಣು ಮತ್ತು ಒಂದು ಗಂಡು ಮಕ್ಕಳ ಜೊತೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸುಂದರ ತಿಯನ್ ರವರು. ಮೊದಲ ಇಬ್ಬರು ಮಕ್ಕಳು ಅವಳಿ ಜವಳಿ, ರಮ್ಯಾ ಮತ್ತು ರಮ. ನಂತರದ ಕಾವ್ಯ ಮತ್ತು ಸುಕೇಶ್. ರಮ್ಯಾರವರಿಗೆ ಕಳೆದ 2 ವರುಷಗಳ ಹಿಂದೆ ಮದುವೆಯಾಗಿದ್ದು, ಕಾವ್ಯ ಇವಾಗ 10ನೇ ತರಗತಿ ಮತ್ತು ಸುಕೇಶ್ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ. ರಮರವರಿಗೆ ಕಳೆದ ಒಂದೂವರೆ ವರುಷಗಳ ಹಿಂದೆ ಮದುವೆ ಮಾಡಲು ನಿಶ್ಚಯ ಕೂಡ ಆಗಿದ್ದು, ಮಗಳ ಮದುವೆ ಸಂಭ್ರಮಕ್ಕೆ ಕಾಯುತ್ತಿದ್ದ ಸಮಯದಲ್ಲಿ ಯಾರು ಊಹಿಸದ ಮಳೆರಾಯನ ಪ್ರವಾಹವೇ ಕೊಡಗನ್ನು ಬೆಚ್ಚಿ ಬಿಳಿಸಿತ್ತು. ಹಲವು ಕುಟುಂಬಗಳು ತಮ್ಮ ಮನೆ ಮಠಗಳನ್ನು ಕಳೆದುಕೊಂಡರು ಅದರಲ್ಲಿ ಸುಂದರ್ ರವರ ಕುಟುಂಬವು ಒಂದು. ಪ್ರವಾಹದ ಸಮಯದಲ್ಲಿ 1 ತಿಂಗಳು ಸಂಪಾಜೆಯಲ್ಲಿ ಗಂಜಿ ಕೇಂದ್ರದಲ್ಲಿ ಇದ್ದು ತದ ನಂತರ ಸುಳ್ಯ ಆರಂತೋಡುನಲ್ಲಿ ಬಾಡಿಗೆ ಮನೆಯಲ್ಲಿ ಇದ್ದು ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದರೆ. ಪ್ರವಾಹದ ಹಾನಿ ನಷ್ಟಕ್ಕೆ ಸರಕಾರ ಅಲ್ಪ ಮಟ್ಟಿನ ಪರಿಹಾರ ನೀಡಿದರೂ ಅದರಿಂದಲೇ ಜೀವನ ಸಾಗಿಸಲು ಕಷ್ಟ. ಅಂತೂ ಮದುವೆ ನಿಶ್ಚಿಯವಾಗಿ ಆಗಲೇ ಒಂದೂವರೆ ವರುಷ ಆಯಿತು. ದೇವರು ಇದ್ದರೆ ಅಂತ ಮಗಳ ಮದುವೆಯನ್ನು ಆರಂತೋಡು ತಿಕ್ಕಿಲ್ ಸಭಾ ಭವನದಲ್ಲಿ ಇಂದು ಮಾಡುವುದೆಂದು ನಿರ್ಧರಿಸಿದ್ದರು. ಹಿರಿಮಗಳಿಗೆ ಮದುವೆ ಮಾಡಿ ಇನ್ನೆನೂ ಸಾಲ ಮಾಡಿಯಾದರೂ ಎರಡನೆಯ ಮಗಳ ಮದುವೆ ಮಾಡಬೇಕು ಅಂತ ಸಿದ್ದತೆಯ ಚಿಂತೆಯಲ್ಲಿ ಇರುವಾಗ ಪ್ರಕೃತಿ ವಿಕೋಪಕ್ಕೆ ಕನಸು ಕನಸಾಗಿಯೇ ಉಳಿಯಿತು. ಗಾಯದ ಮೇಲೆ ಬರೆ ಎಳೆದಂತೆ ಒಂದು ಕಡೆ ಮಗಳ ಮದುವೆಯ ಚಿಂತೆ ಇನ್ನೊಂದು ಕಡೆ ಮೊದಲ ಮಗಳ ಮದುವೆಗೆ ಮಾಡಿದ ಸಾಲದ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಸುಂದರ ತಿಯನ್ ರವರ ಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಮದುವೆಯ ಶುಭ ಘಳಿಗೆಯಲ್ಲಿ ರೂ. 15,000 ಚೆಕ್ ಅನ್ನು ಮದು ಮಗಳು ರಮರವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಸೇವಾ ಕಾರ್ಯಕರ್ತರು ಉಪಸ್ಥಿತರಿದ್ದರು.

More from the blog

ಸ್ವಿಮ್ಮಿಂಗ್​ ಪೂಲ್​ ನೀರಿಗೆ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

ಉಡುಪಿ‌: ಸ್ವಿಮ್ಮಿಂಗ್​ ಫೂಲ್​ನಲ್ಲಿ ಮುಳುಗಿ 4ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್​​ನಲ್ಲಿ ನಡೆದಿದೆ. ಉಡುಪಿ‌ಯ ಹೊಡೆ ಮೂಲದ ಮುಹಮ್ಮದ್ ಅರೀಝ್ ಮೃತ ವಿದ್ಯಾರ್ಥಿ. ದಾರುಸ್ಸಲಾಮ್...

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ : ನಿದ್ದೆಯಲ್ಲಿದ್ದ ಉಗ್ರರನ್ನು ಬಡಿದೆಬ್ಬಿಸಿದ ಎನ್ಐಎ

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಭರ್ಜರಿ ಕಾರ್ಯಾಚರಣೆ ನಡೆಸಿ, ಉಗ್ರರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ರಾಮೇಶ್ವರಂ ಕೆಫೆ ಬಾಂಬರ್‌ ಗ್ಯಾಂಗ್ ಬಂಧಿಸಲು NIA ಭರ್ಜರಿ ಬಲೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...

ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ"ದ ಅಂಗವಾಗಿ ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ...