ಮುಂಬಯಿ: ಧ್ವನಿ ಪ್ರತಿಷ್ಠಾನ ತನ್ನ ಸುಮಾರು ಮೂರುವರೆ ದಶಕಗಳ ಯಶಸ್ವಿ ಹೆಜ್ಜೆಗುರುತು ಮೂಡಿಸಿ 33ನೇ ವರ್ಷಾಚರಣೆಯ ವಿಶೇಷ ಸಂಭ್ರಮಿಸಿತು. ದುಬಾಯಿನ ಕಾನ್ಸುಲ್ ಜನರಲ್ ವಿಪುಲ್ ‘ರಂಗ ಸಿರಿ ಉತ್ಸವ-2019’ವನ್ನು ಉದ್ಘಾಟಿಸಿದರು.

ಗೌರವ ಅತಿಥಿಗಳಾಗಿ ಕನ್ನಡ ಚಲನ ಚಿತ್ರರಂಗದ ಹತ್ತು ಬಾರಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪಿ.ಶೇಷಾದ್ರಿ, ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಉಪಕುಲಪತಿ ಪ್ರೊ| ಎಂ.ವೆಂಕಟರಮಣ ಮತ್ತು ಕಾರ್ಯಕ್ರಮ ಪ್ರಾಯೋಜಕರಾ ದ ಗುಣಶೀಲ್ ಶೆಟ್ಟಿ, ಪ್ರವೀಣ್‌ ಕುಮಾರ್ ಶೆಟ್ಟಿ, ಹರೀಶ್ ಶೇರಿಗಾರ್ ಉಪಸ್ಥಿತರಿದ್ದು ‘ಧ್ವನಿ ಶ್ರೀರಂಗ’ ರಂಗ ಪ್ರಶಸ್ತಿಯನ್ನು ರಂಗಭೂಮಿ ತಪಸ್ವಿ ಗುಂಡಣ್ಣ ಸಿ.ಕೆ ಅವರಿಗೆ, ಕನ್ನಡ ರಂಗಭೂಮಿಗೆ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ 2018ನೇ ಸಾಲಿನ ಅಂತಾರಾಷ್ಟ್ರೀಯ ‘ಧ್ವನಿ ಪುರಸ್ಕಾರ’ವನ್ನು ಗೋಪಿಕಾ ಮಯ್ಯ ಅವರಿಗೆ ಪ್ರದಾನಿಸಿ ಗೌರವಿಸಿದರು. ಹಾಗೂ ವಿದೇಶಲ್ಲಿ ಕನ್ನಡ ಭಾಷೆಯನ್ನು ವೈಭವೀಕರಿಸಿ ಕನ್ನಡ ಭಾಷೆಯನ್ನು ಶ್ರೀಮಂತವಾಗಿರಿಸಿರುವ ಧ್ವನಿ ಪ್ರತಿಷ್ಠಾನಕ್ಕೆ ತಮ್ಮ ಮೆಚ್ಚುಗೆಯನ್ನು ಸಲ್ಲಿಸಿ ಶುಭವನ್ನು ಹಾರೈಸಿ ವಿಪುಲ್ ಅವರಿಗೆ ಪ್ರತಿಷ್ಠಾನದ ಪರವಾಗಿ ಸನ್ಮಾನಿಸಿ ಗೌರವಿಸಿದರು.

ಗುಂಡಣ್ಣ ಪ್ರಶಸ್ತಿ ಸ್ವೀಕರಿಸುತ್ತಾ ತಮ್ಮಕೃತಜ್ಞತೆ ಸಲ್ಲಿಸಿ ವಿದೇಶದ ಮಣ್ಣಿನಲ್ಲಿಕನ್ನಡರಂಗಭೂಮಿಯ ಪ್ರಯೋಗವನ್ನು ಹಲವಾರು ವರ್ಷಗಳಿಂದ ಶಿಸ್ತುಭದ್ಧವಾಗಿ ನಡೆಸಿಕೊಂಡು ಬರುತ್ತಿರುವಧ್ವನಿ ಪ್ರತಿಷ್ಠಾನಕ್ಕೆ ಶುಭವನ್ನು ಹಾರೈಸಿದರು.

ರಂಜನಿ ಕೃಷ್ಣಪ್ರಸಾದ್ ಮತ್ತು ಅಕ್ಷತಾ ಆಚಾರ್ಯ ಅವರ ಭರತನಾಟ್ಯದೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ರಮ್ಯ ಜಾಗಿರ್ದಾರ್ ಪ್ರಾರ್ಥನೆಗೈದರು. ಪ್ರಕಾಶ್‌ರಾವ್ ಪಯ್ಯಾರ್ ಸ್ವಾಗತಿಸಿದರು. ಶ್ವೇತಾ ನಾಡಿಗ್ ಮತ್ತು ಸಹನಾ ಕುಲಕರ್ಣಿ ಕಾರ್ಯಕ್ರಮ ನಿರೂಪಣೆಗೈದರು. ಲತಾ ಹೆಗ್ಡೆ ವಂದಾರ್ಪಣೆ ಸಲ್ಲಿಸಿದರು.

ವರ್ಷಾಚರಣೆ ಪ್ರಯುಕ್ತ ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಪ್ರಕಾಶ್‌ರಾವ್ ಪಯ್ಯಾರ್ ನಿರ್ದೆಶನದಲ್ಲಿ ಡಾ| ಎನ್.ಎಸ್ ಲಕ್ಷ್ಮೀ ನಾರಾಯಣ ಭಟ್ ಅವರಿಂದ ಕನ್ನಡ ಅನುವಾದಿತ ಸಂಸ್ಕೃತ ಮೂಲದ ‘ಮೃಚ್ಛಕಟಿಕ’ ನಾಟಕ ಪ್ರದರ್ಶಿಸಲ್ಪಟ್ಟಿತು. ಆರತಿ ಆಡಿಗ, ವಾಸು ಬಾಯರು, ಪ್ರಭಾಕರ್ ಕಾಮತ್, ನಾಗಭೂಷಣ್ ಕಶ್ಯಪ್, ಸಪ್ನಾಕಿರಣ್, ಅಶೋಕ್ ಅಂಚನ್, ರುದ್ರಯ್ಯ ನವೆಲಿ ಹಿರೆಮಠ್, ಆದೇಶ್ ಹಾಸನ, ಗುರುರಾಜ್ ಪುತ್ತೂರು, ಹರೀಶ್ ಪೂಜಾರಿ, ಜಾನೆಟ್ ಸಿಕ್ವೇರಾ, ಜಯಂತ್ ಶೆಟ್ಟಿ, ಕೃಷ್ಣ ಕುಮಾರ್, ಮೋಹನ್ ಬಿ.ಪಿ., ರಮೇಶ್ ಲಕ್ಯ, ಜೇಶ್ ಬಾಯಾರ್, ನರಸಿಂಹನ್ ಜಿ.ಎಸ್, ಸಾನ್ವಿ ಪ್ರಕಾಶ್ ಶರ್ಮಾ, ಸಂದೀಪ್ ದೇವಾಡಿಗ, ಸಂಧ್ಯಾ ರವಿಕುಮಾರ್, ಶ್ವೇತಾ ನಾಡಿಗ್ ಶರ್ಮಾ, ವೆಂಕಟೇಶ್‌ರಾವ್, ವಿನಾಯಕ ಹೆಗ್ಡೆ, ದೀಪಾ ಮರಿಯಾ, ಶೋಬಿತಾ ಪ್ರೇಮ್‌ಜೀತ್ ಅಭಿನಯಿದರು.

ಅರುಣ್ ಮಣಿಪಾಲ್ ಅವರ ಬೆಳಕಿನ ವ್ಯವಸ್ಥೆ ಹಾಗೂ ಬಿ. ಕೆ. ಗಣೇಶ್‌ ರೈ ಅವರ ರಂಗ ವಿನ್ಯಾಸದೊಂದಿಗೆ ಪ್ರಸ್ತುತ ಗೊಂಡ ನಾಟಕಕ್ಕೆ ಅರುಣ್ ಕಾರ್ಲೋ ಸಂಗೀತಾ ಸಂಯೋಜನೆ ನೀಡಿದ್ದರು. ಸಂಗೀತಕ್ಕೆ ರಾಜೇಶ್ ಅಡಿಗ (ತಬಲಾ) ದಲ್ಲಿ ಸಹಕರಿಸಿದ್ದು ನವೀನ್ ಸಿಕ್ವೇರಾ ಡಿಜಿಟಲ್ ಡಿಸ್ಪ್ಲೇ ಪ್ರಸ್ತುತ ಪಡಿಸಿದರು. ಸತೀಶ್ ಹೆಗ್ಡೆ, ಅಶೋಕ್ ಬೈಲೂರ್, ರಿತೇಶ್‌ಅಂಚನ್, ಅನಿಲ್ ಪೂಜಾರ, ಸಂತೋಶ್ ಪೂಜಾರಿ, ಗಣೇಶ್ ಕುಲಾಲ್, ಉದಯ ನಂಜಪ್ಪ, ಸಾಯಿ ಮಲ್ಲಿಕಾ, ಲತಾ ಹೆಗ್ಡೆ ತೆರೆಯ ಹಿಂದೆ ಸಹಕರಿಸಿದ್ದರು. ಧ್ವನಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ‘ಮೃಚ್ಛಕಟಿಕ’ ದ ಕೊನೆಯಲ್ಲಿ ನಟನಾ ತಂಡ, ತಾಂತ್ರಿಕ ವರ್ಗದವರಿಗೆ ಅತಿಥಿಗಳು ಗೌರವಿಸಿ ಅಭಿವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here