ಮುಂಬಯಿ: ಮಹಾನಗರದಲ್ಲಿನ ಟ್ಯಾಕ್ಸಿ-ರಿಕ್ಷಾಗಳ ದರ ಏರಿಕೆ ಪ್ರಸ್ತಾಪಿಸಿ ಉಪನಗರ ಬಾಂದ್ರಾದಲ್ಲಿನ ಸಾರಿಗೆ ಆಯುಕ್ತರ ಕಛೇರಿಗೆ ಇಂದಿಲ್ಲಿ ಸೋಮವಾರ ಮಧ್ಯಾಹ್ನ ಆಲ್ ಇಂಡಿಯಾ ಟ್ರಾನ್ಸ್ ಪೋರ್ಟ್ ಕಾಂಗ್ರೇಸ್ (ಎಐಟಿಸಿ) ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಯಾಸಿನ್ ತಾಂಬೊಲಿ ಮತ್ತು ಕರ್ನಾಟಕ ರಾಜ್ಯಧ್ಯಕ್ಷ ಸುನೀಲ್ ಪಾಯ್ಸ್ ಪುತ್ತೂರು ನೇತೃತ್ವದಲ್ಲಿ ಮೋರ್ಚಾ ನಡೆಸಿ ಬೇಡಿಕೆಗಳನ್ನು ಈಡೇರಿಸುವಂತೆ ಘೆರಾವೋ ಹಾಕಿದರು.

ಕಳೆದ ಅನೇಕ ದಶಕಗಳಿಂದ ಸಾಮಾನ್ಯ ಪ್ರಯಾಣಿಕರ ಸೇವೆಯಲ್ಲಿರುವ ಹಳದಿ-ಕಪ್ಪು ಟ್ಯಾಕ್ಸಿ- ರಿಕ್ಷಾಗಳ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ಆಯುಕ್ತರ ಕಚೇರಿಗೆ ಘೆರಾವೋ ಹಾಕಿದರು. ಓಲಾ, ಉಬಾರ್ ವಾಹನಗಳ ಚಾಲಕ ಮಾಲೀಕರ ಅಂದೋಲನ ಬಳಿಕ ಮುಂಬಯಿನಲ್ಲಿ ಸಂಚಾರ ನಡೆಸುತ್ತಿರುವ ಟ್ಯಾಕ್ಸಿ ರಿಕ್ಷಾಗಳ ಸಾವಿರಾರು ಮಾಲೀಕರು, ಚಾಲಕರು ಪಾಲ್ಗೊಂಡು ಅಂದೋಲನ ನಡೆಸಿದರು.
ಈ ಸಂದರ್ಭದಲ್ಲಿ ಎಐಟಿಸಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಗಣೇಶ್ ಬೊರವಕೆ, ಎಐಟಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಉಲೆ, ಅಜಯ್ ಜೈನ್ ಬಳ್ಳಾರಿ ಸೇರಿದಂತೆ ಹಲವು ನಾಯಕರು, ವಿವಿಧ ಸರಕುಸಾಗಣಿಕಾ ವಾಹನಗಳ ಮಾಲೀಕರು, ನೌಕರರು ಉಪಸ್ಥಿತರಿದ್ದರು.