Wednesday, October 18, 2023

ಮರ್‍ ಹೂಮ್ ಶೈಖುನಾ ಮಿತ್ತಬೈಲ್ ಉಸ್ತಾದ್ ಅನುಸ್ಮರಣೆ ಹಾಗೂ ತಹ್ಲೀಲ್ ಸಮರ್ಪಣೆ

Must read

ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾ ವತಿಯಿಂದ ಇಲ್ಲಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಆಶ್ರಯದಲ್ಲಿ ಮರ್‍ಹೂಂ ಶೈಖುನಾ ಮಿತ್ತಬೈಲ್ ಉಸ್ತಾದ್ (ನ.ಮ) ಅನುಸ್ಮರಣೆ ಹಾಗೂ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮ ಭಾನುವಾರ ರಾತ್ರಿ ಆಲಡ್ಕದಲ್ಲಿ ನಡೆಯಿತು.

ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ ಕಾರ್ಯಕ್ರಮ ಉಧ್ಛಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಷಾದ್ ದಾರಿಮಿ ಅಲ್-ಜಝರಿ ಪ್ರಾರ್ಥನೆ ನೆರವೇರಿಸಿದರು. ಶಾಖಾಧ್ಯಕ್ಷ ಅಬೂಬಕ್ಕರ್ ಎನ್.ಬಿ. ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು-ಬಂದರು ಕೇಂದ್ರ ಜುಮಾ ಮಸೀದಿ ಖತೀಬ್ ಸ್ವದಖತುಲ್ಲಾ ಫೈಝಿ ಪ್ರಸ್ತಾವನೆಗೈದರು. ಉಸ್ತಾದ್ ಇಲ್ಯಾಸ್ ಅರ್ಷದಿ ಸಜಿಪ  ಅನುಸ್ಮರಣಾ ಭಾಷಣಗೈದರು.
ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾ ಗೌರವಾಧ್ಯಕ್ಚ ಹಾಜಿ ಎಸ್. ಅಬ್ದುಲ್ ಖಾದರ್ ಬೋಗೋಡಿ, ಕೋಶಾಧಿಕಾರಿ ಪಿ.ಬಿ. ಅಹ್ಮದ್ ಹಾಜಿ, ಹನೀಫ್ ಯಮಾನಿ, ಉಪಾಧ್ಯಕ್ಷ ಅಬ್ದುಲ್ ಮಜೀದ್ ಬೋಳಂಗಡಿ, ಸದಸ್ಯರಾದ ಹನೀಫ್ ಹಾಸ್ಕೊ, ಬಶೀರ್ ಕೆ4, ಅಬ್ದುಲ್ ಅಝೀಝ್ ಪಿ.ಐ, ಮುಹಮ್ಮದ್ ಶಫೀಕ್, ಅಬ್ದುಲ್ ಮುತ್ತಲಿಬ್, ಅಶ್ರಫ್ ಕೆಇಬಿ, ರಫೀಕ್ ಇನೋಳಿ, ಅಬ್ದುಲ್ ಸಲಾಂ ಸೆಂಟ್ರಿಂಗ್, ಅಬ್ದುಲ್ ಖಾದರ್ ಪೈಂಟರ್, ಜಬ್ಬಾರ್ ಬುರ್ಖಾ, ಸಿ.ಪಿ. ಶಾಕಿರ್, ಮುಹಮ್ಮದ್ ಬಂಗ್ಲೆಗುಡ್ಡೆ, ಸುಲೈಮಾನ್ ಬೋಳಂಗಡಿ ಮೊದಲಾದವರು ಭಾಗವಹಿಸಿದ್ದರು. ಶಾಖಾ ಸದಸ್ಯ ಅಬ್ದುಲ್ ಖಾದರ್ ಮದನಿ ಸ್ವಾಗತಿಸಿ, ಬಶೀರ್ ನಂದಾವರ ವಂದಿಸಿದರು.

More articles

Latest article