Sunday, October 22, 2023

ಮಂಜೇಶ್ವರದಲ್ಲಿ ಯಶಸ್ವಿ ರಕ್ತದಾನ ಶಿಬಿರ

Must read

ಕಾಸರಗೋಡು: ಮಂಜೇಶ್ವರ ಫೆ.22 ಲಕ್ಕಿ ಬ್ರದರ್ಸ್ ಆರ್ಟ್ಸ್ ಮತ್ತು ಸ್ಪೋಟ್ಸ್ ಕ್ಲಬ್ (ರಿ) ಬಂಗ್ರ ಮಂಜೇಶ್ವರ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಆಶ್ರಯದಲ್ಲಿ ಯೇನಪೋಯ ಬ್ಲಡ್ ಬ್ಯಾಂಕ್ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ 5ನೇ ವಾರ್ಷಿಕೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವು ಕೇರಳ ಕರ್ನಾಟಕದ ಗಡಿಬಾಗ ಕಾಡಿಯರ್ ಬಂಗ್ರ ಮಂಜೇಶ್ವರ ಬಳಿ ನಡೆಯಿತು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಲಕ್ಕಿ ಬ್ರದರ್ಸ್ ಇದರ ಅಧ್ಯಕ್ಷರಾದ ಬಿ ಎಮ್ ಅಶ್ರಫ್ ನೆರವೇರಿಸಿದರು, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಮುಸ್ತಫಾ ಉದ್ಯಾವರ ಉದ್ಘಾಟಿಸಿದರು, ಬಂಗ್ರ ಮಂಜೇಶ್ವರ ಮೊಯ್ಯದ್ದೀನ್ ಜುಮಾ ಮಸೀದಿಯ ಖತೀಬರಾದ ಕರೀಂ ಫೈಝಿ ಕುಂತೂರು ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು, ಮುಖ್ಯ ಅತಿಥಿಗಳಾಗಿ ಅಬ್ದುಲ್ಲಾ ಅಜ್ಹರಿ, ಅಂದು ದಾರುಸಲಾಮ್,ಹರೀಶ್ಚಂದ್ರ ಮಂಜೇಶ್ವರ, ಕೆ ಎಂ ಕೆ ಹಾಜಿ ಹೊಸಬೆಟ್ಟು ಹಾಗೂ ಹಮೀದ್ ಹೊಸಂಗಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಲಕ್ಕಿ ಬ್ರದರ್ಸ್ ಆರ್ಟ್ಸ್ ಮತ್ತು ಸ್ಪೋಟ್ಸ್ ಕ್ಲಬ್ (ರಿ) ಬಂಗ್ರ ಮಂಜೇಶ್ವರ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಸಹಯೋಗದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಭಿರದಲ್ಲಿ ಸುಮಾರು 70ಕ್ಕೂ ಅಧಿಕ ರಕ್ತದಾನಿಗಳು‌ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು, ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸಲಾಂ ಚೆಂಬುಗುಡ್ಡೆ, ಫಯಾಜ್ ಮಾಡುರು, ಅದ್ನಾನ್ ಕುಂಜತ್ತೂರು, ಫಾರೂಕ್ ಬಿಗ್ ಗ್ಯಾರೇಜ್, ಮುನೀರ್ ಚೆಂಬುಗುಡ್ಡೆ ಉಪಸ್ಥಿತರಿದ್ದರು,‌ ಸಿದ್ದೀಕ್ ಮಂಜೇಶ್ವರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಇಬ್ರಾಹಿಂ ವಂದಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ಮತ್ತು ಸಮಾಜ ಸೇವಕರಾದ ಅಂದು ಮಂಜೇಶ್ವರ ಹಾಗೂ ಮುಹಮ್ಮದ್ ಕುಞ ಇವರಿಗೆ ಲಕ್ಕಿ ಬ್ರದರ್ಸ್ ಆರ್ಟ್ಸ್ ಮತ್ತು ಸ್ಪೋಟ್ಸ್ ಕ್ಲಬ್ (ರಿ) ಬಂಗ್ರ ಮಂಜೇಶ್ವರ ವತಿಯಿಂದ ಸನ್ಮಾನಿಸಲಾಯಿತು.

More articles

Latest article