Wednesday, October 25, 2023

ಫೆ.19-21: ಮಾಣಿಲ ಕುಕ್ಕಾಜೆ ಕ್ಷೇತ್ರದಲ್ಲಿ 52ನೇ ವಾರ್ಷಿಕ ಜಾತ್ರಾ ಮಹೋತ್ಸವ

Must read

ವಿಟ್ಲ: ಮಾಣಿಲ ಗ್ರಾಮದ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ಶ್ರೀದೇವಿಯ 52ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವ ಫೆ. 19ರಿಂದ 21ರ ವರೆಗೆ ನಡೆಯಲಿದೆ.
19ರಂದು ಸ್ಥಳಶುದ್ಧಿ, ಗಣಪತಿ ಹೋಮ, ಶ್ರೀದೇವಿಯ ಕಲಶ ಪ್ರತಿಷ್ಠೆ, ಉದಯ ಪೂಜೆ, ಹಾಗೂ ವಿವಿಧ ಭಜನೆ ತಂಡಗಳಿಂದ ಭಜನೆ ನಡೆಯಲಿದೆ.
20ರಂದು ಶ್ರೀ ಚೇವಾರು ಶಂಕರ ಕಾಮತರ ನೇತೃತ್ವದಲ್ಲಿ ಶೃತಿಲಯ ಚೇವಾರು ಅವರಿಂದ ಭಾವಗಾನ ಸಂಗಮ ನಡೆಯಲಿದೆ. ಮಧ್ಯಾಹ್ನ ಶ್ರೀದೇವಿಯ ಮಹಾಪೂಜೆ, ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಅಲಂಕಾರ ಪೂಜೆ ನಡೆಯಲಿದೆ.

ಫೆ.21 ರಂದು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಮಣಿಯಂಪಾರೆ ಅವರಿಂದ ಕುಣಿತ ಭಜನೆ, ದರ್ಶನ ಬಲಿ ಉತ್ಸವ, ಪ್ರಸಾದ ವಿತರಣೆ ನಡೆಲಿದೆ. ಸಂಜೆ ಧಾರ್ಮಿಕ ಸಭೆಯಲ್ಲಿ ಶ್ರೀಧಾಮ ಮಾಣಿಲ ಕ್ಷೇತ್ರದ ಪರಮಹಂಸ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಿಶಾಲ್ ಮೋನಿಸ್, ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ದಿವ್ಯ ಉಪಸ್ಥಿತಿ ಇರಲಿದ್ದಾರೆ.

ಇದೇ ಸಂದರ್ಭದಲ್ಲಿ ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್ ಕಾಫಿನಡ್ಕ ಅವರಿಗೆ ಸನ್ಮಾನ ನಡೆಯಲಿದೆ.

ಬೈಕುಂಜ ಗೋಳಿತ್ತಡ್ಕದ ರಾಜೇಶ್ ಶಂಕರ್ ಭಟ್, ಅಶ್ವಥ್ ಪೂಜಾರಿ ಲಾಲ್‌ಬಾಗ್, ಸಂದೇಶ್ ಪೂಜಾರಿ, ಆನಂದ ನಾಯ್ಕ, ವಿಟ್ಲ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ್ ಎಂ ವಿಟ್ಲ, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಸಾಹಿತಿ ತೋಡಿಕಾನ ಅಬ್ದುಲ್ಲ, ಸಪ್ತ ಪಾವೂರು, ಕ್ಷೇತ್ರದ ಮೊಕ್ತೇಸರ ಎಂ.ಕೆ ಕುಕ್ಕಾಜೆ, ಮೊದಲಾದವರು ಭಾಗವಹಿಸಲಿದ್ದಾರೆ.

More articles

Latest article