ಪೊಳಲಿ ದೇವಸ್ಥಾನ ಕ್ಕೆ ಹೊರೆ ಕಾಣಿಕೆ ಸಮರ್ಪಣೆ ಯ ಅಂಗವಾಗಿ ಪೂರ್ವಭಾವಿ ಸಭೆ ಇಂದು ಕುಕ್ಕಟ್ಟೆಯಲ್ಲಿ ನಡೆಯಿತು.



ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಸದ ಅಂಗವಾಗಿ ಮುತ್ತೂರು, ಕೊಳವೂರು , ಮೊಗರು ಗ್ರಾಮದ ಭಕ್ತಾಭಿಮಾನಿಗಳು ಮಾ. 04 ರಂದು ಮಧ್ಯಾಹ್ನ ತಮ್ಮ ಗ್ರಾಮದಿಂದ ಶ್ರೀ ಕ್ಷೇತ್ರ ಪೊಳಲಿಗೆ ಸಲ್ಲಿಸಲ್ಪಡುವ ಹಸಿರು ಹೊರ ಕಾಣಿಕೆಯ ಬಗ್ಗೆ ಪೂರ್ವಭಾವಿ ಸಭೆಯು ಪೊಳಲಿ ದೇವಸ್ಥಾನದ ಬ್ರಹ್ಮಕಲಸದ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಮುತ್ತೂರು ಕೃಷ್ಣರಾಜ ಮಾರ್ಲರ ಅಧ್ಯಕ್ಷತೆಯಲ್ಲಿ ಮೊಗರು ಕುಕ್ಕಟ್ಟೆಯ ವಿದ್ಯಾ ಭಾರತಿ ಸಭಾ ಭವನದಲ್ಲಿ ನಡೆಯಿತು .
ಪೊಳಲಿ ಬ್ರಹ್ಮ ಕಲಸದಲ್ಲಿ ದೇವರ ಸೇವೆ ಮಾಡುವಂತಹ ಭಾಗ್ಯ ಭಕ್ತಭಿಮಾನಿಗಳಾದ ನಮಗೆಲ್ಲ ದೊರಕಿರುವುದು ಸಂತೋಷದ ವಿಷಯ ಗ್ರಾಮದ ನಾವೆಲ್ಲರೂ ಒಗ್ಗಟ್ಟಾಗಿ ದೇವರ ಈ ಪುಣ್ಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗೋಣ . ಗ್ರಾಮದ ಪ್ರತಿ ಮನೆಯಿಂದ ತಮ್ಮಿಂದಾದ ಹೊರೆ ಕಾಣಿಕೆಯನ್ನು ಶ್ರೀ ಕ್ಷೇತ್ರಕ್ಕೆ ಸಲ್ಲಿಸೋಣ ಮತ್ತು ತಮ್ಮ ಗ್ರಾಮದಿಂದ ನಡೆಯುವ ಹೊರೆ ಕಾಣಿಕೆಯ ಕಾರ್ಯಕ್ರಮವು ನಾವೆಲ್ಲರೂ ಒಗ್ಗಟ್ಟಾಗಿ ಯಶಸ್ವಿಗೊಳಿಸೋಣ . ಮಾ.04 ರಿಂದ ಮಾ.13 ಕ್ಷೇತ್ರದಲ್ಲಿ ಬ್ರಹ್ಮಕಲಸ ಕಾರ್ಯಕ್ರಮವು ನಡೆಯಲಿದ್ದು ಮಾ. 10 ರಂದು ದೇವರ ಪ್ರತಿಷ್ಠೆ ಮತ್ತು ದೇವರ ಬ್ರಹ್ಮ ಕಲಶೋತ್ಸವ ನಡೆಯಲಿದ್ದು ಈ ಪುಣ್ಯ ಕಾರ್ಯದಲ್ಲಿ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತಭಿಮಾನಿಗಳು ಆಗಮಿಸಿದ್ದು ಈ ಕಾರ್ಯಕ್ರಮದ ಯಶಸ್ಸಿನ ದೃಷ್ಟಿಯಿಂದ ನಮ್ಮ ಗ್ರಾಮದ ಯುವಕರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಣೆ ಮಾಡಬೇಕೆಂದು ಸಭೆಯಲ್ಲಿ ಕೃಷ್ಣ ರಾಜ ಮಾರ್ಲರು ವಿನಂತಿಸಿದರು . ಹೊರೆ ಕಾಣಿಕೆಯ ಬಗ್ಗೆ ಸಭೆಯಲ್ಲಿ ಭಕ್ತಾಭಿಮಾನಿಗಳ ಸಲಹೆ ಸೂಚನೆಯನ್ನು ಪಡೆಯಲಾಯಿತು . ಈ ಸಂದರ್ಭದಲ್ಲಿ ಕೊಳವೂರು ಸದಾನಂದ ಶೆಟ್ಟಿ ಮೊಗರು ವಿಧ್ಯಾಚರಣ ಭಂಡಾರಿ ನಾರಳ ಚಂದ್ರಹಾಶ್ ಶೆಟ್ಟಿ , ಕಿಲೆಂಜಾರು ತಿಮ್ಮಪ್ಪ ಶೆಟ್ಟಿ ಅಗರಿ ತಾಲೂಕು ಪಂಚಾಯತ್ ಸದಸ್ಯರಾದ ನಾಗೇಶ್ ಶೆಟ್ಟಿ ಹಾಗೂ ಮುತ್ತೂರು ಕೊಳವೂರು ಕಿಲೆಂಜಾರು ಮೊಗರು ಗ್ರಾಮದ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು . ಶಂಕರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು