Friday, October 20, 2023

ಮರಾಟಿ ಯುವ ವೇದಿಕೆ (ರಿ) ವಿಟ್ಲ ಇದರ ವಾರ್ಷಿಕ ಕ್ರೀಡಾಕೂಟ

Must read

ವಿಟ್ಲ: ನಮ್ಮ ಮರಾಟಿ ಯುವ ವೇದಿಕೆ (ರಿ.) ವಿಟ್ಲ ಇದರ ವತಿಯಿಂದ ಫೆಬ್ರವರಿ ತಾರೀಕು 3 ಭಾನುವಾರದಂದು 6 ನೇ ವರ್ಷದ ಕ್ರೀಡಾಕೂಟವು ವಿಟ್ಲದ  ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ಗಾಯತ್ರಿ ವಕೀಲರು ಮಂಗಳೂರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಪೂವಪ್ಪ ನಾಯ್ಕ ಅಮೈ  SBI ನಿವೃತ್ತ ಪ್ರಬಂಧಕರು ಹಾಗೂ ದಿನೇಶ್ ನಾಯ್ಕ ಪಟ್ಟುಮೂಲೆ ಉದ್ಯಮಿಗಳು ಭಾಗವಹಿಸಿದ್ದರು.
ಈ ಕ್ರೀಡಾಕೂಟದಲ್ಲಿ ಹಲವಾರು     ಜಿಲ್ಲಾ ಹಾಗೂ ತಾಲೂಕುಗಳ ಮರಾಟಿ ಸಮಾಜ ಭಾಂದವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
 ಸಂಜೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತಿಮ್ಮಪ್ಪ ನಾಯ್ಕ  ಪೊಲೀಸ್ ನಿರೀಕ್ಷಕರು ಪುತ್ತೂರು ನಗರ ಠಾಣೆ, ಕುಶಾಲಪ್ಪ ನಾಯ್ಕ ಅಧ್ಯಕ್ಷರು ಕಡಬ ಮರಾಟಿ ಸಂಘ, ಚೆನ್ನಪ್ಪ ನಾಯ್ಕ PDO ಮಲವಂತಿಗೆ, ರೂಪಾಶ್ರೀ ಉಪನ್ಯಾಸಕರು ವಿಠಲ ಪದವಿ ಪೂರ್ವ ಕಾಲೇಜ್ ವಿಟ್ಲ ಭಾಗವಹಿಸಿದ್ದರು.
ಮರಾಟಿ ಯುವ ವೇದಿಕೆ  ಅಧ್ಯಕ್ಷರಾದ ಜೀವನ್ ಅನ್ನಮೂಲೆ, ಉಪಾಧ್ಯಕ್ಷೆ ನವೀನಾ ಕುಮಾರಿ ಉಪಸ್ಥಿತರಿದ್ದರು.
ಮರಾಟಿ ಯುವ ವೇದಿಕೆ ಸದಸ್ಯ ರಾದ ದಿವ್ಯಶ್ರೀ ನಿರೂಪಿಸಿ,ಶಿಲ್ಪಾ ಹಾಗೂ ವಾಣಿ ಶ್ರೀ ಪ್ರಾರ್ಥಿಸಿ, ವನಜಾ ಹಾಗೂ ಭವ್ಯ ವಂದಿಸಿದರು.

More articles

Latest article