ಅಮರನಾಗಬೇಕಿತ್ತು
ಒಂದಾದರೂ
ಅವಕಾಶ ಸಿಗಬಾರದೇ..!

ರಾವಣ ಇದ್ದು
ಸೀತೆಯ ಹೊತ್ತೊಯ್ದರೆ
ರಾಮನಾಗಬಹುದಿತ್ತು
ಕೌರವರಿದ್ದು
ದ್ರೌಪದಿಯ ಕೆಣಕುತ್ತಿದ್ದರೆ
ಪಾಂಡವರಾಗಬಹುದಿತ್ತು
ಬಾಲವಿರುತ್ತಿದ್ದರೆ
ಹನುಮಂತನಾಗಬಹುದಿತ್ತು
ಸುದರ್ಶನ ಚಕ್ರ ಇರುತ್ತಿದರೆ
ಕೃಷ್ಣ ನಾಗಬಹುದಿತ್ತು
ಛೇ ಆಗ ಹುಟ್ಟಬೇಕಿತ್ತು
ಅಮರನಾಗಬಹುದಿತ್ತು.

ನಡು ರಾತ್ರಿಯಲ್ಲಿ ಎಚ್ಚರವಾಗುತ್ತಿದ್ದರೆ
ಬುದ್ದನಾಗಬಹುದಿತ್ತು
ಅಣ್ಣನೇ ಯುದ್ದಸಾರುತ್ತಿದ್ದರೆ
ಬಾಹುಬಲಿಯಾಗಬಹುದಿತ್ತು
ದೇಶನೇ ಗೊತ್ತಿಲ್ಲದ ಕಾಲದಲ್ಲಿ
ಸಮುದ್ರಕ್ಕೊಂದು
ದೋಣಿ ಹಾಕಿ ಅಮೇರಿಕಾ ಕಂಡು ಹಿಡಿದು
ಕೊಲಂಬಸ್ ನಾಗಬಹುದಿತ್ರು
ದೇಶವನ್ನೇ ಗೆಲ್ಲುವ ಕನಸು ಇಟ್ಟು
ಯುದ್ದ ಸಾರುತ್ತ ಬರುತ್ತಿದ್ದರೆ
ಅಲೆಗ್ಸಾಂಡರ್ ಆಗಬಹುದಿತ್ತು
ಛೇ ಆಗ ಹುಟ್ಟಬೇಕಿತ್ತು
ಅಮರನಾಗಬಹುದಿತ್ತು.

ಗೆದ್ದು ಗೆದ್ದು ಕೊನೆಗೆ ಸೋತು
ನೆಪೊಲಿಯನ್ ಆಗಬಹುದಿತ್ತು
ಸೋತು ಸೋತು ಕೊನೆಗೆ ಗೆದ್ದು
ಅಬ್ರಹಾಂ ಲಿಂಕನ್ ಆಗಬಹುದಿತ್ತು
ಶಾಂತಿ ಶಾಂತಿ ಎಂದು
ಗಾಂಧೀಜಿ ಆಗಬಹುದಿತ್ತು
ಕರಿಯ ಕರಿಯನೆಂದು
ನೆಲ್ಸನ್ ಮಂಡೇಲಾನಾಗಬಹುದಿತ್ತು
ಛೇ ಆಗ ಹುಟ್ಟಬೇಕಿತ್ತು
ಅಮರನಾಗಬಹುದಿತ್ತು.

ಸಾಧಿಸಲು
ಒಂದು ನೆಪ ಬೇಡವೆ…!?

 

✍ಯತೀಶ್ ಕಾಮಾಜೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here