ಚಕ್ರ ಕಂಡು ಹಿಡಿದಲ್ಲಿಂದ
ಮಂಗಳನ ಅಂಗಳಕ್ಕೆ
ಹೋದ
ಕಥೆ ಇದು..!

ಚಡ್ಡಿ ಇಲ್ದೆ ಓಡಾಡುತ್ತಿದ್ದವನಿಗೆ
ಸೊಂಟಕ್ಕೆ ಅಡ್ಡ ಕಟ್ಡಿಕೊಂಡಾಗ
ನಾಚಿಕೆ ಶುರುವಾಯ್ತು
ಬರಿ ಕಾಲಲ್ಲೇ ಓಡಾಡಿದವನಿಗೆ
ಚಕ್ರ ಕಂಡು ಹಿಡಿದಾಗ
ಅಹಂ ಹುಟ್ಟಿಕೊಂಡಿತು
ಅಲ್ಲಿ ವರೆಗೂ ಕಾಡು ಪ್ರಾಣಿ
ನಾನು ಒಂದೇ ಎಂದು ತಿಳಿದಿದ್ದ…!!

ಒಂದೊಂದು ಗೆರೆ ಎಳೆದವನು
ಅಕ್ಷರ ಸೃಷ್ಟಿಸಿದ,
ಬದುಕಿಗೊಂದು ಅಧ್ಯಯನ
ಬೇಕೆಂದ..
ಅಧ್ಯಯನ ಮಾಡದ ಯಾವ ಪ್ರಾಣಿಯು
ನಾಶವಾಗಲಿಲ್ಲ..!!

ದಿನ ಹೋದಂತೆ ಬುದ್ದಿವಂತ ಎನಿಸಿಕೊಂಡ
ಕೊಟ್ಟು ತೆಗೆದು ಕೊಳ್ಳುವ ಮನುಷ್ಯ
ಸಂಪಾದಿಸಲು ಕಲಿತ
ಹಣದ ಹಿಂದೆ ಬಿದ್ದ
ಶ್ರೀಮಂತ ಅನಿಸಿಕೊಳ್ಳುವ
ಚಟಕ್ಕೆ ಬಿದ್ದ..
ನೆಮ್ಮದಿಗೆ ಅವನ ಕಾಲಿಂದಲೇ
ಜಾಡಿಸಿ ಒದ್ದ.!

ಭೂಮಿಯೆಲ್ಲ ಅದೇನು ಹುಡುಕಾಡಿದ.
ಸಂಶೋಧನೆ ಹೆಸರಲ್ಲಿ
ತನ್ನ ಹೆಸರು ಬರೆದಿಟ್ಟ
ನೆಲ ಅಗೆದು ನೋಡಿದ
ಪಾತಾಳ ಇಣುಕಿ ನೋಡಿದ
ಸಮುದ್ರವ ಇಳಿದು ನೋಡಿದ
ಆದರು ತೃಪ್ತಿ ಇಲ್ಲ
ಆಕಾಶ ನೋಡಿದ..!

ಆಕಾಶಕ್ಕೆತ್ತರಕ್ಕೆ ಜಿಗಿದು ಬಿಟ್ಟ
ಬಾಹ್ಯಾಕಾಶಕ್ಕೆ ಕಣ್ಣು ಹಾಯಿಸಿದ
ಕೊನೆಗೆ ಬಾಹ್ಯಾಕಾಶಕ್ಕೆ ನಡೆದೇ ಬಿಟ್ಟ
ಚಂದ್ರನ ತುಳಿದು ಬಿಟ್ಟ
ಮಂಗಳನ ಅಂಗಳಕ್ಕೂ ಕಾಲಿರಿಸಿಯೇ ಬಿಟ್ಟ…

ಬುದ್ದಿವಂತನಂತೆ ಇವನು
ಪುಸ್ತಕದ ಬದನೆಕಾಯಿ ಓದಿಕೊಂಡು..
ನಿನ್ನೆ ಹುಟ್ಟಿದ ಬೆಕ್ಕುಮರಿಗೆ
ಮೀನಿನ ಪರಿಚಯ ಇತ್ತು
ಯಾವ ಅಧ್ಯಯನ ಇತ್ತದಕ್ಕೆ

ಜೀವನದ ಪಾಠವೇ
ಬೇರೆ
ಇನ್ನೂ ಅಧ್ಯಯನ ಮಾಡಲಿಲ್ಲ…!

 

✍ಯತೀಶ್ ಕಾಮಾಜೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here