ಇಲ್ಲಿ ಎಲ್ಲವೂ
ಎಕ್ಸಪೈರ್ ಆಗುತ್ತೆ
ಇಷ್ಟೇ ದಿನ ವಾಲಿಡಿಟಿ ಇದೆ…!
ತಿನ್ನೋ ಆಹಾರ ಇಷ್ಟು ದಿವಸ
ಕುಡಿಯೋ ನೀರಿಗೆ ಇಂತಿಷ್ಟು ದಿನ
ಮೈಗೆ ಹಾಕೋ ಪೌಡರ್
ನಾಯಿಗೆ ಹಾಕೋ ಸೋಪು
ಎಮ್ಮೆಗೆ ಕೊಡೋ ಮದ್ದು
ಎಲ್ಲದಕ್ಕೂ ಇಂತಿಷ್ಟು ವಾಲಿಡಿಟಿ ಇದೆ..!
ಈಗೀಗ ಸಂಬಂಧಗಳು..!
ಮದುವೆ ಆಗಿ ಇಂತಿಷ್ಟು ವರ್ಷ
ಇದ್ದರೆ ಹೆಚ್ಚು
ಮಗ ತನ್ನ ಕಾಲ ಮೇಲೆ ನಿಲ್ಲುವ ತನಕ
ಅಪ್ಪ ಅಮ್ಮ.
ಗೆಳೆಯ ಫೇಸ್ ಬುಕ್ ವಾಟ್ಸ್ ಆಪ್
ಬ್ಲಾಕ್ ಮಾಡುವ ತನಕ.
ಪ್ರೀತಿ ಅನ್ನೊದು ಈಗ ಗಲ್ಲಿಗೊಂದು
ಲವ್
ಒಂದು ಸೋತ ಮೇಲೆ ಇನ್ನೊಂದು
ಅಣ್ಣ ತಮ್ಮ ತಂಗಿ ಸ್ವಂತ ಮನೆ ಕಟ್ಟುವ ತನಕ
ಮನೆ ಮನೆಗೆ ಅಂತರ ಕಡಿಮೆ ಇರಬಹುದು
ಮನಸ್ಸು ಮನಸ್ಸಿನ ಮಧ್ಯೆ
ಬಿರುಕುಗಳೇ ಜಾಸ್ತಿ
ವಸ್ತುವಿನಂತೆ
ನಿರ್ದಿಷ್ಟ ಎಕ್ಸಪೈರ್ ಡೇಟ್ ಇಲ್ಲ ಇಲ್ಲಿ ಅಷ್ಟೇ..!
ವಸ್ತಿವಿಗೂ ಮಾನವನಿಗೂ
ಮಧ್ಯೆ ವ್ಯತ್ಯಾಸಗಳೇನಿಲ್ಲ.!
ನಿಜ;
ಎರಡಕ್ಕೂ ವಾಲಿಡಿಟಿ ಇದೆ.
ಒಂದಲ್ಲ ಒಂದು ದಿನ ಎಕ್ಸಪೈರ್ ಆಗೇ ಆಗುತ್ತೆ…!

✍ಯತೀಶ್ ಕಾಮಾಜೆ