Tuesday, September 26, 2023

ದೇಶಪ್ರೇಮದ ಸೈನಿಕ

Must read

ಗಡಿಯ ಕಾಯ್ದು ಕಷ್ಟ ಪಡುತ
ಮಂಜಿನಲ್ಲಿ ಕರಗುತ
ಕುಟುಂಬ ಸುಖವ ಮರೆತು ತಾನು
ದೇಶ ಸೇವೆ ಮಾಡುತ…

ಪ್ರಾಣವನ್ನೆ ಒತ್ತೆಯಿಟ್ಟು
ವೈರಿಪಡೆಯ ದಬ್ಬುತ
ಊಟ ತಿಂಡಿ ತನ್ನೆ ಮರೆತು
ದೇಶಕಾಗಿ ಬದುಕುತ..

ಉಸಿರ ಬಿಗಿಯ ಹಿಡಿದುಕೊಂಡು
ದೇಶವನ್ನೆ ಕಾಯುತ
ಜನತೆಗೆಲ್ಲ ನೆಮ್ಮದಿಯ
ಬದುಕನ್ನು ನೀಡುತ…

ಪ್ರಾಣವನ್ನು ಒತ್ತೆಯಿಟ್ಟು
ವೀರ ಮರಣ ಪಡೆಯುತ
ತನ್ನ ಕೈ ಕಾಲ ನೋವು
ಎಲ್ಲವನ್ನು ತೊರೆಯುತ..

ಊಟ ನಿದ್ರೆ ಸ್ನಾನ ಧ್ಯಾನ
ಎಲ್ಲವನ್ನು ಮರೆಯುತ
ನನ್ನ ದೇಶ ನನ್ನ ಜನರು
ಎಂಬ ಭಾವ ಬೆಳೆಸುತ..

ನಿನಗೆ ನೀನೆ ಸಾಟಿ ಯೋಧ
ನಾನು ಬರೆವೆ ನಮಿಸುತ
ಅರ್ಪಿಸುವೆ ಪ್ರೇಮದೀ ಕವನವ
ಮನದ ಹೃದಯ ಮಿಡಿಯುತ…

 

@ಪ್ರೇಮ್@
15.02.2019

More articles

Latest article