Wednesday, October 18, 2023

ಕೇಪು: ಕಬಡ್ಡಿ ಪಂದ್ಯಾಟ

Must read

ವಿಟ್ಲ: ಶ್ರೀ ದುರ್ಗಾ ಫ್ರೆಂಡ್ಸ್ ಕೇಪು, ದಕ್ಷಿಣ ಕನ್ನಡ ಅಮೆಚೂರ್ ಕಬಡ್ಡಿ ಫೆಡರೇಶನ್ ಬಂಟ್ವಾಳ ತಾಲೂಕು ಮತ್ತು ತುಳುನಾಡ ಪೈಟರ್‍ಸ್ ಕೇಪು ಇದರ ಸಂಯುಕ್ತ ಆಶ್ರಯದಲ್ಲಿ 28 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ ಕೇಪು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್‍ಯಕ್ರಮವನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಗೌರವ ಕಾರ್‍ಯದರ್ಶಿ ರಾಜೇಂದ್ರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಪ್ರೀತಿಯಿಂದ ಎಲ್ಲವನ್ನು ಹಾಗೂ ಎಲ್ಲರನ್ನು ಗೆಲ್ಲಬಹುದು. ದ್ವೇಷದಿಂದ ಯಾವುದನ್ನು ಗೆಲ್ಲಲು ಸಾಧ್ಯವಿಲ್ಲ. ಅದು ನಮ್ಮನ್ನು ನಾಶಪಡಿಸುತ್ತದೆ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಹರಿ ಮಾತನಾಡಿ ಕಬಡ್ಡಿ ಪಂದ್ಯಾಟದಿಂದ ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಅದು ದೈಹಿಕ ಸಾಮಾರ್ಥ್ಯ ಹಾಗೂ ದಕ್ಷತೆಯನ್ನು ಹೆಚ್ಚುಸುತ್ತದೆ. ಧೈರ್‍ಯ ಹಾಗೂ ನಾಯಕತ್ವದ ಗುಣವನ್ನು ಕಲಿಸುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು ಅಶೋಕ್ ಎ. ಇರಾಮೂಲೆ ಅವರು ಮಾತನಾಡಿ ನಮ್ಮ ಮಕ್ಕಳು ಇಷ್ಟು ಶ್ರಮವಹಿಸಿ ಇಷ್ಟು ದೊಡ್ಡ ಕಬಡ್ಡಿ ಪಂದ್ಯಾಟವನ್ನು ನಡೆಸಿದಾಗ ಅವರ ಮನೆಯವರು ಬಂದು ಭಾಗವಹಿಸಿ ಪೋತ್ಸಾಹಿಸಬೇಕು. ಇದು ಮಕ್ಕಳ ಪ್ರತಿಭೆಗೆ ಕಾರಣವಾಗುತ್ತದೆ ಎಂದರು.
ನಿವೃತ್ತ ಯೋಧ ನಾರಾಯಣ ಪುರುಷ, ಬೀಜತ್ತಡ್ಕ ಕೇಪು ದೇವಸ್ಥಾನ ಪರಿಚಾರಕ ನಾರಾಯಣ ಪುರುಷ, ಕಬಡ್ಡಿ ಆಟಗಾರ್ತಿ ಸುಶ್ಮಿತಾ, ಭೂಮಿಕಾ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ಪೊಲೀಸ್ ಮಹಾನಿರೀಕ್ಷಕರ ಪ್ರಥಮ ದರ್ಜೆ ಸಹಾಯಕ , ಖಂಡಿಗ ಶಿವಕ್ಷೇತ್ರದ ಧರ್ಮದರ್ಶಿ ರವೀಶ್ ಕೆ.ಎನ್ ಖಂಡಿಗ, ಬಿ.ಎಸ್ ಬಾಲಕೃಷ್ಣ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ತಾರಾನಾಥ ಆಳ್ವ ಕುಕ್ಕೆಬೆಟ್ಟು, ವಿಷುಕುಮಾರ್ ಎನ್, ಜಿನಚಂದ್ರ ಜೈನ್, ಖಾಸಗಿ ಚಾನೇಲ್‌ನ ಕ್ಯಾಮಾರಮ್ಯಾನ್ ಕಿರಣ್ ಕುಮಾರ್, ಕುಶಾಲಪ್ಪ ಗೌಡ ದೂಜಮೂಲೆ, ಸುರೇಶ್ ಶೆಟ್ಟಿ ಪಡಿಬಾಗಿಲು, ಹಾಗೂ ಕೇಪು ತುಳುನಾಡ ಫೈಟರ್‍ಸ್‌ನ ಅಧ್ಯಕ್ಷ ಸುಧಾಕರ್ ಪೂಜಾರಿ ಬಡೆಕೋಡಿ ಉಪಸ್ಥಿತರಿದ್ದರು.

More articles

Latest article