ಬಂಟ್ವಾಳ: ಜೇಸಿಐ ಭಾರತ ಇದರ ನಿರ್ದೇಶನದಂತೆ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯ ಪ್ರಯುಕ್ತ ಜೇಸಿಐ ಜೋಡುಮಾರ್ಗ, ಜೇಸಿರೆಟ್ ವಿಭಾಗ ಹಾಗೂ ಯುವ ಜೇಸಿ ವಿಭಾಗದ ಜಂಟಿ ಸಹಯೋಗದಲ್ಲಿ ಜೋಡುಮಾರ್ಗದ ಸುತ್ತಮುತ್ತಲಿನ ವಿವಿಧ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರುಗಳು ಹಾಗು ಸಿಬ್ಬಂದಿಯವರುಗಳಿಗೆ ಫೆ.2 ರಂದು ಭಾವೈಕ್ಯತಾ ದಿನಾಚರಣೆಯ ಪ್ರಯುಕ್ತ ದೇಶದ ಗೌರವವನ್ನು ಕಾಪಾಡುವ ಹಾಗೂ ನೈತಿಕವಾಗಿ ಉತ್ತಮ ತತ್ವಾಧಾರಿತ ಬದುಕು ಸಾಗಿಸುವ ವಿಚಾರಗಳನ್ನು ಈ ಸಂದರ್ಭ ಅಳವಡಿಸಿಕೊಳ್ಳಬೇಕು ಹಾಗು ದೇಶದ ಸಮಗ್ರತೆಯನ್ನು ಎತ್ತಿ ಹಿಡಿಯಬೇಕು ಎಂಬ ಉದ್ದೇಶದೊಂದಿಗೆ ಪ್ರಮಾಣ ವಚನವನ್ನು ಬೋಧಿಸಲಾಯಿತು.


ಬಂಟ್ವಾಳದ ಎಸ್.ವಿ.ಎಸ್. ಇಂಗ್ಲೀಪ್ ಮೀಡಿಯಂ ಸ್ಕೂಲ್, ವಿದ್ಯಾಗಿರಿ, ಎಸ್.ವಿ.ಎಸ್. ಇಂಗ್ಲೀಪ್ ಮೀಡಿಯಂ ಸ್ಕೂಲ್, ಬಂಟ್ವಾಳ, ಎಸ್.ವಿ.ಎಸ್. ಕಾಲೇಜು ಬಂಟ್ವಾಳ, ಬರಾಕಾ ಇಂಟರ್ ನ್ಯಾಷನಲ್ ಸ್ಕೂಲ್ ಅಡ್ಯಾರ್, ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು, ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಂಚಿ ಕುಕ್ಕಾಜೆ, ಸರಕಾರಿ ಪದವಿ ಪೂರ್ವ ಕಾಲೇಜು ಬೆಂಜನಪದವು, ಸರಕಾರಿ ಪ್ರಾಥಮಿಕ ಶಾಲೆ ಸುರಿಬೈಲು ಕೊಲ್ನಾಡು, ಶ್ರೀ ರಾಮ ಹೈಸ್ಕೂಲ್, ಶ್ರೀ ರಾಮ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ರಾಮ ಪ್ರಥಮ ದರ್ಜೆ ಕಾಲೇಜು ಕಲ್ಲಡ್ಕ, ಶ್ರೀ ವಾಣಿ ವಿಜಯ ಹೈಸ್ಕೂಲು ಮಂಜೇಶ್ವರ, ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ವಳಚ್ಚಿಲ್, ಎಸ್ಡಿಎಂ ಕಾಲೇಜು ಉಜಿರೆ, ಸೈಂಟ್ ಅಲೋಸಿಯಸ್ ಕಾಲೇಜು ಮಂಗಳೂರು, ಸರಕಾರಿ ಪ್ರೌಢಶಾಲೆ ಮೋಂತಿಮಾರು, ಸರಕಾರಿ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜು ವಗ್ಗ, ಸರಕಾರಿ ಪ್ರೌಢಶಾಲೆ ಸಜೀಪ, ದೀಪಿಕಾ ಪ್ರೌಢಶಾಲೆ, ಮೊಡಂಕಾಪು, ಸರಕಾರಿ ಪ್ರೌಢ ಶಾಲೆ ಕೊಡಂಗೆ, ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಸ್ಕೂಲ್ ಅಡ್ಯಾರು ಈ ಎಲ್ಲಾ ಶಾಲೆಯ ವಿದ್ಯಾರ್ಥಿ ಗಳು, ಉಪನ್ಯಾಸಕರು, ಸಿಬ್ಬಂದಿಗಳಿಗೆ ಸುಮಾರು 15,000 ಕ್ಕೂ ಹೆಚ್ಚು ಮಂದಿಗಳಿಗೆ ಈ ದಿನ ಪ್ರತಿಜ್ಷಾ ವಿಧಿ ಬೋಧಿಸಲಾಯಿತು.
ಜೇಸಿಐ ಜೋಡುಮಾರ್ಗದ ಅಧ್ಯಕ್ಷ ಜೇಸಿ ಹರ್ಷರಾಜ್ ಸಿ, ಕಾರ್ಯದರ್ಶಿ ಜೇಸಿ ರವೀಂದ್ರ ಕುಕ್ಕಾಜೆ, ಉಪಾಧ್ಯಕ್ಷರುಗಳಾದ ಜೇಸಿ ಜಯರಾಜ್ ಎಸ್.ಬಂಗೇರ, ಜೇಸಿ ಧೀರಜ್ ಎಚ್, ಜೇಸಿ ಗಾಯತ್ರಿ ಲೋಕೇಶ್, ಜೇಸಿ ಹರಿಪ್ರಸಾದ್ ಕುಲಾಲ್, ಜೇಸಿ ಶನ್ಫತ್ ಷರೀಫ್, ಜೇಸಿರೆಟ್ ಅಧ್ಯಕ್ಷೆ ಜೇಸಿ ಅಮಿತಾ ಹರ್ಷರಾಜ್, ಜೇಜೇಸಿ ಅಧ್ಯಕ್ಷನಾದ ಜೇಜೇಸಿ ರೋನಿತ್, ನಿರ್ದೇಶಕರುಗಳಾದ ಜೇಸಿ ಸುಧಾಕರ ವೈ, ಜೇಸಿ ಸುಮನಾ ಎಸ್, ಜೇಸಿ ಆಶಿಕ್ ಕುಕ್ಕಾಜೆ, ಜೇಸಿ ಅಬ್ದುಲ್ ಸತ್ತಾರ್, ಜೇಸಿ ವೈಶಾಕ್, ಖಜಾಂಜಿಯಾದ ಜೇಸಿ ಹರಿಶ್ಷಂದ್ರ ಆಳ್ವ ಸದಸ್ಯರುಗಳಾದ ಜೇಸಿ ಬಾಲಚಂದ್ರ ಆಳ್ವ ಹಾಗೂ ಇನ್ನಿತರ ಪದಾಧಿಕಾರಿಗಳು ಮತ್ತು ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here