ಬಂಟ್ವಾಳ: ಸಂತ ಸೇವಾಲಾಲರ
ಮುಂದಾಲೋಚನೆ ಸರ್ವರಿಗೂ ಹಿತವನ್ನು ಬಯಸುವ ಗುಣ ನಮಗೆಲ್ಲರಿಗೂ ಆದರ್ಶವಾಗಬೇಕು
ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಅವರು ಹೇಳಿದರು.
ಬಂಟ್ವಾಳ ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ನಡೆದ, ಸಂತ ಶ್ರೀ ಸೇವಾಲಾಲ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು
ಸಂತ ಸೇವಾಲಾಲರ ಹೆಸರಲ್ಲಿಯೇ ‘ಸೇವೆ’
ಎಂಬ ಪದವಿದ್ದು ಬಂಜಾರ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯದ ಸೇವೆಗಾಗಿ
ತಮ್ಮನ್ನು ತಾವು ಅರ್ಪಿಸಿಕೊಂಡವರಾಗಿರುತ್ತಾರೆ
ಎಂದು ಹೇಳಿದರು.
ಬಂಜಾರ ಸಮುದಾಯದವರು ಶ್ರಮಜೀವಿಗಳು.
ಸರ್ವರಿಗೂ ಒಳಿತನ್ನು ಬಯಸುವವರು
ಬಂಜಾರ ಸಮುದಾಯಕ್ಕೆ ಮಾರ್ಗದರ್ಶಕರಿಲ್ಲದ ವೇಳೆಯಲ್ಲಿ ಕುಲಗುರುಗಳಾಗಿ ಮಾರ್ಗದರ್ಶಕರಾಗಿ ಬಂದವರು ಸಂತ ಶ್ರೀ ಸೇವಾಲಾಲರು ಎಂದು
ಕರಾವಳಿ ಲಂಬಾಣಿ
(ಬಂಜಾರ) ಜಿಲ್ಲಾ ಸಂಘದ
ಸಂಘಟನಾ ಕಾರ್ಯದರ್ಶಿಯವರಾದ ರಮೇಶ್ ಪಿ ನಾಯ್ಕ್ ರವರು
ಸಂತ ಶ್ರೀ ಸೇವಾಲಾಲರ ಜೀವನದ
ಸಂದೇಶವನ್ನು ವಿವರಿಸಿದರು.
ಬಂಜಾರ ಸಂಘದ ತಾಲೂಕು
ಪ್ರತಿನಿಧಿ ತಾರೇಶ ನಾಯ್ಕ, ಲೋಕ ನಾಯ್ಕ ವೇದಿಕೆಯಲ್ಲಿ ಹಾಜರಿದ್ದರು. ಬಂಜಾರ ಸಮುದಾಯದ ಮುಖಂಡರು,
‌ತಾಲೂಕು ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಭಾರ ಉಪತಹಶೀಲ್ದಾರ್ ಗ್ರೆಟ್ಟಾ ಮಸ್ಕರೇಞಂಸ್, ಆಹಾರ ಶಾಖೆಯ ಶ್ರೀನಿವಾಸ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್,
ತಾಲೂಕು ಕಚೇರಿ ಸಿಬಂದಿಗಳು,
ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು
ಸಾರ್ವಜನಿಕರು ಉಪಸ್ಥಿತರಿದ್ದರು.
ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here