Friday, October 27, 2023

ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

Must read

ಬಂಟ್ವಾಳ : ಜಿಲ್ಲೆಯ ಜೀವನದಿ ನೇತ್ರಾವತಿ ತಟದ ಕಾರಣೀಕ ಕ್ಷೇತ್ರ, ಸಮುದ್ರ ಮಟ್ಟದಿಂದ ಒಂದು ಸಹಸ್ರ ಅಡಿಗೂ ಎತ್ತರದ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಥಮ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ವಿವಿಧ ಸಾಂಸ್ಕೃತಿಕ , ಧಾರ್ಮಿಕ , ವೈದಿಕ ವಿದಿಗಳೊಂದಿಗೆ ಸಂಪನ್ನಗೊಂಡಿತು.
ಪ್ರತಿಷ್ಠಾ ಮಹೋತ್ಸವ ಪ್ರಥಮ ದಿನ ಫೆ. 24ರಂದು ನೇತ್ರಾವತಿ ನದಿಯಿಂದ ಪುಣ್ಯ ಜಲವನ್ನು ಸಂಗ್ರಹಿಸಿದ ವಟುವು ಬ್ಯಾಂಡ್ ವಾಲಗ, ಚೆಂಡೆ, ಜಾಗಟೆ, ಶಂಖ ನಾದ ಮೂಲಕ ಕ್ಷೇತ್ರಕ್ಕೆ ತರುವುದರೊಂದಿಗೆ ವೈದಿಕ ವಿಜಯ ಆರಂಭವಾಯಿತು.
ಊರಿನ ಜನರಿಂದ ಹಸಿರುವಾಣಿ ಹೊರೆಕಾಣಿಕೆ, ಸ್ಥಳೀಯ ಯುವ ಸಂಘಟನೆಗಳಿಂದ ಸೇವಾ ಕಾರ್ಯ, ಮಧ್ಯಾಹ್ನ ರಾತ್ರೆ ಅನ್ನ ಸಂತರ್ಪಣೆ, ಸಾಂಸ್ಕೃತಿಕ ವೈವಿಧ್ಯ ಅಂಗವಾಗಿ ಕಲ್ಲಡ್ಕದ ವಿಠಲ್ ನಾಯಕ್, ಸ್ಥಳೀಯ ಬೊಳಂತೂರು ಹಿ.ಪ್ರಾ. ಶಾಲೆ, ಅಂಗನವಾಡಿ, ನಾಟಿ ಹಿ.ಪ್ರಾ.ಶಾಲೆ, ಅಂಗನವಾಡಿ ಪುಟಾಣಿಗಳಿಂದ ವೇದಿಕೆಯಲ್ಲಿ ವಿವಿಧ ಸಂಗೀತ, ನಾಟ್ಯ, ಕುಣಿತ, ಕಿರು ನಾಟಕ, ಪ್ರಹಸನ ವೈವಿಧ್ಯಗಳು ನಡೆದವು.


ರಾತ್ರಿ ದೇವರ ವಿಶೇಷ ಪೂಜೆಯ ಬಳಿಕ ಕವಾಟ ಬಂಧನ ನಡೆಯಿತು. ಸೋಮವಾರ ಕವಾಟೋದ್ಘಾಟನೆ ಬಳಿಕ ವಿವಿಧ ವೈದಿಕ ಕಾರ್ಯಗಳು, ಮಧ್ಯಾಹ್ನ ವಿಶೇಷ ಪೂಜೆ, ರಾತ್ರಿ ಮಹಾ ನೈವೇದ್ಯ ರಾಶಿ ಪೂಜೆ ನಡೆದು ಪ್ರಸಾದವನ್ನು ಹಂಚಲಾಗಿತ್ತು.
ಮಾಜಿ ಸಚಿವ ಬಿ.ರಮಾನಾಥ ರೈ, ತಾ.ಪಂ. ಮಾಜಿ ಉಪಾಧ್ಯಕ್ಷ ಆನಂದ ಎ.ಶಂಭೂರು, ರೋಟರಿ ಕ್ಲಬ್ ಉಪಗವರ್ನರ್ ಯನ್. ಪ್ರಕಾಶ ಕಾರಂತ, ಸಾಮಾಜಿಕ ಸೇವಾಕರ್ತ ರಘು ಸಪಲ್ಯ,
ಪುರೋಹಿತ ಕೇಶವ ಶಾಂತಿ, ಆಡಳಿತ ಸಮಿತಿಯ ಪದಾಽಕಾರಿಗಳಾದ ಮೋನಪ್ಪ ಪೂಜಾರಿ, ಸಂಜೀವ ಸಪಲ್ಯ, ಸಂಜೀವ ಪೂಜಾರಿ, ಪ್ರಶಾಂತ ಪೂಜಾರಿ, ಕೇಶವ ಪಲ್ಲತಿಲ, ಪ್ರಮುಖರಾದ ಮನೋಜ್ ಕೇದಿಗೆ, ಚಂದ್ರಶೇಖರ ಕಲ್ಯಾಣಾಗ್ರಹಾರ, ಪುರುಷೋತ್ತಮ ಸಾಲ್ಯಾನ್ ದಿಂಡಿಕೆರೆ, ಪ್ರೇಮನಾಥ ಶೆಟ್ಟಿ ಅಂತರ, ಪುರುಷೋತ್ತಮ ಬಂಗೇರ ನಾಟಿ, ಕೇದಿಗೆ ಫ್ರೆಂಡ್ಸ್, ಗೆಳೆಯರ ಬಳಗ, ಭಗವಾನ್ ಶ್ರೀ ಕೋದಂಡರಾಮ ಭಜನಾ ಮಂದಿರದ ಸದಸ್ಯರು, ಗ್ರಾ.ಪಂ.ಅಧ್ಯಕ್ಷ ಯಶೋಧರ ಕರ್ಬೆಟ್ಟು, ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ, ರಂಜಿತ್ ಕೆದ್ದೇಲು, ತ್ರಿವೇಣಿ ಕೇದಿಗೆ, ರವೀಂದ್ರ ಸಪಲ್ಯ, ಜಯರಾಜ್, ಮಾಧವ ಕರ್ಬೆಟ್ಟು , ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಾಜಾ ಬಂಟ್ವಾಳ ಸ್ವಾಗತಿಸಿ, ಪ್ರಸ್ತಾವನೆ ನೀಡಿದರು. ರಜನಿ ಮನೋಜ್ ವಂದಿಸಿದರು. ರೋಹಿಣಿ ಪ್ರಮೋದ್ ಕಾರ್ಯಕ್ರಮ ನಿರ್ವಹಿಸಿದರು.

More articles

Latest article