ಬಂಟ್ವಾಳ, ಫೆ. ೧೫: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ
ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ಅವರ ವತಿಯಿಂದ ರಾತ್ರಿ 7.00 ಗಂಟೆಗೆ ನುಡಿನಮನ ಕಾರ್ಯಕ್ರಮ ನಡೆಯಿತು.



ಘಟನೆಯನ್ನು ಖಂಡಿಸಿ ಮೌನಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ವೀರಯೋಧರ ಭಾವಚಿತ್ರ ಕ್ಕೆ ಪುಷ್ಪಾಂರ್ಚನೆ ಮಾಡಿದರು.
ಬಳಿಕ ಮಾತನಾಡಿದ ಸತ್ಯಜಿತ್ ಸುರತ್ಕಲ್ ಮಾತನಾಡಿ
ದೇಶ ಕಾಯುವ ನಮ್ಮ ವೀರ ಸೈನಿಕರು ಹೇಡಿ ಉಗ್ರರ ದಾಳಿಗೆ ಬಲಿಯಾದ ಕ್ಷಣ ಇಡೀ ದೇಶದ ಜನತೆಯನ್ನು ಕಣ್ಣೀರು ಹಾಕುವಂತೆ ಮಾಡಿದೆ.
ಪ್ರತಿಯೊಬ್ಬ ಸೈನಿಕರ ಬಲಿದಾನವು ನಮಗೆ ನೋವು ತಂದಿದೆ.
ಮಾನವ ಹಕ್ಕುಗಳ ಹೆಸರಿನಲ್ಲಿ ಸೈನಿಕರ ಮೇಲೆ ಆಕ್ರಮಣ, ಕೆಲವು ರಾಜಕೀಯ ಪಕ್ಷಗಳ ತೊಂದರೆ , ಪ್ರತಿಕೂಲ ಪರಿಸ್ಥಿತಿ ಯ ಜೊತೆ ಹೋರಾಟ ಇವೆಲ್ಲವುಗಳ ಮಧ್ಯೆ ದೇಶ ರಕ್ಷಣೆ ಮಾಡುವ ಸೈನಿಕರ ಬಗ್ಗೆ ನಾವು ಒಂದು ದಿನವೂ ಯೋಚನೆ ಮಾಡಿಲ್ಲ, ಅವರ ಕುಟುಂಬದ ಸ್ಥಿತಿ ಯನ್ನು ನೋಡಿಲ್ಲ.
ದೇಶದ ರಕ್ಷಣೆ ಗೋಸ್ಕರ ಪ್ರತಿಕ್ಷಣವೂ ತುಡಿತದಲ್ಲಿರುವ ಸೈನಿಕರಿಗೆ ಶಕ್ತಿತುಂಬುವ ಕೆಲಸ ನಾವೆಲ್ಲ ರೂ ಮಾಡಬೇಕಾಗಿದೆ.
ದೇಶದ್ರೋಹಿಗಳಿಗೆ ಆಶ್ರಯ ನೀಡುವ ಭಯೋತ್ಪಾದಕ ರು ನಮ್ಮ ನೆರೆಹೊರೆಯಲ್ಲಿದ್ದಾರೆ ಎಂಬುದು ವಿಷಾದನೀಯ ಎಂದರು. ಇಡೀ ಜಗತ್ತಿಗೆ ಬೇರೆ ಬೇರೆ ಹೆಸರಿನಲ್ಲಿ ಭಯೋತ್ಪಾದಕ ಹೆಸರಿನ ಲ್ಲಿ ಇಸ್ಲಾಮೀ ಕರಣ ಮಾಡಲು ಕೆಲಸ ಮಾಡುತ್ತಿದೆ .
ಜವಬ್ದಾರಿ ನಾಗರೀಕರಾಗಿ ನಾವು ದೇಶ ದ್ರೋಹಿಗಳ ವಿರುದ್ದ ಹೋರಾಟ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ, ರವಿರಾಜ್ ಬಿಸಿರೋಡ್, ಚಂದ್ರಕಲಾಯಿ, ರತ್ನಾಕರ ಶೆಟ್ಟಿ, ಮಚ್ಚೇಂದ್ರ ಸಾಲಿಯಾನ್, ಶೇಖರ್ ಶೆಟ್ಟಿ, ಯೋಗೀಶ್ ತುಂಬೆ ಮತ್ತಿತರ ರು ಉಪಸ್ಥಿತರಿದ್ದರು.