Sunday, October 22, 2023

ಇಡ್ಕಿದು: ರಸ್ತೆ ಕಾಂಕ್ರೀಟೀಕರಣ ಉದ್ಘಾಟನೆ

Must read

ಇಡ್ಕಿದು: ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ಒಗ್ಗೂಡಿದರೆ ಉತ್ತಮ ಕಾಮಗಾರಿಗಳನ್ನು ನಿರ್ವಹಿಸಲು ಸಾಧ್ಯ . ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಮಗಾರಿಗಳನ್ನು ಪೂರೈಸುವಲ್ಲಿ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು ಹೇಳಿದರು.
ಅವರು 14 ನೇ ಹಣಕಾಸು ಆಯೋಗದ ಅನುದಾನ ಮತ್ತು ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್‍ಮಾಣಗೊಂಡ ಅಳಕೆಮಜಲು – ಗುತ್ತು , ಪುಂಡಿಕಾಯಿ – ಬೀಡಿನಮಜಲು ಮತ್ತು ಬೀಡಿನಮಜಲು ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ವನಜಾಕ್ಷಿ ಎಸ್. ಭಟ್, ಪಂ. ಅಧ್ಯಕ್ಷರಾದ ಚಂದ್ರಾವತಿ, ಉಪಾಧ್ಯಕ್ಷರಾದ ಎಂ.ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು, ಪಂ.ಸದಸ್ಯರಾದ ಜಯರಾಮ ಕಾರ್‍ಯಾಡಿಗುತ್ತು, ಸತೀಶ ಕೆಂರ್ದೆಲು, ಹಿಮಾಕರ ಗಾಣಿಗ, ವಸಂತಿ, ಜಗದೀಶ್ವರಿ, ಪ್ರೇಮ, ಶಾರದಾ, ಆಶಾ, ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವಿಶ್ವಸ್ಥ ಮಂಡಳಿಯ ಮಾಜಿ ಅಧ್ಯಕ್ಷರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಪಂಚಾಯಿತಿ ಮಾಜಿ ಪಂ. ಸದಸ್ಯರಾದ ಸುಧಾಕರ ಶೆಟ್ಟಿ ಬೀಡಿನಮಜಲು, ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾನ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಭಟ್ ಬಡಜ, ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳು, ಗುತ್ತಿಗೆದಾರರಾದ ಆದಂ ಮಿತ್ತೂರು, ಉಪಸ್ಥಿತರಿದ್ದರು. ಪಿಡಿಒ ಗೋಕುಲ್ ದಾಸ್ ಭಕ್ತ, ಸ್ವಾಗತಿಸಿದರು. ಕಾರ್‍ಯದರ್ಶಿ ಅಜಿತ್ ಕುಮಾರ್ ವಂದಿಸಿದರು.

More articles

Latest article