ವಿಟ್ಲ: ಅಹಂಭಾವ ತೊರೆದು ಮಾಡುವ ಕೆಲಸದಲ್ಲಿ ಪರಿಪೂರ್ಣತೆ ಇರುತ್ತದೆ. ರಾಜಮನೆತನದವರಲ್ಲಿ ಸ್ವಾತಂತ್ರ್ಯದ ಕಿಚ್ಚು ಇದ್ದ ಕಾರಣ ದಿಟ್ಟತನದಿಂದ ಇರಲು ಸಾಧ್ಯವಾಗಿದೆ. ಜಾತಿ ಮತ ಭೇದವಿಲ್ಲದೆ ದೇವರ ಸನ್ನಿಧಿಯಲ್ಲಿ ಸಂಸ್ಕಾರ ನೀಡುವ ಕಾರ್ಯ ಶ್ಲಾಘನೀಯ ಎಂದು ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕರಾಮ ಪೂಜಾರಿ ಹೇಳಿದರು.


ಅವರು ಬುಧವಾರ ಕುಂಡಡ್ಕ ಶ್ರೀ ವಿಷ್ಣಮೂರ್ತಿ ದೇವಸ್ಥಾನ, ಮಾಡ ಶಿಬರಿಕಲ್ಲ ಶ್ರೀ ಮಲರಾಯ – ಮೂವರ್ ದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಉಗ್ರಾಣ ಹಾಗೂ ಪ್ರಾಕ್ತನ ವಸ್ತು ಸಂಗ್ರಹಾಲಯ ಉದ್ಘಾಟಿಸಿ ಮಾತನಾಡಿದರು.
ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು ಧ್ವಜಾರೋಹಣ ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಹಿಸಿದ್ದರು. ಕರ್ಗಲ್ಲು ನೂಜಿ ಮನೆತನ ಕೆ. ಟಿ. ವೆಂಕಟೇಶ್ವರ, ಕುಳ ಮನೆತನ ರವೀಂದ್ರ ಅಡ್ಯಂತಾಯ, ಕುಂಡಡ್ಕ ಕುಡ್ವ ಮನೆತನ ಯೋಗೀಶ ಕುಡ್ವ, ಕುಂಡಡ್ಕ ಯಾಮಿನಿ ಶ್ರೀದೇವಿ ಅಮರ್ ಜಿತ್ ಮಲ್ಲಿ ಉಪಸ್ಥಿತರಿದ್ದರು.
ಬ್ರಿಜೇಷ್ ಮತ್ತು ತಂಡ ಪ್ರಾರ್ಥಿಸಿದರು. ಪೈಸಾರಿ ಪದ್ಮಯ್ಯ ಗೌಡ ಸ್ವಾಗತಿಸಿದರು. ಸಂಘಟನಾ ಕಾರ್‍ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು ಪ್ರಸ್ತಾವನೆಗೈದರು. ಚರಣ್ ಅಮೈ ಧರ್ಮನಗರ ಅಮೃತವಚನ ವಾಚಿಸಿದರು. ಬಾಲಕೃಷ್ಣ ಪೆಲತ್ತಿಂಜ ವಂದಿಸಿದರು. ಐಟಿಐ ಕಿರಿಯ ತರಬೇತಿ ಅಧಿಕಾರಿ ನಾರಾಯಣ ಪೂಜಾರಿ ಪಿಲಿಂಜ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here