Sunday, October 22, 2023

ಹುತಾತ್ಮರಾದ ಸೈನಿಕರಿಗೆ ಕಲ್ಲಡ್ಕದಲ್ಲಿ ಡಾ!ಪ್ರಭಾಕರ್ ಭಟ್ ನುಡಿನಮನ

Must read

*ಕಲ್ಲಡ್ಕ ಶ್ರೀರಾಮ ಮಂದಿರದ ನೇತೃತ್ವದಲ್ಲಿ ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಹತ್ಯೆಯನ್ನು ಖಂಡಿಸಿ, ಮಡಿದ ವೀರ ಯೋಧರಿಗೆ ಕಲ್ಲಡ್ಕ ಶ್ರೀರಾಮ ಮಂದಿರದ ರಾಜ ಗೋಪುರದ ಮುಂದುಗಡೆ ದೀಪ ಪ್ರಜ್ವಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು ನುಡಿನಮನ ಸಲ್ಲಿಸಿ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿದರು.

ನಮಗೆಲ್ಲ ಸವಾಲಿನ ದಿನ ಬಂದಿದೆ ಮನುಷ್ಯ ಬದುಕಲು ಅಸಾಧ್ಯವಾದ ಜಾಗದಲ್ಲಿ ದೇವ ಸ್ವರೂಪಿ ಗಳಾದ ಸೈನಿಕರನ್ನು ರಾಕ್ಷಸರು ಮೋಸದಲ್ಲಿ ಕೊಂದರು. 1947 ರಲ್ಲಿ ದೇಶ ವಿಭಜನೆಯ ಘಟನೆಯಿಂದಾಗಿ ನಾವು ಇಂದು ಈ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ಈ ದೇಶವನ್ನು ನಾಶ ಮಾಡಬೇಕೆಂದು ಪ್ರಯತ್ನ ದೇಶದ ವ್ಯವಸ್ಥೆಯನ್ನು ನಾಶ ಮಾಡಬೇಕು ಎಂಬ ಪ್ರಯತ್ನ ಅಲ್ಲಿನ ರಾಜ್ಯದಲ್ಲಿ ಬಹುತೇಕ ಜನ ಉಗ್ರಗಾಮಿಗಳಿಗೆ ಬೆಂಬಲ ಕೊಡುವವರಿದ್ದಾರೆ ಆದ್ದರಿಂದ ಇಂತಹ ಘಟನೆಗಳು ನಡೆಯುತ್ತದೆ ಎಲ್ಲಿಯವರೆಗೂ ಪಾಕಿಸ್ತಾನ ಇರುತ್ತದೆ ಅಲ್ಲಿಯವರೆಗೆ ಇಂತಹ ಸಮಸ್ಯೆಗಳು ನಡೆಯುತ್ತಲೇ ಇರುತ್ತದೆ. ಅದಕ್ಕಾಗಿ ನಾವು ಏನೆಂದರೆ ಒಂದು ಸಲ ಪಾಕಿಸ್ತಾನವನ್ನು ನಾಶಮಾಡಬೇಕು ಬೇರು ನಾಶವಾಗದೇ ಕೇವಲ ರೆಂಬೆಗಳನ್ನು ಎಲೆಗಳನ್ನು ಕತ್ತರಿಸಿದರೆ ಅಲ್ಲಿ ಇರುವ ವಿಷ ಜಂತುಗಳು ಸಾಯುದಿಲ್ಲ ಒಂದು ಸಲ ಪಾಕಿಸ್ತಾನವೇ ನಾಶವಾದರೆ ಇಡೀ ಜಗತ್ತಿಗೆ ಸಮಸ್ಯೆ ಪರಿಹಾರವಾಗುತ್ತದೆ. ಸೈನಿಕರಿಗೆ ಶಕ್ತಿ ಕೊಡುವ ವಿಷಯ ಇಡೀ ಹಳ್ಳಿ ಹಳ್ಳಿಗಳಲ್ಲಿ ನಡೆಯಬೇಕು ನಾವು ನಿತ್ಯ ನಿರಂತರ ಜಾಗೃತರಾಗಿರಬೇಕು ಮತ್ತೆ ಅಖಂಡ ಭಾರತ ಸಂಕಲ್ಪ ಈಡೇರುವ ಸಮಯ ಬಂದಿದೆ ನಮ್ಮ ಮಧ್ಯದಲ್ಲಿ ದೇಶ ದ್ರೋಹಿ ಗಳಿದ್ದಾರೆ ರಾತ್ರಿ ಹಗಲು ನಾವು ನಮ್ಮ ಸಮಾಜವನ್ನು ಕಾಯಬೇಕಾಗಿದೆ ಬೀದಿಬೀದಿಗಳಲ್ಲಿ ರಸ್ತೆ ರಸ್ತೆಗಳಲ್ಲಿ ದೇಶ ನಿರ್ಮಾಣ ಕಾರ್ಯಗಳು ನಡೆಯಬೇಕಾಗಿದೆ ಇನ್ನು ಕಾದು ಕುಳಿತು ಕೊಳ್ಳಲು ಸಾಧ್ಯವಿಲ್ಲ ಯೋಧರ ಕುಟುಂಬದ ದುಃಖವನ್ನು ತಡೆಯುವವರು ನಾವು ರಕ್ತವನ್ನೇ ಕೊಡುತ್ತೇವೆ ಪ್ರಾಣವನ್ನ ಕೊಡುತ್ತೇವೆ ಆದರೆ ದೇಶವನ್ನು ಬಿಟ್ಟು ಕೊಡುವುದಿಲ್ಲ ಈ ಕಾರ್ಯಕ್ರಮ ನ್ಯೂಸ್ ಗಾಗಿ ಅಲ್ಲ ಪ್ರಚಾರಕ್ಕಾಗಿ ಅಲ್ಲ ಉಗ್ರರ ವಿರುದ್ಧ ಸೇಡು ತೀರಿಸಲು ವೀರ ಯೋಧರ ಬಲಿದಾನವನ್ನು ಸವಾಲಾಗಿ ಸ್ವೀಕರಿಸಬೇಕು ರಕ್ತದ ಓಕುಳಿ ಬೇಕಾದರೂ ಹರಿಯಲಿ ಆದರೆ ಈ ದೇಶವನ್ನು ಬಿಡಲ್ಲ ಆದ್ದರಿಂದ ಕಾಶ್ಮೀರದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಪದ್ಮನಾಭ ಕೊಟ್ಟಾರಿ ಚೆನ್ನಪ್ಪ ಕೋಟ್ಯಾನ್ ದಿನೇಶ್ ಅಮ್ಟೂರು ಕ ಕೃಷ್ಣಪ್ಪ ಸುಜಿತ್ ಕೊಟ್ಟಾರಿ ಯತಿನ್ ಕುಮಾರ್ ಎಳ್ತಿಮಾರ್ ಹಾಗೂ ದೇಶಭಕ್ತ ತರುಣರು ಭಾಗವಹಿಸಿದ್ದರು*.

More articles

Latest article