ಉಜಿರೆ: ಧರ್ಮಸ್ಥಳದಲ್ಲಿ ಗುರುವಾರ ಅಪರಾಹ್ನ ಎರಡು ಗಂಟೆ ಹದಿನೈದು ನಿಮಿಷಕ್ಕೆ ಪಂಚಮಹಾವೈಭವ ಮಂಟಪದ ಬದಿಯ ಭಾಗ ಗಾಳಿಗೆ ಕುಸಿದು ಬಿದ್ದು ನಾಲ್ಕು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಪೊಲೀಸರು, ಅಗ್ನಿಶಾಮಕ ದಳದವರು, ಗೃಹ ರಕ್ಷಕ ದಳದವರು ಮತ್ತು ಸಾರ್ವಜನಿಕರು ಸೇರಿ ವಾತಾವರಣ ತಿಳಿ ಮಾಡಲು ಸಹಕರಿಸಿದರು.
ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಉಜಿರೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಂಗಳೂರಿನ ಅಗ್ನಿಶಾಮಕ ದಳದ ಪ್ರಾದೇಶಿಕ ಅಧಿಕಾರಿ ತಿಪ್ಪೇಸ್ವಾಮಿ ಮತ್ತು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶೇಖರ್ ಗುರುವಾರ ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಊಟದ ಸಮಯವಾದುದರಿಂದ ಸಭೆ ಮುಗಿದು ಹೆಚ್ಚಿನವರು ಊಟಕ್ಕೆ ಹೋಗಿದ್ದರು. ಅದೃಷ್ಟ ವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here