Friday, October 20, 2023

ಫೆ.24: ಸಜೀಪದಲ್ಲಿ ಶ್ರೀ ದೇವಿ ಮಹಾತ್ಮೆ

Must read

ಬಂಟ್ವಾಳ: ಶ್ರೀ ದುರ್ಗಾಪರಮೇಶ್ವರಿ ಭಕ್ತವ್ರಂದ, ಸಜೀಪಮಾಗಣೆ ಯ ವತಿಯಿಂದ ಮೂರನೇ ವರ್ಷದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಸೇವೆ ಬಯಲಾಟ ಫೆ.24 ರಂದು ಆದಿತ್ಯವಾರ ಸಜೀಪ ಮೂಡದ ಶ್ವೇತಾ ಗಣೇಶ್ ಶಿರ್ವ ಇವರ ಪೆಲತ್ತಕಟ್ಟೆಯ ಮೈದಾನದಲ್ಲಿ ನಡೆಯಲಿದೆ ಎಂದು ಸಜೀಪ ಮಾಗಣೆ ಯ ಶ್ರೀದುರ್ಗಾಪರಮೇಶ್ವರಿ ಭಕ್ತವ್ರಂದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಂಜೆ 6.30 ರಿಂದ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮ ದ ದೀಪೋಜ್ವಲನ ಮತ್ತು ಆರ್ಶೀವಚನ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಮತ್ತು ಪರಮಪೂಜ್ಯ ಶ್ರೀ ಶ್ರೀಶ್ರೀ ಅನಂತ ಪದ್ಮನಾಭ ಅಸ್ರಣ್ಣರು ನೀಡಲಿದ್ದಾರೆ.
ಸಂಜೆ 5 ಗಂಟೆಗೆ ಕಂದೂರು, ಸಜೀಪ ಮುನ್ನೂರು ಯುವಕಸಂಘ ದ ಬಳಿಯಿಂದ ಪೆಲತ್ತಕಟ್ಟೆಗೆ ಭಜನೆ, ಚೆಂಡೆ,ಬ್ಯಾಂಡ್ ವಾದನಗಳೊಂದಿಗೆ ಮೇಳದ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದೆ. ರಾತ್ರಿ 8 .30 ಕ್ಕೆ ಚೌಕಿ ಪೂಜೆ ಬಳಿಕ ಪ್ರಸಾದ ,ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

More articles

Latest article