ಬಂಟ್ವಾಳ : ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಇಲ್ಲಿ ಭಾರತ್ ಸ್ಕೌಟ್ಸ್ – ಗೈಡ್ಸ್‌ನ ವಾಮದಪದವು ಸ್ಥಳೀಯ ಸಂಸ್ಥೆಗೆ ಒಳಪಟ್ಟ ಶಾಲೆಗಳಿಂದ ಸ್ಕೌಟ್ಸ್ – ಗೈಡ್ಸ್ ಮತ್ತು ಕಬ್ಸ್ – ಬುಲ್ ಬುಲ್ಸ್ ವಿದ್ಯಾರ್ಥಿಗಳು ಕ್ರಮವಾಗಿ ಸಂಸ್ಥೆಯು ನಡೆಸುವ ದ್ವಿತೀಯ ಸೋಪಾನ, ದ್ವಿತೀಯ ಚರಣ ಮತ್ತು ರಜತ್ ಪಂಖ್ ಪರೀಕ್ಷೆಯಲ್ಲಿ ಭಾಗವಹಿಸುತ್ತಾರೆ. ಕಾರ್ಯಕ್ರಮ ಶಾಲಾ ಚೆಯರ್‌ಮೆನ್ ಜನಾಬ್ ಶೇಕ್ ರಹ್ಮತ್ತುಲ್ಲಾ ಕಾರ್ಯಧ್ಯಕ್ಷರು, ಎ.ಡಿ.ಸಿ. ವಾಮದಪದವು ಸ್ಥಳೀಯ ಸಂಸ್ಥೆ ಮತ್ತು ಸಂಚಾಲಕರು ಬುರೂಜ್ ಅವರಿಂದ ಉದ್ಘಾಟನೆಗೊಂಡಿತು. ಸ್ಕೌಟ್ಸ್ ವಿದ್ಯಾರ್ಥಿಯಾದ ರಕ್ಷಣ್ ಆರ್ ಅಡಪ ಧ್ವಜಾರೋಹಣಗೈದರು. ಕಾರ್ಯಕ್ರಮದಲ್ಲಿ ಮೋಹನ್ ಎಚ್, ಕಾರ್ಯದರ್ಶಿಗಳು ವಾಮದಪದವು ಸ್ಥಳಿಯ ಸಂಸ್ಥೆ, ಮತ್ತು ಜಯಶ್ರೀ ಬಿ., ವನಿತಾ, ರೇವತಿ, ಸುಷ್ಮಾ, ಖುರ್ಷಿದ್ ಬಾನು, ವಿಮಲಾ, ಶೋಭಾ, ಮಮತಾ ಮತ್ತು ನಮಿತಾ ಪರೀಕ್ಷಾ ಶಿಬಿರವನ್ನು ನಡೆಸಿಕೊಟ್ಟರು. ಸುಮಾರು 101 ಪರೀಕ್ಷಾರ್ಥಿಗಳು ಹಾಜರಿದ್ದರು.
