Tuesday, September 26, 2023

ಕೋರ್ಯಾರು ದೇವಸ್ಥಾನ: ಭಜನ ಮಂಗಲೋತ್ಸವ,ಶನಿಪೂಜೆ

Must read

ಬಂಟ್ವಾಳ: ಸಿದ್ದಕಟ್ಟೆ ಸಮೀಪದ ಕೋರ್ಯಾರು ಶ್ರೀ ದುರ್ಗಾಮಹಮ್ಮಾಯೀ ದೇವಸ್ಥಾನದಲ್ಲಿ ಸೂರ್ಯೋದಯದಿಂದ ಸೂಯಾಸ್ತದವರೆಗೆ ೫೨ನೇ ವರ್ಷದ ಭಜನ ಮಂಗಲೋತ್ಸವ ಹಾಗೂ ಸಾರ್ವಜನಿಕ ಶ್ರೀ ಶನಿಪೂಜೆ ರವಿವಾರ ಜರಗಿತು.


ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ಭಜನೆ ಮಂಗಳೋತ್ಸವ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಪ್ರಫುಲ್ಲ ರೈ ಮಂಜನದೊಟ್ಟು ಅವರು ಉದ್ಘಾಟಿಸಿರು. ಶ್ರೀ ಕ್ಷೇತ್ರ ಪೂಂಜದ ಪ್ರ. ಅರ್ಚಕ ಪ್ರಕಾಶ್ ಭಟ್ ಅವರು ಪ್ರಾರ್ಥನೆ ನೆರವೇರಿಸಿ ಶನಿ ಪೂಜೆ ನಡೆಸಿದರು. ಬಳಿಕ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನೆ ಮಂಗಳ,ಪ್ರಸಾದ ವಿತರಣೆ,ರಂಗಪೂಜೆ ನಡೆಯಿತು. ದೇವಸ್ಥಾನದ ಗುರಿಕಾರ ಗೋಪಾಲ ಗೌಡ, ಎರಡನೇ ಗುರಿಕಾರ ಓಬಯ್ಯ ಗೌಡ ಕುಕ್ಕೇಡಿ, ಆಡಳಿತ ಮಂಡಳಿ ಸದಸ್ಯರು, ಕೋರ್ಯಾರು ಶ್ರೀ ದುರ್ಗಾಮಹಮ್ಮಾಯೀ ಭಜನ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ವಿವಿಧೆಡೆಯ ೧೮ ಭಜನ ತಂಡಗಳು ಭಜನ ಕಾರ್ಯಕ್ರಮ ನಡೆಸಿಕೊಟ್ಟರು.

More articles

Latest article