ಬಂಟ್ವಾಳ:  ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪಶುಸಂಗೋಪನೆ ಎಂಬುದು ರೈತರ ಇನ್ನೊಂದು ಭಾಗ. ನಾನು ಕೂಡ ಒಬ್ಬ ರೈತನಾಗಿದ್ದು, ನನ್ನಲ್ಲಿ 150ಕ್ಕೂ ಮಿಕ್ಕ ಪಶುಗಳಿವೆ. ಹಾಗಾಗಿ ಅವುಗಳ ಅಗತ್ಯ ಮತ್ತು ಕಷ್ಟ ನನಗೆ ಚೆನ್ನಾಗಿ ಗೊತ್ತಿದೆ. ಇದು 2015-16ರಲ್ಲಿ ಮಂಜೂರಾತಿ ಪಡೆದಿತ್ತು. ಗುಡ್ಡಪ್ರದೇಶದಲ್ಲಿರುವ ಈ ಕೇಂದ್ರ ಜನರಿಗೆ ದೂರವಾದರೂ ಹೆಚ್ಚು ಅನುಕೂಲಕರವಾಗಲಿದೆ ಎಂಬುದು ನನ್ನ ಭಾವನೆ ಎಂದು ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ದಕ ಜಿಪಂ(ಮಂಗಳೂರು), ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ(ಬಂಟ್ವಾಳ) ಹಾಗೂ ದಕ ನಿರ್ಮಿತಿ ಕೇಂದ್ರ(ಸುರತ್ಕಲ್) ಇವರ ಜಂಟಿ ಆಶ್ರಯದಲ್ಲಿ ಆರೈಡಿಎಫ್ 21 ಯೋಜನೆಯಡಿ ಬೆಂಜನಪದವಿನಲ್ಲಿ ನಿರ್ಮಿಸಲಾದ ನೂತನ ‘ಪಶು ಚಿಕಿತ್ಸಾಲಯ’ ಕಟ್ಟಡ ಉದ್ಘಾಟಿಸಿ ಶಾಸಕರು ಮಾತನಾಡಿದರು.
ಅಮ್ಮುಂಜೆ ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ ಎಲ್ ಪೂಜಾರಿ ಮಾತನಾಡುತ್ತ, ಇದು ನಮ್ಮ ಬಹುಕಾಲದ ಬೇಡಿಕೆಯಾಗಿದ್ದು, ಇಂದು ಲೋಕಾರ್ಪಣೆಗೊಂಡಿದೆ. ಮಾಜಿ ಸಚಿವ ರಮಾನಾಥ ರೈ ಪ್ರಯತ್ನದ ಫಲ ಇದಾಗಿದೆ. ಇದು ಈ ಭಾಗದ ರೈತರಿಗೆ ಹೆಚ್ಚು ಅನುಕೂಲಕರವಾಗಲಿದೆ ಎಂದರು.
ಶಾಸಕರು ಹೇಳಿದಂತೆ ಇದು ಹೆಚ್ಚು ರೈತರು ಇರುವ ಪ್ರದೇಶ. ಹಾಗಾಗಿ ಈ ರೈತರಿಗೆ ಪೂರಕವಾದ ಪಶು ಸಂಗೋಪನೆಗೆ ಪಶು ವೈದ್ಯಕೀಯ ಆಸ್ಪತ್ರೆಗಳು ಅತಿ ಅವಶ್ಯ. ಇದರಲ್ಲಿ ಅತ್ಯುತ್ತಮ ಸೌಕರ್ಯಗಳಿದ್ದರೆ ವೈದ್ಯರಿಂದ ಉತ್ತಮ ಸೇವೆ ನೀಡಲು ಸಾಧ್ಯವಿದೆ ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಎಸ್ ಮೋಹನ್ ಹೇಳಿದರು.ಎಚ್ ಆರ್ ಲಾಸ್ರದೋ ಸ್ವಾಗತಿಸಿದರು.ಯೋಜನಾ ನಿರ್ದೇಶಕರು ರಾಜೇಂದ್ರ ಕಲ್ಬಾವಿ, ಅಮ್ಮುಂಜೆ ಪಂ.ಉಪಾಧ್ಯಕ್ಷ ವಾಮನ ಆಚಾರ್ಯ, ಚಂದ್ರಶೇಖರ ಭಂಡಾರಿ, ಉಮೇಶ್ ಶೆಟ್ಟಿ, ಕಾರ್ತಿಕ್ ಬಲ್ಲಾಳ್ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here