ವಿಟ್ಲ : ವಿಟ್ಲ ಶಾಲಾ ರಸ್ತೆಯಲ್ಲಿರುವ ಬೆನಕ ಕ್ಲಿನಿಕ್‌ನ ಸುವರ್ಣ ಮಹೋತ್ಸವ (೧೯೬೯-೨೦೧೯) ಸಮಾರಂಭವು ಬೆನಕ ರಥಬೀದಿಯಲ್ಲಿ ಭಾನುವಾರ ನಡೆಯಿತು.
ಎ.ಜೆ.ಶೆಟ್ಟಿ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ರಾಮದಾಸ್ ರೈ ಅಧ್ಯಕ್ಷತೆ ವಹಿಸಿ, ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಡಾ.ರಾಮಮೋಹನ್ ಮತ್ತು ಪುತ್ರ ಡಾ.ಅರವಿಂದ್ ಅವರ ಸಂಪರ್ಕವಿದೆ. ಡಾ.ರಾಮಮೋಹನ್ ಅವರು ಲಯನ್ಸ್ ಕ್ಲಬ್ ಮೂಲಕ ಸಮಾಜಸೇವೆ ಸಲ್ಲಿಸುತ್ತಿದ್ದರು. ಮಾತ್ರವಲ್ಲ, ಅವರ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಸೇವೆ ಅಮೂಲ್ಯವಾದುದು ಎಂದು ಹೇಳಿದರು.
ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ ಅವರು ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿ, ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಡಾ. ರಾಮಮೋಹನ ಅವರ ಪಾತ್ರ ಬಹಳವಿತ್ತು. ಧಾರ್‍ಮಿಕವಾಗಿ ಸಾಮಾಜಿಕವಾಗಿ ಗಣನೀಯ ಸೇವೆ ಸಲ್ಲಿಸಿದ್ದರು. ವಿಟ್ಲದ ಪ್ರಮುಖ ಕಾರ್‍ಯಗಳಿಗೆ ಅವರು ಮಾರ್ಗದರ್ಶನ ಮಾಡುತ್ತಿದ್ದರು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್ ಅವರು ಸಿಬಂದಿಗಳಿಗೆ ಆರೋಗ್ಯ ವಿಮೆಯನ್ನು ವಿತರಿಸಿ, ಮಾತನಾಡಿದರು.
ಇದೇ ಸಂದರ್ಭ ೨೦ಕ್ಕೂ ಅಧಿಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಿಬ್ಬಂದಿಗಳಾದ ಸುಬ್ರಾಯ ಬಿ., ವನಜಾ ಮತ್ತು ಪ್ರೇಮಲತಾ ಅವರನ್ನು ಸಮ್ಮಾನಿಸಲಾಯಿತು. ಸುವರ್ಣ ಮಹೋತ್ಸವ ಸಮಾರಂಭದ ಅಂಗವಾಗಿ ಸಿಬಂದಿಗಳಿಗೆ ಏರ್ಪಡಿಸಿದ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಡಾ.ಅಪರ್ಣಾ ಮತ್ತು ಡಾ.ವಿನಯಕೃಷ್ಣ ಅವರು ಬೆನಕ ಕ್ಲಿನಿಕ್‌ನ ೧೯೬೯ರಿಂದ ೨೦೧೯ರ ವರೆಗಿನ ಪಯಣದ ಪಕ್ಷಿನೋಟವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಪಾರ್ವತಿ ರಾಮಮೋಹನ್, ಡಾ.ರಾಮರಾಜ್ ಪಿ.ಎನ್., ಡಾ.ಸಂದೀಪ್‌ಶಂಕರ್ ಉಪಸ್ಥಿತರಿದ್ದರು. ಡಾ.ಅರವಿಂದ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಡಾ.ಶಿವಕುಮಾರ್ ವಂದಿಸಿದರು. ಡಾ.ಸ್ಮಿತಾ ಅರವಿಂದ್ ಕಾರ್‍ಯಕ್ರಮ ನಿರೂಪಿಸಿದರು. ಶಿಲ್ಪಾ ಆಶಯಗೀತೆ ಹಾಡಿದರು. ಡಾ.ಪಲ್ಲವಿ ಮತ್ತು ಡಾ.ರಾಮಮೋಹನ್ ಕೆ.ಎನ್., ಡಾ.ಶಶಾಂಕ್ ಸಹಕರಿಸಿದರು.
ಸಭೆಯ ಬಳಿಕ ಲಘು ಸಂಗೀತ ಕಾರ್‍ಯಕ್ರಮ ನಡೆಯಿತು. ಸ್ಯಾಕ್ಸೋಫೋನ್‌ನಲ್ಲಿ ಉಮೇಶ್ ಸುರತ್ಕಲ್, ಕೀಬೋರ್ಡ್‌ಲ್ಲಿ ಚಂದ್ರಕೀರ್ತಿ ಮಂಗಳೂರು, ಕೊಳಲಿನಲ್ಲಿ ಮನೀಷ್‌ದಾಸ್ ಮಂಗಳೂರು, ಸಿತಾರ್‌ನಲ್ಲಿ ತಾರಾನಾಥ್ ಜೋಷಿ, ತಬಲಾದಲ್ಲಿ ಸುರೇಶ್ ಶೆಟ್ಟಿ ಮಂಗಳೂರು, ಭಾರವಿ ದೇರಾಜೆ, ರಿದಂ ಪ್ಯಾಡ್‌ನಲ್ಲಿ ಗಣೇಸ್ ನವಗಿರಿ, ಗಿಟಾರ್‌ನಲ್ಲಿ ಶರತ್ ಹಳೆಯಂಗಡಿ, ಗಿಟಾರ್ ಹಾಗೂ ಹಾಮೋನಿಕಾದಲ್ಲಿ ಪಾಣಿನಿ ದೇರಾಜೆ, ಸಂಗೀತದಲ್ಲಿ ಸಂಧ್ಯಾ ಕಾರ್ತಿಕ್ ಅಬ್ರಾಜೆ ಅವರು ಲಘು ಸಂಗೀತ ಕಾರ್‍ಯಕ್ರಮ ನಡೆಸಿಕೊಟ್ಟರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here