Sunday, October 22, 2023

ಬಂಟ್ವಾಳ ಎಸ್ ವಿ ಎಸ್ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ

Must read

ಬಂಟ್ವಾಳ: ಆಧುನಿಕ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಆಸಕ್ತಿ ಕಡಿಮೆಯಾಗುತ್ತಿದೆ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಲ್ಲಿಯೂ ತಮಗೆ ಅರಿವಿಲ್ಲದಂತೆ ಸಂಶೋಧನಾತ್ಮಕ ಗುಣಗಳು ಸುಪ್ತವಾಗಿರುತ್ತದೆ. ಇದನ್ನು ಹೊರತರುವಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ವಹಿಸಿಬೇಕಾಗುತ್ತದೆ.
ನಮ್ಮ ಯುವಜನತೆ ಈ ಬಗ್ಗೆ ಕಾರ್ಯತತ್ಪರರಾಗಬೇಕು. ಸಾಂಪ್ರದಾಯಿಕ ಕೃಷಿ ಪದ್ದತಿಯಲ್ಲೂ ಸಂಶೋಧನಾತ್ಮಕ ಗುಣವನ್ನು ನಾವು ಗುರುತಿಸಿ ಅದರ ಮಟ್ಟವನ್ನು ಇನ್ನಷ್ಟು ಸುಧಾರಿಸಬೇಕು ಎಂದು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿಯ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ| ಸಿದ್ದರಾಜು ಎಂ ಎನ್ ನುಡಿದರು. ಅವರು ಇತ್ತೀಚೇಗೆ ಬಂಟ್ವಾಳ ಎಸ್ ವಿ ಎಸ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗ ಹಾಗು ಇಂಚರ ಜಂಟಿಯಾಗಿ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು
ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪಪ್ರಾಂಶುಪಾಲೆ ಡಾ| ಹೆಚ್ ಆರ್ ಸುಜಾತ ಸಂಶೋಧನೆಯ ಮಹತ್ವ ಮತ್ತು ನಮ್ಮ ದೈನಂದಿನ ಕಾರ್ಯಗಳಲ್ಲಿ ಅದರ ಉಪಯುಕ್ತತೆ ಬಗ್ಗೆ ವಿವರಿಸಿದರು .ಉಪನ್ಯಾಸ ಕಾರ್ಯಕ್ರಮದ ಸಂಯೋಜಕಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಡಾ| ದಾಕ್ಷಾಯಿಣಿ ಅತಿಥಿಯನ್ನು ಪರಿಚಯಿಸಿದರು. ನೇಚರ್ ಕ್ಲಬ್ ಇಂಚರದ ಕಾರ್ಯದರ್ಶಿ ಶ್ರೀಲಕ್ಷಿ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಸ್ಪೂರ್ತಿ ಹಾಗು ಪ್ರಿಯಾಂಕ ಪ್ರಾರ್ಥಿಸಿದರು. ಇಂಚರದ ಜೊತೆ ಕಾರ್ಯದರ್ಶಿಯಾದ ಶರತ್ ಕುಮಾರ್ ವಂದಿಸಿದರು. ವಿಜ್ಞಾನ ವಿಭಾಗದ ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದರು .ಅಂತಿಮ ಬಿ.ಎಸ್ಸಿ ವಿದ್ಯಾರ್ಥಿನಿ ರಕ್ಷಿತಾ ರೈ ಕಾರ್ಯಕ್ರಮ ನಿರೂಪಿಸಿದರು.

More articles

Latest article