Friday, October 27, 2023

ಮತದಾರರ ಜಾಗ್ರತಿ ಸಮಿತಿ/ ವೇದಿಕೆ ಉದ್ಘಾಟನೆ

Must read

ಬಂಟ್ವಾಳ: ಲೋಕಸಭಾ ಚುನಾವಣೆ ಯ ಮತದಾರರ ಬಂಟ್ವಾಳ ಜಾಗ್ರತಿ ಸಮಿತಿ/ ವೇದಿಕೆಯ ಉದ್ಘಾಟನೆ ಬಿ.ಸಿ.ರೋಡಿನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಸುಧಾಕರ, ಅವರು ಕಾರ್ಯಕ್ರಮ ಉದ್ಘಾಟಿಸಿ ಮಾಹಿತಿ ನೀಡಿದರು. ಹದಿನೆಂಟು ವರ್ಷವಾದ ಪ್ರತಿಯೊಬ್ಬರನ್ನು ಮತದಾರ ಪಟ್ಟಿಯಲ್ಲಿ ಸೇರಿಸುವುದು, ಮತ್ತು ಸೇರಿದೆಯಾ ಎಂದು ಖಾತ್ರಿ ಪಡಿಸಲು ಈ ಕಾರ್ಯಕ್ರಮ ಪ್ರಥಮ ಆಧ್ಯತೆ.

ಪ್ರತಿಯೊಬ್ಬ ಅಧಿಕಾರಿಗಳು ಕನಿಷ್ಟ ಹತ್ತು ಜನರನ್ನು ಚುನಾವಣೆಗೆ ಸಂಬಂಧಿಸಿದ ಅನ್ ಲೈನ್ ಪರೀಕ್ಷಿಸಲು ಪ್ರೇರಣೆಯಾಗಬೇಕು ಎಂದು ಅವರು ತಿಳಿಸಿದರು. ‌


ಇವಿಎಂ.ಹಾಗೂ ಇತರ ವಿಷಯಗಳ ಬಗ್ಗೆ ಮಾಹಿತಿ ಸರಿಯಾಗಿ ತಿಳಿದುಕೊಂಡು ಸಾರ್ವಜನಿಕರಿಗೆ ತಿಳಿಸುವ ಕೆಲಸ ಆಗಬೇಕಾಗಿದೆ.
ಎಲ್ಲಾ ಸಂಘಟನೆಗಳನ್ನು ಸೇರಿಸಿಕೊಂಡು ಪ್ರತಿಯೊಬ್ಬ ಹದಿನೆಂಟು ವರ್ಷ ಪ್ರಾಯದವರನ್ನು ಮತದಾನ ಪಟ್ಟಿಗೆ ಸೇರ್ಪಡೆಗೆ ಹಾಗೂ ಮತದಾನ ಮಾಡುವಂತೆ ಜಾಗ್ರತಿ ಮಾಡುವಂತೆ ಅವರು ತಿಳಿಸಿದರು.
ಚುನಾವಣಾ ಕ್ಲಬ್ ನಿರ್ಮಾಣ ಮಾಡಿ ಆ ಮೂಲಕ ಪ್ರತಿ ವಿಷಯಗಳು ಇಲಾಖೆಗೆ ತಲುಪಬೇಕು. ಪ್ರತಿಯೋಬ್ಬ ಪ್ರಜೆಯೂ ಮತದಾನ ಪಟ್ಟಿಗೆ ಸೇರ್ಪಡೆಗೆ ಹಾಗೂ ಮತದಾನ ಮಾಡುವ ಉದ್ದೇಶದಿಂದ ಜನರ ಮನ ಪರಿವರ್ತನೆಗಾಗಿ ಮತದಾರರ ಪ್ರತಿಜ್ಞೆ ಕಾರ್ಯಕ್ರಮವನ್ನು ನಡೆಸಲು ಸೂಚಿಸಿದರು.
ಪ್ರತಿದಿನ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ಮತದಾನದಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಜಾಗ್ರತಿ ಮಾಡುವ ಪ್ರತಿಜ್ಞೆ ಮಾಡಲು ತಾಲೂಕಿನ ಅಧಿಕಾರಿಗಳಿಗೆ ತಿಳಿಸಿದರು. ಸಾಮಾಜಿಕ ಜಾಲತಾಣಗಳನ್ನು ಬಳಸಿ ಆ ಮೂಲಕವೂ ಎಚ್ಚರಿಸುವ ಕೆಲಸ ಮಾಡಿ‌ ಎಂದರು. ಕಾರ್ಯಕ್ರಮ ದಲ್ಲಿ ಪ್ರತಿಜ್ಞಾ ಸ್ವೀಕಾರ ನಡೆಯಿತು. ‌

ತಾಲೂಕು ಪಂಚಾಯತ್ ಕಾರ್ಯ ನಿರ್ವಣಾಧಿಕಾರಿ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆಡೆಯಿತು. ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು‌ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

More articles

Latest article