ಬಂಟ್ವಾಳ: ಆಧುನಿಕ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಪರಾಮರ್ಶನ ಗ್ರಂಥಗಳಿಗೆ ಬಹಳ ಮಹತ್ವವಿದೆ ಅಂತೆಯೇ ಪಠ್ಯಕ್ಕೆ ನೇರವಾಗಿ ಸಂಬಂಧ ಪಡದಿದ್ದರೂ ಜ್ಞಾನರ್ಜನೆಗಾಗಿ ಓದಬೇಕಾದ ಪುಸ್ತಕಗಳು ದಿನನಿತ್ಯ ಪ್ರಕಟವಾಗುತ್ತಿವೆ. ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಮೂಲಕ ವಿದ್ಯಾರ್ಥಿಗಳು ಜ್ಞಾನಮುಖಿ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು ಎಂದು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ರಾಮ.ಕೆ ಹೇಳಿದರು.
ಅವರು ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ವಿಭಾಗ ಮತ್ತು ಸಾಹಿತ್ಯ ಸಂಘದ ಜಂಟಿ ಆಶ್ರಯದಲ್ಲಿ ನಡೆದ ’ಓದುವ ಹವ್ಯಾಸ’ ಕುರಿತ ಕಾರ್ಯಗಾರದಲ್ಲಿ ಮಾತನಾಡುತ್ತಿದ್ದರು. ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ, ಬೆಳಂದೂರು ಸರಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಪಾಲಕ ಡಾ. ರವಿಚಂದ್ರ ನಾಯಕ್ ಮಾತನಾಡಿ ಅಂತರ್‌ ಜಾಲದಲ್ಲಿ ಲಭ್ಯವಿರಿರುವ ಪುಸ್ತಕಗಳನ್ನು ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉಚಿತವಾಗಿ ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಿದರು.
ಇತಿಹಾಸ ವಿಬಾಗದ ಮುಖ್ಯಸ್ಥ ಪ್ರೊ. ಸತೀಶ್‌ಗಟ್ಟಿ ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಗ್ರಂಥಪಾಲ ಕಪುಟ್ಟೇಗೌಡ ಹೆಚ್ ಸಿ ಕಾರ್ಯಕ್ರಮ ಸಂಯೋಜಿಸಿದರು. ಸುಶ್ಮಿತಾ ಸ್ವಾಗತಿಸಿ, ಮಮತಾ ಕಾರ್ಯಕ್ರಮ ನಿರೂಪಿಸಿದರು, ಶಿಲ್ಪ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here