Saturday, October 21, 2023

ಕುಂಭಮೇಳದ ಯಶಸ್ವಿನ ಹಿಂದೆ ಇದ್ದಾರೆ ಬಂಟ್ವಾಳ ಮೂಲದ ಐ.ಎ.ಎಸ್.ಆಫೀಸರ್

Must read

ಬಂಟ್ವಾಳ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುವ ಕುಂಭಮೇಳದ ಯಶಸ್ವಿನ ಹಿಂದೆ ಇದ್ದಾರೆ ಬಂಟ್ವಾಳ ಮೂಲದ ಐ.ಎ.ಎಸ್.ಅಫೀಸರ್ .

ಉತ್ತರ ಪ್ರದೇಶದ ಯೋಗಿ ನೇತ್ರತ್ವದ ಬಿಜೆಪಿ ಸರಕಾರದ ನೇತ್ರತ್ವದಲ್ಲಿ ಪ್ರಯಾಗ್ ರಾಜ್ ನಲ್ಲಿ ದೇಶ ವಿದೇಶಗಳ ಗಮನ ಸೆಳೆಯುವಂತೆ ನಡೆಯುವ ಕುಂಭಮೇಳದ ಯಶಸ್ಸಿನ ಮೂಲ ಕಾರಣೀಕರ್ತ ಬಂಟ್ವಾಳ ತಾಲೂಕಿನ ಲೋರೆಟ್ಟೋದವರಾದ ಐ.ಎ.ಎಸ್.ಅಧಿಕಾರಿ ವಿಜಯಕಿರಣ್ ಆನಂದ್.
ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಕುಂಭಮೇಳ ಆಯೋಜನೆಯ ಸಂಪೂರ್ಣ ಜವಾಬ್ದಾರಿ ಯನ್ನು ಒಂದು ವರ್ಷದ ಹಿಂದೆಯೇ ಯೋಗಿ ಸರಕಾರ ಇವರ ಹೆಗಲಿಗೆ ನೀಡಿತ್ತು.

ಉತ್ತರಪ್ರದೇಶ ದ ವಾರಾಣಸಿ ಸಹಿತ ಅನೇಕ ಕಡೆಗಳಲ್ಲಿ ಜಿಲ್ಲಾಧಿಕಾರಿ ಯಾಗಿ ದಕ್ಷ ಪ್ರಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸಾರ್ವಜನಿಕ ರ ಗಮನ ಸೆಳೆದಿದ್ದರು.
ಇವರ ಪ್ರಮಾಣಿಕ ಸೇವೆ ಯನ್ನು ಗುರುತಿಸಿದ ಯೋಗಿ ಸರಕಾರ ಕುಂಭಮೇಳ ಮೇಳದ ಮೂಲಭೂತ ಸೌಕರ್ಯಗಳ ಹಾಗೂ ವ್ಯವಸ್ಥಿತ ರೀತಿಯಲ್ಲಿ ನಡೆಸಲು ಉಸ್ತುವಾರಿ ಯನ್ನು ವಿಜಯಕಿರಣ್ ಆನಂದ ಅವರಿಗೆ ಕಳೆದ ವರ್ಷವೇ ನೀಡಿತ್ತು.‌
ಸರಕಾರ ನೀಡಿದ ಜವಬ್ದಾರಿ ಗೆ ಕಿಂಚಿತ್ತೂ ತೊಂದರೆ ಯಾಗದ ರೀತಿಯ ಲ್ಲಿ ವ್ಯವಸ್ಥೆ ಗಳನ್ನು ಕಲ್ಪಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಮೂಲಕ ಸಹಬ್ಬಾಸ್ ಗಿರಿ ಪಡೆದಿದ್ದಾರೆ.
ಇವರು ಬಂಟ್ವಾಳ ದ ಎಸ್.ವಿ.ಎಸ್.ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬಳಿಕ ಉನ್ನತ ಶಿಕ್ಷಣ ಕ್ಕೆ ಬೆಂಗಳೂರು ತೆರಳಿದ್ದರು.
ಬಂಟ್ವಾಳ ದ ಉದ್ಯಮಿ ಹಾಗೂ ಬಿಜೆಪಿ ಪ್ರಮುಖ ಉದಯಕುಮಾರ್ ರಾವ್ ಅವರ ಧರ್ಮ ಪತ್ನಿ ವಿದ್ಯಾರಾವ್ ಅವರ ಸಹೋದರ.

More articles

Latest article