ಬಂಟ್ವಾಳ: ವಿದ್ಯಾರ್ಥಿಗಳನ್ನು ಸತ್ಪ್ರಜೆ ಮಾಡಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಮುಖ ಪಾತ್ರವಹಿಸುತ್ತದೆ ಎಂದು ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬಂಟ್ವಾಳ ಹಾಗೂ ಸರಕಾರಿ ಪ್ರೌಡ ಶಾಲೆ ಸುಜೀರು ಇವರ ಸಂಯುಕ್ತ ಆಶ್ರಯದಲ್ಲಿ ಸುಜೀರು ಶಾಲಾ ಅವರಣದಲ್ಲಿ ನಡೆದ ಸ್ಕೌಟ್ಸ್ ಗೈಡ್ಸ್ ಮೇಳ ಕಬ್, ಬುಲ್ ಬುಲ್ಸ್ ಉತ್ಸವ 2018-19 ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶೇಷವಾದ ಮನೋಭಾವ ಬೆಳೆಯಲು ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಿಗಲು ಸಾಧ್ಯ ಎಂದು ಅವರು ಹೇಳಿದರು.
ಉನ್ನತ ಮಟ್ಟದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಸ್ಕೌಟ್ಸ್ ನ ಪ್ರಯೋಜನ ಸಿಗುತ್ತದೆ.
ಮಕ್ಕಳಿಗಿರುವ ಉತ್ತಮ ಅವಕಾಶವನ್ನು ಪಡೆದುಕೊಳ್ಳಲು ಕರೆ ನೀಡಿದರು.
ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಾಜಿ.ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಲು, ಭಾರತೀಯ ಸಂಸ್ಕೃತಿಯ ಜೊತೆಯಲ್ಲಿ ಶಿಸ್ತ ಸಂಯಮದ ಬದುಕಿಗೆ ಹಾಗೂ ರಾಷ್ಟ್ರ ಕಟ್ಟುವ ಕಾರ್ಯ ಕ್ಕೆ ಸ್ಕೌಟ್ಸ್, ಗೈಡ್ಸ್ ಸಹಕಾರಿಯಾಗುತ್ತದೆ.
ಗ್ರಾ.ಪಂ.ಅದ್ಯಕ್ಷ ರಮ್ಲಾನ್ ಮಾರಿಪಳ್ಳ, ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಪುದು ಗ್ರಾ.ಪಂ.ಉಪಾಧ್ಯಕ್ಷೆ ಲಿಡಿಯಾ ಪಿಂಟೋ ,
ಮಹಮ್ಮದ್ ಬಾವ , ಸ್ಕೌಟ್ಸ್ ಗೈಡ್ಸ್ ನ ಮುಖ್ಯ ಆಯುಕ್ತ ಎನ್.ಜಿ.ಮೋಹನ್.
ಜಿಲ್ಲಾ ಸಂಘಟಕ ಭರತ್ , ಉದ್ಯಮಿ ಜಫರುಲ್ಲಾ ಒಡೆಯರ್, ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಕುಮಾರ್, ಮಹಮ್ಮದ್ ಮೋನು, ಸ್ಕೌಟ್ಸ್ ಜಿಲ್ಲಾ ಖಜಾಂಚಿ ವಾಸುದೇವ ಬೋಳಾರ್, ಗ್ರಾ.ಪಂ.ಸದಸ್ಯ ಬಾಸ್ಕರ್ ರೈ , ನಂ.ರಿಕ್ಷಾ ಅದ್ಯಕ್ಷ ಜಾಫರ್, ಎಸ್.ಡಿ.ಎಂ.ಸದಸ್ಯ ಸಲಾಂ ಮಲ್ಲಿ, ಮೋಯಿದೀನ್ ಜುಮಾ ಮಸೀದಿಯ ಕೋಶಾಧಿಕಾರಿ ಮಜೀದ್, ಅಬುಬಕ್ಜರ್ ಫರಂಗಿಪೇಟೆ, ಸುಜೀರು ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಅದ್ಯಕ್ಷ ಹುಸೈನ್, ಪ್ರೌಡ ಶಾಲಾ ಎಸ್.ಡಿ.ಎಂ.ಸದಸ್ಯ ಎಂ.ಜುಬೈರ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯ ಗುರುವ ಮಾಸ್ಟರ್, ದೈಹಿಕ ಶಿಕ್ಷಣ ಪರಿವೀಕ್ಷಕಿ ರತ್ನಾವತಿ, ಸಿ.ಆರ್.ಪಿ.ಗಳಾ ನಂದಾ ಎಸ್ತೇರಾ, ಆರತಿ , ಪ್ರೌಡ ಶಾಲಾ ಮುಖ್ಯೋಪಾಯದ್ಯಾಯಿನಿ ಶಶಿಮಂಗಳ, ಕಾರ್ಯಕ್ರಮದಲ್ಲಿ ಶಶಿಮಂಗಳಾ , ಗುರುವ ಮಾಸ್ತರ್ , ಐತ್ತಪ್ಪ ಪೂಜಾರಿ, ಬಿ.ಎಂ.ತುಂಬೆ ಅವರನ್ನು ಸಚಿವರು ಅಭಿನಂದಿಸಿರು.
ಶಿಕ್ಷಕರಾದ ಬಿ.ಎಂ.ತುಂಬೆ ಸ್ವಾಗತಿಸಿ, ಹರಿಪ್ರಸಾದ್ ವಂದಿಸಿದರು. ಶಿಕ್ಷಕ ಐತ್ತಪ್ಪ ಪೂಜಾರಿ ಕಾರ್ಯ ಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ದ ಬಳಿಕ ವಿದ್ಯಾರ್ಥಿಗಳಿಂದ ಸಾಹಸಮಯ ಚಟುವಟಿಕೆಗಳ ಪ್ರದರ್ಶನ ನಡೆಯಿತು.