Tuesday, September 26, 2023

ಮುಗ್ಧ ಮಕ್ಕಳು ದುಗ್ಧರಾಗದಂತೆ ಪಾಲಕರು ಬದ್ಧತೆ ಪಾಲಿಸಲಿ: ರಮೇಶ ಎಂ. ಬಾಯಾರು

Must read

ಬಂಟ್ವಾಳ: ಮಕ್ಕಳ ಬದುಕಿಗೆ ಬಣ್ಣ ಕೊಡುವ, ಅವರಲ್ಲಿ ಸಂಸ್ಕಾರ ತುಂಬುವ ಅತ್ಯಂತ ಶ್ರೇಷ್ಠವಾದ ಜವಾಬ್ದಾರಿಯೊಂದಿಗೆ ಮುಗ್ಧ ಮಕ್ಕಳು ದುಗ್ಧರಾಗದಂತೆ ಪಾಲಕರು ಬದ್ಧತೆಯನ್ನು ಪಾಲಿಸಬೇಕು, ಅವರು ಪ್ರಖರಮತಿಗಳು, ತೀಕ್ಷ್ಣ ಮತಿಗಳು ಮತ್ತು ಶೀಘ್ರಮತಿಗಳಾಗಬೇಕು ಎಂದು ಅಡ್ಯನಡ್ಕ ಎಜುಕೇಷನ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ ಎಂ ಬಾಯಾರು ಹೇಳಿದರು. ಅವರು ಸಾಯ ಶ್ರೀ ದುರ್ಗಾ ಪರಮೇಶ್ವರೀ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ವಿದ್ಯಾರ್ಥಿ ಗಳ ಆಸಕ್ತಿ, ಬೌದ್ಧಿಕ ಸಾಮಥ್ರ್ಯ, ದೈಹಿಕ ಕ್ಷಮತೆ, ಏಕಾಗ್ರತೆ, ತಾಳ್ಮೆ, ಅಧ್ಯಯನ ಅವಕಾಶಗಳು, ಮೇಧಾಶಕ್ತಿ, ಅನ್ವಯಿಕ ಸಾಮರ್ಥ್ಯ, ವ್ಯಾಯಾಮ, ಮನರಂಜನೆ ಮುಂತಾದುವು ಅವರ ಕಲಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮಕ್ಕಳೆಂದರೆ ಕೀಳರಿಮೆ ಬೇಡ, ಅಭಿಮಾನ ತುಂಬಿಕೊಳ್ಳೋಣ, ಉತ್ತಮ ಆದರ್ಶಗಳನ್ನು ಪಾಲಿಸೋಣ ಎಂದು ಬಾಯಾರ್ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಣ್ಮಕಜೆ ಸಿ.ಆರ್.ಪಿ ಸುರೇಶ್ ಕೆ, ಎಣ್ಮಕಜೆ ಪಂಚಾಯತ್ ಸದಸ್ಯೆ ಜಯಶ್ರೀ ಕುಲಾಲ್ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನ್ಸೆಂಟ್ ಡಿ. ಸೋಝ ಮಾತನಾಡಿದರು. ಪಂಚಾಯತ್ ಸದಸ್ಯ ಐತಪ್ಪ ಕುಲಾಲ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಪಿ.ಟಿ.ಎ ಅಧ್ಯಕ್ಷ ಗಣೇಶ್ ಬಾಳೆಕಾನ, ಎಂ.ಟಿ.ಎ ಅಧ್ಯಕ್ಷೆ ಪ್ರಮೀಳ ಸಾಯ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶಶಿಕಲಾ ಶೈಕ್ಷಣಿಕ ಮತ್ತು ಸಹಪಠ್ಯ ಚಟುವಟಿಕೆಗಳನ್ನೊಳಗೊಂಡ ಶಾಲಾ ವಾರ್ಷಿಕ ವರದಿ ವಾಚಿಸಿದರು. ಶಾಲಾ ಸಂಚಾಲಕರಾದ ಗೋವಿಂದ ಪ್ರಕಾಶ್ ಸಾಯ ಶಾಲೆಯನ್ನು ಸ್ಥಾಪಿಸಿದ ಸಾಯ ಕೃಷ್ಣ ಭಟ್ ಮತ್ತು ನಾರಾಯಣ ಭಟ್ರವರ ಸಂಸ್ಮರಣೆ ಮಾಡಿ ಸ್ವಾಗತಿಸಿದರು. ಪ್ರತಿಭಾ ಪುರಸ್ಕೃತರ ಪಟ್ಟಯನ್ನು ಸಹ ಶಿಕ್ಷಕಿ ದಿವ್ಯಶ್ರೀ ವಾಚಿಸಿದರು. ಶಿಕ್ಷಕ ಗೋವಿಂದ ನಾಯ್ಕ್ ನಿರೂಪಿಸಿದರು. ಶಿಕ್ಷಕಿ ಪ್ರಸನ್ನ ವಂದಿಸಿದರು. ಕೂಟೆಲು ಮತ್ತು ಸಾಯ ಅಂಗನವಾಡಿಯ ಪುಟಾಣಿಗಳು ಮತ್ತು ಸಾಯ ಶಾಲಾ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ಪ್ರದರ್ಷಿತವಾದುವು.

 

More articles

Latest article