


ಬಂಟ್ವಾಳ: ಬಂಟ್ವಾಳ ಡಿ.ವೈ.ಎಸ್.ಪಿ. ಹಾಗೂ ಬಂಟ್ವಾಳ ಸಾರಿಗೆ ಅಧಿಕಾರಿಗಳಿಂದ ಏಕಕಾಲದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದವರ ವಿರುದ್ದ ಕಾರ್ಯಾಚರಣೆ ನಡೆಸಿದರು.
ಬಂಟ್ವಾಳ ಡಿ.ವೈ.ಎಸ್.ಪಿ.ಸೈದುಲ್ ಅಡಾವತ್ ಅವರ ನಿರ್ದೇಶನ ದಂತೆ ಬಂಟ್ವಾಳ ಸಬ್ ಡಿವಿಷನ್ ವಿಭಾಗದಲ್ಲಿ ಏಕಕಾಲದಲ್ಲಿ ಸುಮಾರು 22 ಅಧಿಕಾರಿಗಳು ರಸ್ತೆಗಿಳಿದು ವಾಹನ ತಪಾಸಣೆ ನಡೆಸಿ ದ್ವಿಚಕ್ರ ಹಾಗೂ ಘನಗಾತ್ರದ ವಾಹನಗಳು ಸೇರಿದಂತೆ ಸುಮಾರು 800 ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಈ ಒಟ್ಟು ಪ್ರಕರಣ ಗಳಲ್ಲಿ 1.25 ಲಕ್ಷ ರೂ ದಂಡ ವಿಧಿಸಿದ್ದಾರೆ.
ವಾಹನಗಳ ದಾಖಲಾತಿ ಇಲ್ಲದೆ ಮತ್ತು ವಿಮೆ ಇಲ್ಲದ 80 ವಾಹನಗಳ ನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಹಾಗೂ 40 ವಾಹನಗಳನ್ನು ಜಪ್ತಿ ಮಾಡಲಾಗಿದೆ .
ಡಿ.ವೈಎಸ್.ಪಿ.ಸೈದುಲು ಅಡಾವತ್ ಅವರು ಸ್ವತಃ ರಸ್ತೆಗಳಿದುದಲ್ಲದೆ, ಬಂಟ್ವಾಳ, ಬೆಳ್ತಂಗಡಿ, ವಿಟ್ಲದ ಗಲ್ಲಿಗಲ್ಲಿಗಳಲ್ಲಿ ಪೋಲೀಸ್ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸಿದರು.
ಈ ಮೂಲಕ ಟ್ರಾಫಿಕ್ ರೂಲ್ ಪಾಲಿಸದ ವಾಹನ ಸವಾರರಿಗೆ ಸಂದೇಶ ರವಾನೆ ಮಾಡುವ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೆಲ್ಮೆಟ್ ಧರಿಸದೆ ಪ್ರಯಾಣಿಸುವ ವಾಹನ ಸವಾರರಿಂದ ಹಿಡಿದು ವಿಮೆ, ಹಾಗೂ ವಾಹನ ಪಿಟ್ ನೆಸ್ ವರೆಗೂ ತಪಾಸಣೆ ನಡೆಸಿ ವಾಹನ ಸವಾರರ ಬೆವರಿಳಿಸಿದರು.
ಎರಡು
ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಸಹಿತ ಅನೇಕ ಘನಗಾತ್ರದ ವಾಹನಗಳಿಗೆ ಕೇಸು ದಾಖಲಿಸಿದರು.
ಇನ್ನು ಮುಂದೆ ಸಂಚಾರ ಮಾಡುವ ವೇಳೆ ಕಾನೂನು ಪಾಲಿಸುವಂತೆ ಎಚ್ಚರಿಕೆಯ ಸಂದೇಶ ವನ್ನು ಅವರು ನೀಡಿದ್ದಾರೆ.
ಬಂಟ್ವಾಳ ಸಾರಿಗೆ ಅಧಿಕಾರಿ ಚರಣ್ , ಬಂಟ್ವಾಳ ನಗರ ಠಾಣಾಧಿಕಾರಿ ಚಂದ್ರಶೇಖರ್, ಗ್ರಾಮಾಂತರ ಎಸ್ .ಐ.ಪ್ರಸನ್ನ, ಟ್ರಾಫಿಕ್ ಎಸ್.ಐ.ಮಂಜುಳಾ, ವಿಟ್ಲ ಎಸ್.ಐ.ಯಲ್ಲಪ್ಪ, ಹಾಗೂ ಸಿಬ್ಬಂದಿ ಗಳು ಪಾಲ್ಗೊಂಡಿದ್ದರು.


