Thursday, October 26, 2023

ಗೋವು ವಧೆ: ಇಬ್ಬರು ಆರೋಪಿಗಳ ಬಂಧನ

Must read

ಬಂಟ್ವಾಳ: ಸಜೀಪ ನಡುವಿನಲ್ಲಿ ಅಕ್ರಮವಾಗಿ ಗೋವು ವಧೆ ಮಾಡಿ ಮಾರಾಟಕ್ಕೆ ಸಿದ್ದಪಡಿಸುತ್ತಿದ್ದ ವೇಳೆ ದಾಳಿ ನಡೆಸಿ ದ ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಇಬ್ಬರು ಆರೋಪಿಗಳನ್ನು ಬಂಧಿಸಿ, ಪರಾರಿಯಾದ ಒರ್ವ ಆರೋಪಿಯ ಬಂಧನಕ್ಕೆ ಬಲೆಬೀಸಿದ್ದಾರೆ.


ಕಡಬ ಪುತ್ತೂರು ತಾಲೂಕಿನ ಕೋಡಿಂಬಾಳ ಗ್ರಾಮದ ಕೆಂಚಬಟ್ರ ನಿವಾಸಿ ದಿ.ಮಹಮ್ಮದ್ ಅವರ ಪುತ್ರ ಆಸೀಫ್ (31), ಹಾಗೂ ಪುತ್ತೂರು ತಾಲೂಕಿನ ಕೊಂಡಿಬಾಳ ಗ್ರಾಮದ ಪನ್ಯ ಬಾಜಿನಡಿ ನಿವಾಸಿ ಉಮ್ಮರ್ ಅವರ ಪುತ್ರ ಆಸಿರ್ ( 25) ಬಂಧಿತ ಆರೋಪಿ.‌
ಸಜೀಪ ನಡು ಗ್ರಾಮದ ಗೋಳಿಪಡ್ಪು ಎಂಬಲ್ಲಿ ಉಮ್ಮರ್ ಎಂಬವರ ಮನೆಯ ಹಿಂಬದಿಯ ಖಾಲಿ ಜಮೀನಿನಲ್ಲಿ ಮಾರಾಟ ಮಾಡಿ ಹಣ ಮಾಡುವ ಉದ್ದೇಶದಿಂದ ಜಾನುವಾರು ಒಂದನ್ನು ಕಡಿದು ಮಾಂಸ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಇಂದು ಮದ್ಯಾಹ್ನ ವೇಳೆ ದಾಳಿ ನಡೆಸಿ ದಾಗ ಸ್ಥಳದಲ್ಲಿ ಮೂವರು ಆರೋಪಿಗಳು ಜಾನುವಾರು ಕೊಂದು ಮಾಂಸ ಮಾಡುತ್ತಿದ್ದು ಅದರಲ್ಲಿ ಪೋಲೀಸರನ್ನು ನೋಡಿ ಒರ್ವ ಆರೋಪಿ ಸ್ಥಳೀಯ ಗೋಳಿಪಡ್ಪು ನಿವಾಸಿ ಉಸ್ಮಾನ್ ಅವರ ಮಗ ಹೈದರ್ ( 40) ಸ್ಥಳದಿಂದ ಪರಾರಿಯಾಗಿದ್ದಾನೆ.
ಸುಮಾರು ಏಳು ಸಾವಿರ ರೂ ಮೌಲ್ಯ ದ ಕಡಿದು ಮಾಂಸ ಮಾಡಲು ಸಿದ್ದವಾದ ಜಾನುವಾರು, ಕಡಿದು‌ಮಾಂಸ ಮಾಡಲು ಉಪಯೋಗಿಸಿ ದ ಸಲಕರಣೆಗಳನ್ನು ವಶಪಡಿಸಿಕೊಂಡ ಪೋಲೀಸರು ಆರೋಪಿ ಗಳ ವಿರುದ್ಧ ಕಲಂ.4,5,11 ಕರ್ನಾಟಕ ಗೋವಧೆ ಪ್ರತಿಬಂಧಕ ಕಾಯ್ದೆ ಹಾಗೂ ಕಲಂ.11 ಪ್ರಾಣಿ ಹಿಂಸೆ ತಡೆಕಾಯ್ದೆ 1960 ರಂತೆ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಚರಣೆ ಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸ್ ಸಿಬ್ಬಂದಿ ಗಳಾದ ಜನಾರ್ಧನ, ಸುರೇಶ್, ಜಯರಾಮ, ಸುಬ್ರಹ್ಮಣ್ಯ ಪಾಲ್ಗೊಂಡಿದ್ದರು.

More articles

Latest article