ಬಂಟ್ವಾಳ: ಮೇಯಲು ಬಿಟ್ಟಿದ್ದ ಆಡುಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ತಲಪಾಡಿಯ ನಿವಾಸಿಯೋರ್ವನನ್ನು ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ ಬಂಧಿಸಿ ನ್ಯಾಯಾಲಯಕ್ಕೆ ಇಂದು ಹಾಜರುಪಡಿಸಿದ್ದಾರೆ.
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ತಲಪಾಡಿ ನಿವಾಸಿ ಮೂಸಬ್ಬ ಅವರ ಮಗ ರಿಜ್ವಾನ್ ಬಂಧಿತ ಆರೋಪಿ.

ಒಂದು ದೊಡ್ಡ ಹಾಗೂ ಮೂರು ಮರಿ ಆಡು ಗಳ ನ್ನು ಈತ ಕಳವು ಮಾಡಿದ್ದ.
ಕಳವು ಮಾಡಿದ ನಾಲ್ಕು ಆಡುಗಳ ಒಟ್ಟು ಮೌಲ್ಯ 10000 ಸಾವಿರ ರೂಪಾಯಿ.
ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಕಂಚಿನಡ್ಕ ಪದವು ನಿವಾಸಿ ಇಬ್ರಾಹಿಂ ಅವರ ಅಡುಗಳನ್ನು ಮನೆಯ ಸಮೀಪ ಮೇಯಲು ಬಿಟ್ಟಿದ್ದರು.
ಮೇಯಲು ಬಿಟ್ಟ ಆಡುಗಳನ್ನು ಆರೋಪಿ ರಿಜ್ವಾನ್ ಸ್ವಿಪ್ಟ್ ಕಾರಿನಲ್ಲಿ ತುಂಬಿಸಿ ಕೊಂಡು ಮಾರಾಟ ಮಾಡಲು ಯತ್ನಿಸಿದ್ದ.
ರಿಜ್ವಾನ್ ಉಳ್ಳಾಲ ದಿಂದ ನಾನು ದುಬೈ ಯಿಂದ ಬಂದಿದ್ದೇನೆ ನನಗೆ ಸುತ್ತಾಡಲು ಕಾರು ಬಾಡಿಗೆಗೆ ಬೇಕು ಎಂದು ಪಡೆದುಕೊಂಡು ಅದೇ ಕಾರಿನಲ್ಲಿ ಆಡು ಕಳವು ಮಾಡಿದ್ದ.
ಈ ಪ್ರಕರಣ ಕ್ಕೆ ಸಂಬಂಧಿಸಿದಂತೆ ದೂರಿನ ಹಿನ್ನಲೆಯಲ್ಲಿ ಬಂಟ್ವಾಳ ವ್ರತ್ತ ನಿರೀಕ್ಷಕ ಟಿ. ಡಿ.ನಾಗರಾಜ್ , ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ ,ಸಿಬ್ಬಂದಿ ಗಳಾದ ಜನಾರ್ದನ, ಸುರೇಶ್,ಮನೋಜ್ ಕಾರ್ಯಚರಣೆ ನಡೆಸಿ ಆರೋಪಿಯ ನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲ ಇವರಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.