Thursday, October 19, 2023

ಅಡ್ಯನಡ್ಕ ಜನತಾ ಪ್ರೌಢಶಾಲೆ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉಚಿತ ಬೈಸಿಕಲ್ ವಿತರಣೆ

Must read

ಅಡ್ಯನಡ್ಕ: ಇಲ್ಲಿನ ಜನತಾ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಎಂಟನೆಯ ತರಗತಿ ವಿದ್ಯಾರ್ಥಿಗಳಿಗೆ
ಸರಕಾರವು ಕೊಡಮಾಡಿರುವ ಉಚಿತ ಬೈಸಿಕಲ್‌ಗಳನ್ನು ಇಂದು ಫೆ.20ರಂದು ವಿತರಿಸಲಾಯಿತು.
ಕೇಪು ಗ್ರಾ. ಪಂ. ಸದಸ್ಯ ಮತ್ತು ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಸದಸ್ಯರೂ ಆಗಿರುವ ಅಬ್ದುಲ್ ಕರೀಮ್ ಕುದ್ದುಪದವು
ಅವರು ಬೈಸಿಕಲ್‌ಗಳನ್ನು ಪೋಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಈ ಸಮಾರಂಭದಲ್ಲಿ ಅಡ್ಯನಡ್ಕ ಜನತಾ
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಉಪಸ್ಥಿತರಿದ್ದರು. ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ. ಆರ್.
ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಿಕ್ಷಕ ವೃಂದದ ಎಸ್. ರಾಜಗೋಪಾಲ ಜೋಶಿ, ಪಿ. ಉದಯಕೃಷ್ಣ ಭಟ್,
ಕುಸುಮಾವತಿ, ಗೀತಾ ಎಚ್. ಶೆಟ್ಟಿ ಮತ್ತು ಶಿವಕುಮಾರ ಸಾಯ ಸಹಕರಿಸಿದರು.

More articles

Latest article