ಬಂಟ್ವಾಳ : ಪುಂಜಾಲಕಟ್ಟೆ ಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಮುಂದಿನ ೫ ವರ್ಷಗಳ ಅವಽಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರ ವತಿಯಿಂದ ಸಂಘದ ಸದಸ್ಯ ಮತದಾರರಿಗೆ , ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಅಭಿನಂದನಾ ಕಾರ್ಯಕ್ರಮ ಇರ್ವತ್ತೂರು, ನಡ್ವಂತಾಡಿ ಸೋದೆ ಮಠದ ವಠಾರದಲ್ಲಿ ಫೆ.೧ರಂದು ಸಂಜೆ ಜರಗಿತು.
ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಭಾರತಿ ಬೆಂಬಲಿತ ಆಡಳಿತ ಮಂಡಳಿಯನ್ನು ನಿರಂತರ ೩೦ ವರುಷಗಳಿಂದ ಬೆಂಬಲಿಸಿಕೊಂಡು ಬರುತ್ತಿರುವ ಸದಸ್ಯರನ್ನು ಮತ್ತು ನೂತನ ನಿರ್ದೇಶಕರನ್ನು ಅಭಿನಂದಿಸಿದರು.
ಹೊಸ ಅವಿಷ್ಕಾರದೊಂದಿಗೆ ಸಂಘವು ಇನ್ನಷ್ಟು ಬೆಳೆಯಲಿ, ಆರ್ಥಿಕ ದುರ್ಬಲರಿಗೆ ಹೊಸ ಚೈತನ್ಯವನ್ನು ನೀಡುವ ಕೆಲಸ ಮಾಡಲಿ, ಸಾಲ ಪಡಕೊಂಡವರು ಕ್ಲಪ್ತ ಸಮಯಕ್ಕೆ ಮರುಪಾವತಿ ಮಾಡಿ ಸಂಘದ ಬೆಳವಣಿಗೆಗೆ ಸಹಕರಿಸಿ ಎಂದು ಶುಭ ಹಾರೈಸಿದರು.
ದ.ಕ. ಮತ್ತು ಉಡುಪಿ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ, ಸಂಘದ ನೂತನ ನಿರ್ದೇಶಕ ಕೆ. ಲಕ್ಷ್ಮೀನಾರಾಯಣ ಉಡುಪ ಅವರು ಮಾತನಾಡಿ, ಪಿಲಾತಬೆಟ್ಟು ಸಹಕಾರಿ ಸಂಘ ಶೀಘ್ರವಾಗಿ ನೂತನ ಕಟ್ಟಡದಲ್ಲಿ ಕಾರ್ಯಾರಂಭಿಸಲಿದ್ದು, ಸಂಘವನ್ನು ರಾಜ್ಯದಲ್ಲಿಯೇ ಉತ್ತಮ ಸಹಕಾರಿ ಸಂಘವನ್ನಾಗಿ ರೂಪಿಸುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಪಾಂಗಲ್ಪಾಡಿ ಕ್ಷೇತ್ರದ ತಂತ್ರಿ ಉದಯ ಪಾಂಗಣ್ಣಾಯ ಆಶೀರ್ವಚನ ನೀಡಿ ಶುಭ ಹಾರೈಸಿದರು.
ತಾ. ಪಂ. ಸದಸ್ಯ ರಮೇಶ್ ಕುಡುಮೇರು, ವಾಮದಪದವು ವ್ಯ.ಸೇ.ಸ. ಸಂಘದ ಅಧ್ಯಕ್ಷ ದಂಡೆ ಯಶೋಧರಶೆಟ್ಟಿ , ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಽಕಾರಿ ಮಂಜಪ್ಪ ಮೂಲ್ಯ ಅತ್ತಾಜೆ, ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕುಮಂಗಿಲ, ಸದಸ್ಯ ಯೋಗೇಂದ್ರ ಪೆಲತ್ತಕಟ್ಟೆ , ಮಾಜಿಸದಸ್ಯ ರವಿಶಂಕರ ಹೊಳ್ಳ ಮಣ್ಣೂರು, ಇರ್ವತ್ತೂರು ಗ್ರಾ.ಪಂ. ಸದಸ್ಯ ದಯಾನಂದ ಕುಲಾಲ್, ನೂತನ ನಿರ್ದೇಶಕರಾದ ಬೂಬ ಸಪಲ್ಯ ಮುಂಡಬಲು, ಸುಂದರ ನಾಯ್ಕ, ಸಂತೋಷ್ ಕುಮಾರ್ ಶೆಟ್ಟಿ , ನಾರಾಯಣ ಪೂಜಾರಿ, ಸೇವಾ ಸೀತಾರಾಮ ಶೆಟ್ಟಿ , ಉಮೇಶ್ ಪೂಜಾರಿ, ದಿನೇಶ್ ಶೆಟ್ಟಿ , ಚಂದ್ರಶೇಖರ ಹೆಗ್ಡೆ , ಶಿವಯ್ಯ, ಸರೋಜಿನಿ ಶೆಟ್ಟಿ, ಹರ್ಷಿಣಿ ಪುಷ್ಪಾನಂದ್ ಅವರು ಉಪಸ್ಥಿತರಿದ್ದರು.
ನಿರ್ದೇಶಕ ಪಿ.ಯಂ. ಪ್ರಭಾಕರ ಸ್ವಾಗತಿಸಿದರು. ಮಾಜಿ ಮುಖ್ಯ ಕಾರ್ಯನಿರ್ವಹಣಾಽಕಾರಿ ಬೂಬ ಪೂಜಾರಿ ಕುದ್ಕಂದೋಡಿ ವಂದಿಸಿದರು. ಭರತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
————————————————————

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here