Wednesday, April 10, 2024

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಉಚಿತ ಸಾಮೂಹಿಕ ವಿವಾಹ , ಪ್ರಶಸ್ತಿ ಪ್ರದಾನ

ಬಂಟ್ವಾಳ: ಕಳೆದ ೩೪ ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ೩೫ನೇ ಸಂಭ್ರಮಾಚರಣೆಯ ಪ್ರಯುಕ್ತ ೧೧ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ರವಿವಾರ ಇಲ್ಲಿನ ಬಂಗ್ಲೆ ಮೈದಾನದಲ್ಲಿ ಜರಗಿತು.

ಬೆಳಗ್ಗೆ ಪುಂಜಾಲಕಟ್ಟೆ ಬಸವನಗುಡಿ ಶ್ರೀ ಬಸವೇಶ್ವರ ದೇವಾಲಯದಲ್ಲಿ ದಿಬ್ಬಣ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಬಳಿಕ ಮದುವೆ ಮಂಟಪದವರೆಗೆ ವಧು-ವರರ ದಿಬ್ಬಣ ಮೆರವಣಿಗೆ ವಿವಿಧ ಸ್ತಬ್ಧ ಚಿತ್ರ ಹಾಗೂರಾಜ್ಯದ ಪ್ರಸಿದ್ಧ ಕಲಾತಂಡಗಳೊಂದಿಗೆ, ಶಿಲ್ಪಾ ಗೊಂಬೆ ಬಳಗ, ವಿವಿಧ ವಾಹನಗಳೊಂದಿಗೆ ಬ್ಯಾಂಡ್‌ವಾದನ, ಕೇರಳ ಚೆಂಡೆಗಳ ಆಕರ್ಷಣೆಯೊಂದಿಗೆ ವೈಭವಪೂರ್ಣವಾಗಿ ಬಂಗ್ಲೆ ಮೈದಾನಕ್ಕೆ ಸಾಗಿ ಬಂತು. ಸಭಾಂಗಣದಲ್ಲಿ ವಧು ವರರನ್ನು ಸಾಂಪ್ರಾದಾಯಿಕವಾಗಿ ಎದುರುಗೊಳ್ಳಲಾಯಿತು.
ಗುರುವಾಯನಕೆರೆ ಕೃಷ್ಣಭಟ್ ಅವರ ಪೌರೋಹಿತ್ಯದಲ್ಲಿ , ಮಧ್ಯಾಹ್ನ ೧೨.೧೮ರ ಶುಭ ಮುಹೂರ್ತದಲ್ಲಿ ೧೩ ಜೋಡಿ ವಧು-ವರರಿಗೆ ಸಾಮೂಹಿಕ ವಿವಾಹ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರದಾನ ಮಾಡಲಾಯಿತು.
ಬದಿಯಡ್ಕ ಉದ್ಯಮಿ ವಸಂತ ಪೈಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು ಅವರು ಪ್ರಶಸ್ತಿ ಪ್ರದಾನ ಮಾಡಿದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್, ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ತಹಶೀಲ್ದಾರ್ ಪುರಂದರ ಹೆಗ್ಡೆ, ಬೆಂಗಳೂರು ನ್ಯಾಯವಾದಿ ಸ್ವರ್ಣಲತಾ ಹೆಗ್ಡೆ, ಉದ್ಯಮಿಗಳಾದ ನಿತ್ಯಾನಂದ ಪೂಜಾರಿ ಕೆಂತಲೆ, ವಸಂತ ಹೆಗ್ಡೆ ಬೆಂಗಳೂರು, ಮೋಹನ್ ಚೌಧುರಿ,ಓಂ ಪ್ರಸಾದ್, ಹರೀಂದ್ರ ಪೈ, ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಗುತ್ತಿಗೆದಾರ ರವಿ ಕಕ್ಯಪದವು, ಬೆಸೆಂಟ್ ಕಾಲೇಜು ಗ್ರಂಥಪಾಲಕ ಲೋಕರಾಜ ವಿಟ್ಲ, ಪಿಲಾತಬೆಟ್ಟು ವ್ಯ.ಸೇ.ಸ. ಸಂಘದ ಉಪಾಧ್ಯಕ್ಷ ಉಮೇಶ್ ಪೂಜಾರಿ, ಮುಖ್ಯ ಕಾರ್ಯ ನಿರ್ವಹಣಾದಿಕಾರಿ ಮಂಜಪ್ಪ ಮೂಲ್ಯ, ತಾ.ಪಂ.ಸದಸ್ಯರಾದ ಪ್ರಭಾಕರ ಪ್ರಭು, ರಮೇಶ್ ಕುಡ್ಮೇರ್, ಟಿ.ವಿ. ನಿರೂಪಕ ದಯಾನಂದ ಕತ್ತಲ್‌ಸಾರ್,ತು.ರ.ವೇ. ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಎಲ್ಲೈಸಿ ಅಽಕಾರಿ ವೆಂಕಪ್ಪ, ಇಂಜಿನೀಯರ್ ಸಂದೀಪ್ ಆಚಾರ್ಯ, ಸ್ವರ್ಣೋದ್ಯಮಿ ಕೆ. ಲೋಕೇಶ್ ಆಚಾರ್ಯ,ವಾಮದಪದವು ವ್ಯ.ಸೇ.ಸ.ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಸ್ವಸ್ತಿಕ್ ಫ್ರೆಂಡ್ಸ್ ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಪದಾಽಕಾರಿಗಳಾದ ಪಿ.ಎಂ.ಪ್ರಭಾಕರ, ರಾಜೇಶ್ ಪಿ. ಬಂಗೇರ, ಅಬ್ದುಲ್ ಹಮೀದ್, ರತ್ನಾಕರ ಪಿ.ಎಂ.,ಮಾಧವ ಬಂಗೇರ, ಗುರಿಕಾರ ಗಿರೀಶ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀನಿವಾಸ ಪಿ.ಸಾಫಲ್ಯ, ಮುಂಬಯಿ(ಸಮಾಜಸೇವೆ), ಸುಂದರ ಹೆಗ್ಡೆ-(ಚಲನಚಿತ್ರ)ಅಶೋಕ್ ಚೂಂತಾರು (ಕೃಷಿ), ಲ|ಸದಾಶಿವ ಆಚಾರ್ಯ(ಉದ್ಯಮ), ಕಲಾಕುಂಭ ಸಾಂಸ್ಕೃತಿಕ ವೇದಿಕೆ,ಕುಳಾಯಿ(ಸಂಘಟನೆ) ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಮತ್ತು ರವಿ ರೈ ಕಳಸ(ಚಲನಚಿತ್ರ), ಹೊನ್ನಪ್ಪ ಪೂಜಾರಿ (ಸಂಘಟನೆ), ಡಾ|ರಾಮಕೃಷ್ಣ ಎಸ್.(ಸಮಾಜ ಸೇವೆ), ಎಸ್.ಪಿ.ಸರಪಾಡಿ(ಕಲೆ), ಕು| ಅನ್ವಿಷಾ ವಾಮಂಜೂರು(ಸಾಂಸ್ಕೃತಿಕ), ಕು. ಕಾವ್ಯಶ್ರೀ ಜೋಡುಕಲ್ಲು(ಯೋಗ), ಪುರಂದರ ಹೆಗ್ಡೆ( ಸರಕಾರಿ ಸೇವೆ), ಸಚಿನ್ ಅತ್ತಾಜೆ(ಕಲೆ) ರಾಮ ಪಿ.ಸಾಲ್ಯಾನ್(ಶಿಕ್ಷಣ) ಅವರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿ ನೀಡಲಾಯಿತು.

More from the blog

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...

ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ

ಮಂಗಳೂರು ಹಾಗೂ ಬಿಸಿರೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ ಸೋಮವಾರ ಬಿಸಿರೋಡ್ ಶಾಖೆಯಲ್ಲಿ ನಡೆಯಿತು. ಟೀಚರ್ಸ್ ಟ್ರೈನಿಂಗ್ ವಿಭಾಗದ ವಿದ್ಯಾರ್ಥಿನಿಯರಿಂದ ಪ್ರಸ್ತುತ ವರ್ಷದಲ್ಲಿ ತಯಾರಿಸಿದ ಎಲ್ಲಾ ಕಲಿಕಾ...