ಬಂಟ್ವಾಳ: ಬಂಟ್ವಾಳ ಉಪವಿಭಾಗ ದ ಸಹಾಯಕ ಪೋಲೀಸ್ ಅಧೀಕ್ಷಕರಾಗಿ ಸೈದುಲು ಅಡಾವತ್ ಅವರು ನಿನ್ನೆ ಪ್ರಭಾರವಹಿಸಿದ್ದಾರೆ.
ಎ.ಎಸ್. ಪಿ.ಋಷಿಕೇಶ್ ಭಗವಾನ್ ಸೋನಾವಣೆ ಅವರು ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳ ದ ಪೋಲೀಸ್ ಅಧೀಕ್ಷರಾಗಿ ಮುಂಬಡ್ತಿಹೊಂದಿ ಬೆಂಗಳೂರಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ತೆರವಾದ ಬಂಟ್ವಾಳ ಎ.ಎಸ್.ಪಿ ಯಾಗಿ ಸೈದುಲ್ ಅಡಾವತ್ ಅವರು ಪ್ರಭಾರವಹಿಸಿಕೊಂಡಿದ್ದಾರೆ.


ಮೂಲತಃ ತೆಲಂಗಾಣ ದವರಾದ ಇವರು 2016 ರಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕರ್ನಾಟಕ ಕೇಡರ್ ನ ಐ.ಪಿ.ಎಸ್.ಅಧಿಕಾರಿಯಾಗಿ ನೇಮಕ ಗೊಂಡಿರುತ್ತಾರೆ.
ಇವರು ಈ ಬ್ಯಾಚ್ ನ ಉನ್ನತ ಶ್ರೇಣಿಯ ಲ್ಲಿ ತೇರ್ಗಡೆ ಹೊಂದಿದವರು.
ಬಳಿಕ ಶಿವಮೊಗ್ಗ ಜಿಲ್ಲೆಯ ಲ್ಲಿ ಪ್ರಾಯೋಗಿಕ ತರಬೇತಿ ಪಡೆದು ಪ್ರಸ್ತುತ ದ.ಕ.ಜಿಲ್ಲೆಯ ಬಂಟ್ವಾಳ ಉಪವಿಭಾಗದ ಸಹಾಯಕ ಪೋಲೀಸ್ ಅಧೀಕ್ಷಕರಾಗಿ ಪ್ರಭಾರವಹಿಸಿದ್ದಾರೆ.
ಹಾರ್ಟ್ ಲಿ ವೆಲ್ ಕಮ್ ಸಾರ್ ನಿಮಗೆ..
ಎ.ಎಸ್.ಪಿ.ಅವರು ಅಧಿಕಾರ ಸ್ವೀಕಾರ ದ ಸಂದರ್ಭದಲ್ಲಿ ಬಂಟ್ವಾಳ ವ್ರತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬೆಳ್ತಂಗಡಿ ವ್ತತ್ತ ನಿರೀಕ್ಷಕ ಸಂದೇಶ್ ಜಿ. ಬಂಟ್ವಾಳ ವ್ರತ್ತ ಹಾಗೂ ಬೆಳ್ತಂಗಡಿ ವ್ರತ್ತ ದ ಪೋಲೀಸ್ ಉಪನಿರೀಕ್ಷಕರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here