ಬಂಟ್ವಾಳ: ಬಂಟ್ವಾಳ ಮೂಡ ಗ್ರಾಮದ ಗ್ರಾಮಕರಣೀಕ ಕರ್ತವ್ಯ ಲೋಪ ಮಾಡುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ ಮೂಡ ಗ್ರಾಮದ ನಾಗರೀಕರು ಈತನನ್ನು ಇಲ್ಲಿಂದ ಬೇರೆ ‌ಕಡೆಗೆ ವರ್ಗಾವಣೆ ಮಾಡಿ ಎಂದು ಒತ್ತಾಯಿಸಿ ಶಾಸಕ ರಾಜೇಶ್ ನಾಯಕ್ ಮತ್ತು ಬಂಟ್ವಾಳ ತಹಶೀಲ್ದಾರ ಪುರಂದರ ಹೆಗ್ಡೆ ಅವರಿಗೆ ಮನವಿ ನೀಡಿದ್ದಾರೆ.


ಬಂಟ್ವಾಳ ಮೂಡ ಗ್ರಾಮದಲ್ಲಿ ಪ್ರಸ್ತುತ ಗ್ರಾಮ ಕರಣೀಕರಾಗಿ ಕೆಲಸ ಮಾಡುತ್ತಿರುವ ಶಿವಾನಂದ ಎಂಬವರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೆ ಗ್ರಾಮಸ್ಥರ ಕಡತವನ್ನು ಬಿಸಾಡಿ ಅವಮಾನ ಮಾಡುವ ಜೊತೆಗೆ ಸಾರ್ವಜನಿಕ ರಿಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ.‌
ಜೊತೆಗೆ ಸಾರ್ವಜನಿಕರಲ್ಲಿ ಉಡಾಪೆ ಹಾಗೂ ದರ್ಪದಲ್ಲಿ ಮಾತನಾಡುತ್ತಿದ್ದಾರೆ, ಜನರ ಕೆಲಸ ಮಾಡದೆ ನಿರ್ಲಕ್ಷ್ಯ ‌ಮಾಡುತ್ತಿದ್ದಾರೆ , ಈತನ ವರ್ತನೆಯಿಂದ ಜನ ರೋಸಿ ಹೋಗಿದ್ದಾರೆ. ಹಾಗಾಗಿ ಕೂಡಲೇ ಈತನನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಕುರಿತು ತಾಲೂಕು ಕಛೇರಿ ಮುಂಭಾಗದಲ್ಲಿ ಧರಣಿ ನಡೆಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಸಂಧರ್ಭದಲ್ಲಿ ಸ್ಥಳೀಯರದ ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಮಾಜಿ ಪುರಸಭಾ ಸದಸ್ಯ ಗೋಪಾಲ ಸುವರ್ಣ, ಕಲೀಲ್ ಬಿ.ಸಿ.ರೋಡ್, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here