Monday, September 25, 2023
More

  ಪ್ರಾಮಾಣಿಕವಾಗಿ ಬದ್ಧತೆಯಿಂದ ಸೇವೆ ಮಾಡಬೇಕು: ಆರ್.ಯನ್. ಪೂವಣಿ

  Must read

  ಉಜಿರೆ: ಸಮಯ ಪಾಲನೆಯೊಂದಿಗೆ ಪ್ರಾಮಾಣಿಕವಾಗಿ ಬದ್ಧತೆಯಿಂದ ಸೇವೆ ಮಾಡಿದಲ್ಲಿ ಯಶಸ್ಸು ಪಡೆಯಬಹುದು ಎಂದು ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಯನ್. ಪೂವಣಿ ಹೇಳಿದರು.
  ಅವರು ಗುರುವಾರ ಉಜಿರೆಯಲ್ಲಿ ರುಡ್‌ಸೆಟ್ ಸಂಸ್ಥೆಯಲ್ಲಿ ದ್ವಿಚಕ್ರ ವಾಹನ ದುರಸ್ತಿ ಬಗ್ಗೆ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

    
  ಸಂಸ್ಥೆಯ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು ಸಕಾಲಿಕ ಮಾರ್ಗದರ್ಶನ ಪಡೆಯಬಹುದು ಎಂದು ಹೇಳಿ ಉಜ್ವಲ ಭವಿಷ್ಯವನ್ನು ಹಾರೈಸಿದರು.
  ಹಾಸನದ ರಘುನಂದನ್, ರಮೇಶ್ ಮತ್ತು ಅರಸೀಕೆರೆಯ ಮನುಕುಮಾರ್‌ ತರಬೇತಿಯ ಅನುಭವ ವಿವರಿಸಿದರು.
  ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ವಿನಯ್‌ಕುಮಾರ್ ಉಪಸ್ಥಿತರಿದ್ದರು.
  ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಸ್ವಾಗತಿಸಿದರು. ಉಪನ್ಯಾಸಕಿ ಅನಸೂಯ ಧನ್ಯವಾದವಿತ್ತರು.

  More articles

  LEAVE A REPLY

  Please enter your comment!
  Please enter your name here

  Latest article