ವಿಟ್ಲ: ಸುರಿಬೈಲು ದಾರುಲ್ ಅಶ್ ಅರಿಯ್ಯದ ವತಿಯಿಂದ ನಡೆದ ಶೈಖುನಾ ಸುರಿಬೈಲು ಉಸ್ತಾದ್ ಅವರ 17ನೇ ಆಂಡ್ ನೇರ್ಚೆ ಹಾಗೂ ಪಿ.ಎ ಉಸ್ತಾದ್ ಅವರ ಅನುಸ್ಮರಣೆ ಸಮಾರೋಪ ಹಾಗೂ ಸೌಹಾರ್ದ ಸಂಗಮ ನಡೆಯಿತು.
ಅಬ್ದುಲ್ ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ದುವಾಃ ಆಶೀರ್ವಚನ ನೀಡಿ ಮಾತನಾಡಿ ಉಲಮಾಗಳನ್ನು ನೆನೆಪಿಸುವ ಕಾರ್ಯಗಳು ಲೋಕದ ಎಲ್ಲಾ ಕಡೆಗಳಲ್ಲಿಯೂ ನಡೆಯುತ್ತಿದೆ. ಉಲಮಾ ಉಮರಾಗಳನ್ನು ಗೌರವಿಸಬೇಕು. ಪ್ರವಾದಿ ಅವರ ಜೀವನ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸಬೇಕು ಇದರಿಂದ ಜೀವನದಲ್ಲಿ ಯಶಸ್ಸು ಲಭಿಸುತ್ತದೆ ಎಂದು ಹೇಳಿದರು.
ಮುಖ್ಯ ಪ್ರಭಾಷಣ ಮಾಡಿದ ಮೌಲಾನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಅವರು ಮಾತನಾಡಿ ನಾವು ಸತ್ಯದ ಕಡೆಯಲ್ಲಿ ನಿಲ್ಲಬೇಕು. ಸುನ್ನತ್ ಜಮಾಅತ್ನಡಿಯಲ್ಲಿ ಕಾರ್ಯನಿರ್ವಹಿಸಬೇಕು. ತಪ್ಪು ಮಾಡಿದ ವ್ಯಕ್ತಿಗೆ ಬುದ್ಧಿ ಹೇಳಿ ಅವರನ್ನು ಸರಿ ದಾರಿಗೆ ತರಬೇಕು. ಇದು ಮಹತ್ವದ ಕಾರ್ಯವಾಗಿದೆ. ಪ್ರವಾದಿ ಅವರು ನಮಗೆ ಉತ್ತಮ ಸ್ವಭಾವದ ವ್ಯಕ್ತಿತ್ವ ಕಳಿಸಿಕೊಟ್ಟಿದ್ದಾರೆ. ಅದನ್ನು ಸಮಾಜಕ್ಕೆ ತಿಳಿಸುವ ಕಾರ್ಯ ನಡೆಯಬೇಕು. ಪ್ರವಾದಿ ಅವರ ಜೀವನ ಆದರ್ಶವನ್ನು ಪಾಲನೆ ಮಾಡಬೇಕು. ಇದರಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಮಹ್ಮೂದುಲ್ ಫೈಝಿ ವಾಲೆಮುಂಡೋವ್ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಅಶ್ರಫ್ ತಂಙಳ್ ಆದೂರು ಕಾರ್ಯಕ್ರಮ ಉದ್ಘಾಟಿಸಿದರು. ಸಂಜೆ ಬೃಹತ್ ಸಂದಲ್ ಮೆರವಣಿಗೆ ನಡೆಯಿತು. ಮಖ್ಬರ ಝಿಯಾರತ್, ಜಲಾಲಿಯ್ಯ ರಾತೀಬ್, ಗ್ಯ್ರಾಂಡ್ ಬುರ್ದಾ ಮಜ್ಲಿಸ್, ಸಮಾರೋಪ ಕಾರ್ಯಕ್ರಮ ನಡೆಯಿತು.
ಪಿ.ಎ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮದಲ್ಲಿ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್, ಸಯ್ಯಿದ್ ಇಬ್ರಾಹಿಂ ಪೂಕುಂಞ ತಂಙಳ್ ಉದ್ಯಾವರ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಸಯ್ಯದ್ ಜಲಾಲುದ್ದೀನ್ ತಂಙಳ್ ಮಳ್ಹರ್, ಸಯ್ಯದ್ ಶಿಹಾಬುದ್ದೀನ್ ತಂಙಳ್ ತಲಕ್ಕಿ, ಸಯ್ಯದ್ ಖಾಸಿಂ ತಂಙಳ್ ಸಾಲೆತ್ತೂರು, ಶೈಖುನಾ ಶರಫುಲ್ ಉಲಮಾ ಮಂಜನಾಡಿ ಉಸ್ತಾದ್, ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್, ಶೈಖುನಾ ಮಂಚಿ ಉಸ್ತಾದ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಬೋಳಂತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಹಾಸ ರೈ, ಸ್ವಾಗತ ಸಮಿತಿ ಅಧ್ಯಕ್ಷ ಎನ್ ಸುಲೈಮಾನ್ ಹಾಜಿ ನಾರ್ಶ, ಸಂಸ್ಥೆಯ ಉಪಾಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ ಬೊಳ್ಮಾರ್, ವ್ಯವಸ್ಥಾಪಕ ಮಹಮ್ಮದಾಲಿ ಸಖಾಫಿ, ಎಸ್.ಎಂ.ಎ ರಾಜ್ಯ ಉಪಾಧ್ಯಕ್ಷ ಹಾಜಿ ಕೆ.ಎ ಹಮೀದ್ ಕೊಡಂಗಾಯಿ, ಕೋಶಾಧಿಕಾರಿ ಸಿ.ಎಚ್ ಯೂಸುಫ್ ಮದನಿ, ಕನ್ವೀನರ್ ಅಬ್ದುಲ್ಲ ಮುಸ್ಲಿಯಾರ್ ಬೊಳ್ಮಾರ್, ಸಿ.ಚ್ ಅಬ್ದುಲ್ ರಶೀದ್ ಹನೀಫಿ, ಸಿ.ಎಚ್ ಅಬೂಬಕ್ಕರ್ ನಾರ್ಶ ಮೊದಲಾದವರು ಉಪಸ್ಥಿತರಿದ್ದರು.
ಪೋಟೊ-6ವಿಟಿಎಲ್-ಸುರಿಬೈಲ್

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here