ವಿಟ್ಲ: ವಿಟ್ಲ ಶ್ರೀ ಪಾರ್ಥಂಪಾಡಿ(ಜಠಾಧಾರಿ) ದೈವಸ್ಥಾನದ ಬ್ರಹ್ಮಕಲಶೋತ್ಸವ ಫೆ. 6 ಮತ್ತು 7 ರಂದು ನಡೆಯಲಿದ್ದು, ಇದರ ಪ್ರಯುಕ್ತ ಸ್ಥಳೀಯ ಸಂಘ-ಸಂಸ್ಥೆ ಕಾರ್‍ಯಕರ್ತರಿಂದ, ಸ್ಥಳೀಯ ಯುವಕರಿಂದ, ಮಹಿಳೆಯರಿಂದ, ಮಕ್ಕಳಿಂದ ಶ್ರಮ ಸೇವೆ ಭಾನುವಾರ ನಡೆಯಿತು.
ದೈವಸ್ಥಾನದ ಸುತ್ತಲೂ ಕುಡಿಯುವ ನೀರಿನ ಬಾವಿಯ ಸ್ವಚ್ಛತೆ, ನಾಗನ ಕಟ್ಟೆಯ ಆವರಣಗೋಡೆ ಕಾಮಗಾರಿ, ಸುತ್ತಲೂ ಗಿಡಗಂಟಿಗಳನ್ನು ತೆರವುಗೊಳಿಸಲಾಯಿತು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಕಾಯಾಧ್ಯಕ್ಷ ಬಾಬು ಕೆ.ವಿ, ಉಪಾಧ್ಯಕ್ಷ ಶ್ರೀಕಂಠ ವರ್ಮ, ಲಕ್ಷ್ಮಣ ಆರ್.ಎಸ್, ಶ್ರೀ ಕಾಶಿ ಯುವಕ ಮಂಡಲದ ಅಧ್ಯಕ್ಷ ಕೇಶವ ವಿ.ಕೆ, ಮಹಿಳಾ ಮಂಡಲದ ಅಧ್ಯಕ್ಷೆ ನೀಲಾ ಭಟ್, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಮೊದಲಾದವರು ನೇತೃತ್ವ ವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here