ಕೇರಳದ ಕಮ್ಯುನಿಷ್ಟ್ ಸರಕಾರವು ಯುವತಿಯರಿಗೆ ಪ್ರವೇಶಿಸಲು ಸಹಕರಸಿ ಶಬರಿಮಲೆ ಕ್ಷೇತ್ರದ ಪಾವಿತ್ರ್ಯಕ್ಕೆಧಕ್ಕೆ ತಂದಿರುವ ಕ್ರಮವನ್ನು ಹಿಂದುಜಾಗರಣ ವೇದಿಕೆ ಖಂಡಿಸುತ್ತಿದೆ

ನೂರಾರು ವರ್ಷಗಳ ಹಿಂದೆ ಶಬರಿಮಲೆ ಕ್ಷೇತ್ರದಲ್ಲಿದ್ದ ಶಾಸ್ತಾರ ದೇವಸ್ಥಾನವನ್ನು ಕೆಡವಿ ಅರ್ಚಕರನ್ನು ಕೊಂದು ಚಿನ್ನದ ಧ್ವಜಸ್ಥಂಭವನ್ನು ದರೋಡೆಗೈದ ಶಬರಿಮಲೆಕಾಡಿನಲ್ಲಿ ವಾಸವಾಗಿದ್ದ ಕಾಡುಗಳ್ಳ ಉದಯವನ್ ಧಾಳಿಯಂತೆ ಇಂದು ಪ್ರಜಾತಂತ್ರ ಮೂಲಕ ಅಧಿಕಾರಕ್ಕೆ ಬಂದುಅದೇ ಪ್ರಜೆಗಳ ನಂಬಿಕೆ, ಭಾವನೆ, ಶ್ರದ್ಧೆಯ ಮೇಲೆ ಕ್ರೂರ ಧಾಳಿ ನಡೆಸಿದ್ದಾರೆ ಕೇರಳದ ಕಮ್ಯುನಿಷ್ಟ್‌ಮುಖ್ಯಮಂತ್ರಿ ಪಿಣರಾಯಿ ವಿಜಯನ್. ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಕಳೆದ 800 ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯಕ್ಕೆ ಕೊಳ್ಳಿ ಇಟ್ಟಿದ್ದಾರೆ. 10 ರಿಂದ 50ರ ವಯೋಮಾನದ ಮಹಿಳೆಯರಿಗೆ ನಿಷೇಧವಿರುವ ಶಬರಿಮಲೆಗೆ ಬಲಾತ್ಕಾರವಾಗಿ ಸ್ತ್ರೀಯರಿಬ್ಬರನ್ನು ಹಿಂಬಾಗಿಲಿಂದ ನುಗ್ಗಿಸಿದ್ದಾರೆ. ಇದಕ್ಕೆ ಸುಪ್ರಿಂಕೋರ್ಟಿನತೀರ್ಪಿನ ಅನುಷ್ಠಾನದ ಬದ್ಧತೆಯನ್ನು ಮುಂದಿಡುತ್ತಿದ್ದಾರೆ. ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಬಾರಿ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿದ ಪ್ರಜಾತಂತ್ರ ಮತ್ತು ಸಂವಿಧಾನ ಮತ್ತುಕಾನೂನನ್ನು ಅನೇಕ ಬಾರಿ ಧಿಕ್ಕರಿಸಿದ ಕಮ್ಯುನಿಷ್ಟರು ಇದೀಗ ಕೋರ್ಟುತೀರ್ಪಿನಜಪ ಮಾಡುತ್ತಿದ್ದಾರೆ. ದೇವರಲ್ಲಿ ಶ್ವಾಸವೇ ಇಲ್ಲದ ಆಧುನಿಕ ರಾಕ್ಷಸರಾದ ಕಮ್ಯುನಿಷ್ಟರು ಶಬರಿಮಲೆ ವಿಷಯದಲ್ಲಿ ಕೇರಳದ ಜನತೆಯನ್ನು ವಂಚಿಸುತ್ತಿದ್ದಾರೆ. 41 ದಿವಸ ವೃತ ಮಾಡಿ, ಅತ್ಯಂತ ಪವಿತ್ರವಾದ ಇರುಮುಡಿ ಹೊತ್ತು ಹೋಗುವ ಶ್ರೀ ಅಯ್ಯಪ್ಪ ಸ್ವಾಮಿ ವೃತಧಾರಿಗಳ ಶ್ರದ್ಧಾಕೇಂದ್ರವಾದ ಶಬರಿಮಲೆ ಕ್ಷೇತ್ರದ ಸಂಪ್ರದಾಯವನ್ನೇ ಧ್ವಂಸಗೈಯುವ ಹೀನ ಕೃತ್ಯ ನಡೆಸಿದ್ದಾರೆ. ಸುಪ್ರೀಂಕೋರ್ಟಿನ ತೀರ್ಪಿನ ಪಾಲನೆಗೆ ಕಾಲಾವಕಾಶವನ್ನು ಕೇಳಿರುವ ಸರಕಾರದ ಅಧೀನದಲ್ಲಿರುವ ದೇವಸ್ವಂಬೋರ್ಡಿನ ಕೇಳಿಕೆಗೆ ಕೋರ್ಟುತೀರ್ಪು ನೀಡುವ ಮುನ್ನವೇ ಶಬರಿಮಲೆಗೆ ಮಹಿಳೆಯರನ್ನು ನುಗ್ಗಿಸುವ ಕೃತ್ಯಕ್ಕೆ ಸರಕಾರಕೈಯಿಕ್ಕಿದೆ. ಇಬ್ಬರು ನಾಸ್ತಿಕ ಮಹಿಳೆಯರನ್ನು ಪೋಲೀಸರ ಸರ್ಪಗಾವಲಿನಲ್ಲಿ ಹಿಂಬಾಗಿಲಿನಿಂದ ನುಗ್ಗಿಸುವ ಹೀನ ಕೃತ್ಯದಲ್ಲಿ ಪಿಣರಾಯಿ ಮತ್ತುತಂಡ ಯಶಸ್ವಿಯಾಗಿದೆ, ಈಕೃತ್ಯವನ್ನು ಹಿಂ.ಜಾ.ವೇ ಖಂಡಿಸುತ್ತಿದೆ. ದೇವರಲ್ಲಿ ವಿಶ್ವಾಸವಿರುವ ಎಲ್ಲಾ ನಂಬಿಕೆಯ ಜನತೆಯ (ಹಿಂದು-ಮುಸ್ಲಿಂ-ಕ್ರೈಸ್ತ) ಭಾವನೆ, ನಂಬಿಕೆ, ಶೃದ್ಧೆ, ಸಂಪ್ರದಾಯ, ರೀತಿ-ನೀತಿಗಳನ್ನು ಧ್ವಂಸ ಮಾಡುವುದೇ ಕಮ್ಯುನಿಷ್ಟರ ಮೂಲಭೂತ ಚಿಂತನೆ ಎಂಬುದು ಮತ್ತೆ ಸಾಬೀತಾಗಿದೆ. ಧಾರ್ಮಿಕ-ಆಧ್ಯಾತ್ಮಿಕ ಕ್ಷೇತ್ರವಾದ ಶಬರಿಮಲೆಯನ್ನು ರಜಾಂಗಣವನ್ನಾಗಿಸಿದ ಆಸ್ತಿಕ ಭಕ್ತರ ಭಾವನೆಗಳ ಮೇಲೆ ಧಾಳಿ ನಡೆಸಿದ ಕೇರಳದ ಕಮ್ಯುನಿಷ್ಟ್ ಸರಕಾರದಕೃತ್ಯದ ವಿರುದ್ಧ ಜನರ ಭಾವನೆ-ವ- ಸಂಪ್ರದಾಯಗಳ ಉಳಿವಿಗಾಗಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕೆಂದು ಹಿಂ.ಜಾ.ವೇ. ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ರವಿರಾಜ ಆಗ್ರಹಿಸುತ್ತಿದ್ದಾರೆ.